ಸೇಂಟ್ ಲೂಸಿಯಾ: ಕಗಿಸೊ ರಬಾಡ, ಲುಂಗಿ ಎಂಗಿಡಿ ಮತ್ತು ಎನ್ರಿಚ್ ನೋಕಿಯಾ ಅವರು ಅದ್ಭುತ ಬೌಲಿಂಗ್ ದಾಳಿಯ ನೆರವಿನಿಂದ ಅತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಪ್ರವಾಸಿ ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ನಲ್ಲಿ ಇನ್ನಿಂಗ್ಸ್ ಮತ್ತು 63 ರನ್ಗಳ ಸುಲಭ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ತಂಡ ಮೊದಲ ದಿನವೇ 40.5 ಓವರ್ಗಳಲ್ಲಿ 97ಕ್ಕೆ ಸರ್ವಪತನಗೊಂಡಿತ್ತು. ಹರಿಣಗಳ ಪರ ಲುಂಗಿ ಎಂಗಿಡಿ 5, ನೋಕಿಯಾ 4 ವಿಕೆಟ್ ಪಡೆದು ಮಿಂಚಿದ್ದರು.
-
South Africa seal a dominant win!
— ICC (@ICC) June 12, 2021 " class="align-text-top noRightClick twitterSection" data="
West Indies are bowled out for 162 in their second innings, and the visitors win by an innings and 63 runs 🔥#WTC21 | #WIvSA | https://t.co/tGcGs8Ztp3 pic.twitter.com/3XC4CRIym1
">South Africa seal a dominant win!
— ICC (@ICC) June 12, 2021
West Indies are bowled out for 162 in their second innings, and the visitors win by an innings and 63 runs 🔥#WTC21 | #WIvSA | https://t.co/tGcGs8Ztp3 pic.twitter.com/3XC4CRIym1South Africa seal a dominant win!
— ICC (@ICC) June 12, 2021
West Indies are bowled out for 162 in their second innings, and the visitors win by an innings and 63 runs 🔥#WTC21 | #WIvSA | https://t.co/tGcGs8Ztp3 pic.twitter.com/3XC4CRIym1
ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾದ ತಂಡ 96.5 ಓವರ್ಗಳಲ್ಲಿ 322 ರನ್ಗಳಿಸಿತ್ತು. ಕ್ವಿಂಟನ್ ಡಿ ಕಾಕ್ ಅಜೇಯ 141 ರನ್ಗಳಿಸಿದರೆ, ಐಡೆನ್ ಮಾರ್ಕ್ರಮ್ 60 , ಡಾಸ್ಸೆನ್ 46 ರನ್ಗಳಿಸಿದ್ದರು. ವೆಸ್ಟ್ ಇಂಡೀಸ್ ಪರ ಜೇಸನ್ ಹೋಲ್ಡರ್ 4, ಜೇಡನ್ ಸೀಲ್ಸ್ 3 ಮತ್ತು ರೋಚ್ 2 ವಿಕೆಟ್ ಪಡೆದು ಮಿಂಚಿದ್ದರು.
225 ರನ್ಗಳ ಮೊದಲ ಇನ್ನಿಂಗ್ಸ್ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ರಬಾಡ ದಾಳಿಗೆ ಕುಸಿದು 64 ಓವರ್ಗಳಲ್ಲಿ ಕೇವಲ 162 ರನ್ಗಳಿಗೆ ಆಲೌಟ್ ಆಗಿ ಇನ್ನಿಂಗ್ಸ್ ಸೋಲು ಕಂಡಿತು. ಆಲ್ರೌಂಡರ್ ರಾಸ್ಟನ್ ಚೇಸ್ 62 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಅವರನ್ನು ಹೊರತುಪಡಿಸಿದರೆ ಯಾವುದೇ ಬ್ಯಾಟ್ಸ್ಮನ್ 20ರ ಗಡಿ ಕೂಡ ದಾಟಲಿಲ್ಲ.
ಕಗಿಸೊ ರಬಾಡ 5 ವಿಕೆಟ್, ಎನ್ರಿಚ್ ನೋಕಿಯಾ 3 , ಕೇಶವ್ ಮಹರಾಜ್ 2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದನ್ನು ಓದಿ: ಕೆಕೆಆರ್ನಿಂದ ನಾನು ನಿರೀಕ್ಷಿಸಿದ ಬೆಂಬಲ ಸಿಗುತ್ತಿಲ್ಲ: ಕುಲ್ದೀಪ್ ಯಾದವ್