ಕೊಲಂಬೊ: ಆತಿಥೇಯ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಲಂಕಾ ತಂಡ ನೀಡಿರುವ 276ರನ್ಗಳ ಗುರಿ ಬೆನ್ನತ್ತಿರುವ ಶಿಖರ್ ಧವನ್ ಪಡೆಗೆ ಆರಂಭಿಕ ಆಘಾತವಾಗಿದ್ದು, 6 ವಿಕೆಟ್ ಕಳೆದುಕೊಂಡಿದೆ. ಮೈದಾನದಲ್ಲಿ ಸದ್ಯ ಚಹಾರ್-ಕೃನಾಲ್ ಪಾಂಡ್ಯ ಬ್ಯಾಟ್ ಮಾಡುತ್ತಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ತಂಡ ನಿಗದಿತ 50 ಓವರ್ಗಳಲ್ಲಿ 9ವಿಕೆಟ್ನಷ್ಟಕ್ಕೆ 275ರನ್ಗಳಿಕೆ ಮಾಡಿದ್ದು, ತಂಡದ ಪರ ಫರ್ನಾಡೋ(50),ಅಸಲಂಕಾ(65)ರನ್ ಹಾಗೂ ಕರುಣರತ್ನೆ(44)ರನ್ಗಳಿಕೆ ಮಾಡಿದರು.
ಇದರ ಬೆನ್ನತ್ತಿರುವ ಟೀಂ ಇಂಡಿಯಾ ಆರಂಭದಲ್ಲೇ ಪೃಥ್ವಿ ಶಾ(13), ಇಶಾನ್ ಕಿಶನ್(1) ಹಾಗೂ ಶಿಖರ್ ಧವನ್(29) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು. ಇದಾದ ಬಳಿಕ ಮೈದಾನಕ್ಕೆ ಬಂದ ಮನೀಷ್ ಪಾಂಡೆ 37ರನ್ಗಳಿಕೆ ಮಾಡಿ ಉತ್ತಮವಾಗಿ ಆಡುತ್ತಿದ್ದಾಗ ರನೌಟ್ ಬಲೆಗೆ ಬಿದ್ದರು. ಇದರ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ(0)ನಿರಾಸೆ ಮೂಡಿಸಿದರು. ಇನ್ನು ಅರ್ಧಶತಕ ಸಿಡಿಸಿದ್ದ ಸೂರ್ಯಕುಮಾರ್ ಯಾದವ್(53) ಕೂಡ ವಿಕೆಟ್ ಕಳೆದುಕೊಂಡಿದ್ದಾರೆ.
ಸದ್ಯ ಮೈದಾನದಲ್ಲಿ ಕೃನಾಲ್ ಪಾಂಡ್ಯ(14),ಹಾಗೂ ಚಹರ್ ಮೈದಾನದಲ್ಲಿದ್ದು, ಗೆಲುವಿಗೆ 114ರನ್ಗಳ ಅಗತ್ಯವಿದ್ದು, 23 ಓವರ್ ಬಾಕಿ ಉಳಿದಿವೆ. ಜೊತೆ 4 ವಿಕೆಟ್ ಕೈಯಲ್ಲಿವೆ. ಲಂಕಾ ಪರ ಹಸರಂಗ ಎರಡು ವಿಕೆಟ್ ಪಡೆದುಕೊಂಡಿದ್ದಾರೆ.