ದುಬೈ(ಯುಎಇ): 2018ರಲ್ಲಿ ನಡೆದ ನಿದಾಸ್ ಕ್ರಿಕೆಟ್ ಟ್ರೋಫಿಯ ಅಂತಿಮ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಶ್ರೀಲಂಕಾ ಸೋಲು ಕಂಡಿತ್ತು. ಈ ಸಂದರ್ಭದಲ್ಲಿ ಗೆಲುವಿನ ಅತಿರೇಕದಲ್ಲಿ ಬಾಂಗ್ಲಾ ತಂಡದ ಆಟಗಾರರು ನಾಗಿಣಿ ಡ್ಯಾನ್ಸ್ ಮೂಲಕ ಸಿಂಹಳೀಯರನ್ನು ಅವಮಾನಿಸುವ ರೀತಿಯಲ್ಲಿ ಸಂಭ್ರಮಿಸಿದ್ದರು. ಇದೀಗ ಅದಕ್ಕೆ ಸೇಡು ತೀರಿಸಿಕೊಳ್ಳುವಲ್ಲಿ ಲಂಕಾ ಕ್ರಿಕೆಟಿಗರು ಯಶಸ್ವಿಯಾಗಿದ್ದಾರೆ.
ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಶ್ರೀಲಂಕಾ 2 ವಿಕೆಟ್ಗಳ ರೋಚಕ ಗೆಲುವು ಕಂಡಿತು. ವಿಜಯ ಸಾಧಿಸುತ್ತಿದ್ದಂತೆ ಸಂಭ್ರಮಿಸಿ ಲಂಕನ್ನರು ನಾಗಿಣಿ ಡ್ಯಾನ್ಸ್ ಮಾಡಿ ಪ್ರತೀಕಾರ ತೀರಿಸಿದರು.
-
Happy For #Srilanka , Nagin Dance Time#AsiaCupT20 #Cricket #Banvsl #Bangladesh pic.twitter.com/FOSofYopAk
— Proud भारतीय 🇮🇳 (@irahulchitti) September 1, 2022 " class="align-text-top noRightClick twitterSection" data="
">Happy For #Srilanka , Nagin Dance Time#AsiaCupT20 #Cricket #Banvsl #Bangladesh pic.twitter.com/FOSofYopAk
— Proud भारतीय 🇮🇳 (@irahulchitti) September 1, 2022Happy For #Srilanka , Nagin Dance Time#AsiaCupT20 #Cricket #Banvsl #Bangladesh pic.twitter.com/FOSofYopAk
— Proud भारतीय 🇮🇳 (@irahulchitti) September 1, 2022
ಏಷ್ಯಾ ಕಪ್ನ ಲೀಗ್ ಹಂತದ ಪೈಪೋಟಿಯ ಪಂದ್ಯದಲ್ಲಿ ದಾಖಲೆಯ 183 ರನ್ ಚೇಸ್ ಮಾಡಿರುವ ಶ್ರೀಲಂಕಾ ಕೊನೆಯ ಓವರ್ನಲ್ಲಿ ಗೆಲುವು ಸಾಧಿಸಿತು.
ಇದನ್ನೂ ಓದಿ: ರೋಚಕ ಪಂದ್ಯದಲ್ಲಿ ಗೆದ್ದು 'ಸೂಪರ್ 4'ಗೆ ಲಂಕಾ ಲಗ್ಗೆ: ಏಷ್ಯಾ ಕಪ್ನಿಂದ ಹೊರಬಿದ್ದ ಬಾಂಗ್ಲಾ
ನಾಲ್ಕು ವರ್ಷದ ಸೇಡಿಗೆ ಪ್ರತೀಕಾರ: 2018ರಲ್ಲಿ ನಿದಾಸ್ ಕ್ರಿಕೆಟ್ ಟ್ರೋಫಿ ನಡೆದಿತ್ತು. ಈ ಸರಣಿಯಲ್ಲಿ ಅಂತಿಮ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ಗೆಲುವು ಪಡೆದಿತ್ತು. ಬಾಂಗ್ಲಾ ಆಟಗಾರರು ನಾಗಿಣಿ ಡ್ಯಾನ್ಸ್ ಮಾಡಿದ್ದರು. ಅಂದಿನಿಂದಲೂ ಶ್ರೀಲಂಕಾ ತಂಡಕ್ಕೆ ಈ ಅವಮಾನ ಕಾಡುತ್ತಲೇ ಇತ್ತು. ಕೊನೆಗೂ ನಿನ್ನೆಯ ಪಂದ್ಯದಲ್ಲಿ ತಕ್ಕ ತಿರುಗೇಟು ನೀಡಿದ್ದಾರೆ.