ETV Bharat / sports

3ನೇ ಟೆಸ್ಟ್: ಸ್ಟೀವ್​ ಸ್ಮಿತ್‌ ಹೆಗಲಿಗೆ ಆಸ್ಟ್ರೇಲಿಯಾ ನಾಯಕತ್ವ ಹೊಣೆ - ETV Bharath Kannada news

ತಾಯಿ ಅನಾರೋಗ್ಯದಿಂದ ಬಳಲುತ್ತಿರುವ ಕಾರಣಕ್ಕೆ ಮೂರನೇ ಟೆಸ್ಟ್​ ಪಂದ್ಯದಿಂದ ಪ್ಯಾಟ್ ಕಮಿನ್ಸ್‌ ಹೊರಗುಳಿಯಲಿದ್ದಾರೆ.

Steve Smith
ಸ್ಟೀವ್​ ಸ್ಮಿತ್​
author img

By

Published : Feb 24, 2023, 2:58 PM IST

ನವದೆಹಲಿ: ಇಂದೋರ್‌ನಲ್ಲಿ ಮಾರ್ಚ್ 1 ರಿಂದ ಪ್ರಾರಂಭವಾಗುವ ಭಾರತದೆದುರಿನ ಮೂರನೇ ಟೆಸ್ಟ್ ಪಂದ್ಯಕ್ಕೆ ಪ್ಯಾಟ್ ಕಮಿನ್ಸ್‌ ಅಲಭ್ಯರಾಗಿದ್ದು, ಸ್ಟೀವ್ ಸ್ಮಿತ್‌ಗೆ ಕ್ಯಾಪ್ಟನ್ ಜವಾಬ್ದಾರಿ ನೀಡಲಾಗಿದೆ. ತಾಯಿ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಎರಡನೇ ಟೆಸ್ಟ್ ಪಂದ್ಯದ ನಂತರ ಕಮಿನ್ಸ್ ಸಿಡ್ನಿಗೆ ತೆರಳಿದ್ದರು. "ನಾನು ಕುಟುಂಬದೊಂದಿಗೆ ಇರಬೇಕಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ನನ್ನ ಸಹ ಆಟಗಾರರಿಂದ ನನಗೆ ದೊರೆತಿರುವ ಅಗಾಧ ಬೆಂಬಲಕ್ಕೆ ಧನ್ಯವಾದ ಹೇಳುತ್ತೇನೆ" ಎಂದು ಕಮ್ಮಿನ್ಸ್ ಹೇಳಿದ್ದಾರೆ.

ಇನ್ನೊಂದೆಡೆ, 29ರ ಹರೆಯದ ವೇಗಿಯ ಅನುಪಸ್ಥಿತಿ ಆಸ್ಟ್ರೇಲಿಯಾ ತಂಡದ ತಲೆನೋವು ಹೆಚ್ಚಿಸಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ತಂಡಕ್ಕೆ ಗಾಯದ ಸಮಸ್ಯೆಯೂ ಕಾಡುತ್ತಿದೆ. ಇದಕ್ಕೂ ಮುನ್ನ ವೇಗಿ ಜೋಶ್ ಹೇಜಲ್‌ವುಡ್ ಮತ್ತು ಆರಂಭಿಕ ಡೇವಿಡ್ ವಾರ್ನರ್ ಗಾಯದಿಂದಾಗಿ ತವರಿಗೆ ಮರಳಿದ್ದರು. ಮಿಚೆಲ್ ಸ್ಟಾರ್ಕ್ ಅಥವಾ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ತಂಡ ಸೇರುವ ನಿರೀಕ್ಷೆ ಇದೆ.

ಬಾಲ್​ ಟ್ಯಾಂಪರಿಂಗ್​ ಆರೋಪದಿಂದಾಗಿ ಸ್ಟೀವ್​ ಸ್ಮಿತ್​ ನಾಯಕತ್ವ ಕಳೆದುಕೊಂಡಿದ್ದರು. 2014 ಮತ್ತು 2018 ರ ನಡುವೆ 34 ಟೆಸ್ಟ್‌ಗಳಲ್ಲಿ ಇವರು ನಾಯಕತ್ವ ನಿಭಾಯಿಸಿದ್ದಾರೆ. 2017ರಲ್ಲಿ ಆಸ್ಟ್ರೇಲಿಯಾದ ತೀರಾ ಇತ್ತೀಚಿನ ಟೆಸ್ಟ್ ಪ್ರವಾಸವೂ ಒಳಗೊಂಡಂತೆ ಸ್ಮಿತ್ ಮೂರು ಶತಕ ಗಳಿಸುವ ಮೂಲಕ ಉತ್ತಮ ಬ್ಯಾಟಿಂಗ್ ಲಯದಲ್ಲಿದ್ದಾರೆ. ಆದರೆ, ಪ್ರಸ್ತುತ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಅವರು ನಾಲ್ಕು ಇನ್ನಿಂಗ್ಸ್‌ಗಳಲ್ಲಿ 23.66 ಸರಾಸರಿಯಲ್ಲಿ 71 ರನ್ ಗಳಿಸಿದ್ದಾರೆ.

ಇದನ್ನೂ ಓದಿ: 'ನಾನು ಅರ್ಹನಲ್ಲ ಎನಿಸಿದರೆ ತಂಡದಿಂದ ಕೈ ಬಿಡಲಿ': ಡೇವಿಡ್​ ವಾರ್ನರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.