ಧರ್ಮಶಾಲಾ: ಭಾರತ ತಂಡದ ಯುವ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಗಾಯದ ಕಾರಣ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟಿ-20 ಸರಣಿಯಿಂದ ಹೊರಬಿದ್ದಿದ್ದಾರೆ.
ಋತುರಾಜ್ ಶ್ರೀಲಂಕಾ ವಿರುದ್ಧ ಲಖನೌದಲ್ಲಿ ಮೊದಲ ಪಂದ್ಯದ ಆರಂಭವಾಗುವ ಕೆಲವೇ ಗಂಟೆಗಳಲ್ಲಿ ಮಣಿಕಟ್ಟು ನೋವು ಎಂದು ತಿಳಿಸಿದ್ದರು. ನಂತರ ಅವರು ಬಿಸಿಸಿಐ ವೈದ್ಯಕೀಯ ಮಂಡಳಿಯಿಂದ ಪರೀಕ್ಷೆಗೆ ಒಳಪಟ್ಟಿದ್ದರು.
ನಂತರ ತಜ್ಞರ ಸಮಾಲೋಚನೆ ನಡೆಸಿ MRI ಸ್ಕ್ಯಾನ್ ನಡೆಸಲಾಯಿತು. ಇದೀಗ ಋತುರಾಜ್ ತಮ್ಮ ಗಾಯದ ಹೆಚ್ಚಿನ ನಿರ್ವಹಣೆಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಹೋಗಲಿದ್ದಾರೆ ಎಂದು ಬಿಸಿಸಿಐ ಹೇಳಿಕೆ ಬಿಡುಗಡೆ ಮಾಡಿದೆ.
-
NEWS - Ruturaj Gaikwad ruled out of T20I series.
— BCCI (@BCCI) February 26, 2022 " class="align-text-top noRightClick twitterSection" data="
More details here - https://t.co/wHy55tYKfx @Paytm #INDvSL pic.twitter.com/9WM1Iox0ag
">NEWS - Ruturaj Gaikwad ruled out of T20I series.
— BCCI (@BCCI) February 26, 2022
More details here - https://t.co/wHy55tYKfx @Paytm #INDvSL pic.twitter.com/9WM1Iox0agNEWS - Ruturaj Gaikwad ruled out of T20I series.
— BCCI (@BCCI) February 26, 2022
More details here - https://t.co/wHy55tYKfx @Paytm #INDvSL pic.twitter.com/9WM1Iox0ag
ಮಯಾಂಕ್ ಅಗರ್ವಾಲ್ಗೆ ಬುಲಾವ್: ಉಳಿದೆರುಡು ಪಂದ್ಯಗಳಿಗೆ ಗಾಯಕ್ವಾಡ್ ಅವರಿಂದ ತೆರವಾಗಿರುವ ಆರಂಭಿಕ ಸ್ಥಾನಕ್ಕೆ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರನ್ನು ಸೀನಿಯರ್ ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ಕರ್ನಾಟಕ ಬ್ಯಾಟರ್ ಧರ್ಮಶಾಲಾದಲ್ಲಿರುವ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ.
ರುತುರಾಜ್ ವಿಂಡೀಸ್ ವಿರುದ್ಧದ ಕೊನೆಯ ಟಿ-20 ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದರು, ಅವರನ್ನು ಈ ಸರಣಿಯಲ್ಲಿ ಸಂಪೂರ್ಣವಾಗಿ ಆಡಿಸುವುದಕ್ಕೆ ಮ್ಯಾನೇಜ್ಮೆಂಟ್ ಬಯಸಿತ್ತಾದರೂ ದುರಾದೃಷ್ಟವಶಾತ್ ಸರಣಿಯಿಂದಲೇ ಹೊರಬಿದ್ದಿದ್ದಾರೆ.
2ನೇ ಮತ್ತು 3ನೇ ಟಿ20 ಪಂದ್ಯಕ್ಕೆ ಭಾರತದ T-20 ತಂಡ: ರೋಹಿತ್ ಶರ್ಮಾ (ನಾಯಕ), ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್ (ವಿಕೆಟ್-ಕೀಪರ್), ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಲ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಆವೇಶ್ ಖಾನ್, ಮಯಾಂಕ್ ಅಗರ್ವಾಲ್
ಇದನ್ನೂ ಓದಿ:ರಣಜಿ ಟ್ರೋಪಿ: ಮಗಳ ಅಂತ್ಯಕ್ರಿಯೆ ಮುಗಿಸಿ ಬಂದು ಶತಕ ಬಾರಿಸಿದ ಬರೋಡಾ ಕ್ರಿಕೆಟಿಗ