ETV Bharat / sports

ಕಪಿಲ್​​​​ದೇವ್ 36 ವರ್ಷಗಳ ಹಿಂದಿನ ದಾಖಲೆ ಮುರಿದ ನೆದರ್​​ಲ್ಯಾಂಡ್ಸ್​​ ತಂಡದ ನಾಯಕ ಸ್ಕಾಟ್​ ಎಡ್ವರ್ಡ್ಸ್​​​ - ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದ ನೆದರ್​​ಲ್ಯಾಂಡ್ಸ್​​

Cricket World Cup 2023: ವಿಶ್ವಕಪ್​ ಟೂರ್ನಿಯಲ್ಲಿ ಬಲಾಢ್ಯ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿರುವ ನೆದರ್​​ಲ್ಯಾಂಡ್ಸ್​​ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್​​​ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ.

Dutch skipper Scott Edwards
ನೆದರ್​​ಲ್ಯಾಂಡ್ಸ್​​ ತಂಡದ ನಾಯಕ ಸ್ಕಾಟ್​ ಎಡ್ವರ್ಡ್ಸ್​​​
author img

By ETV Bharat Karnataka Team

Published : Oct 18, 2023, 1:06 PM IST

ಧರ್ಮಶಾಲಾ (ಹಿಮಾಚಲ ಪ್ರದೇಶ): ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಮಂಗಳವಾರ ಬಲಿಷ್ಠ ದಕ್ಷಿಣ ಆಫ್ರಿಕಾದ ವಿರುದ್ಧ ನೆದರ್​​ಲ್ಯಾಂಡ್ಸ್​​ ತಂಡ ಅಚ್ಚರಿಯ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಡಚ್ಚರ ನಾಯಕ ಸ್ಕಾಟ್ ಎಡ್ವರ್ಡ್ಸ್​​​ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಭಾರತ ಕ್ರಿಕೆಟ್​ ತಂಡ ಮಾಜಿ ನಾಯಕ ಕಪಿಲ್ ದೇವ್ ಅವರ 36 ವರ್ಷಗಳ ಹಳೆಯ ದಾಖಲೆಯನ್ನು ಎಡ್ವರ್ಡ್ಸ್​​​ ಮುರಿದಿದ್ದಾರೆ. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದಿದ್ದ ಅವರು, 78 ರನ್​ ಸಿಡಿಸಿ ಮಿಂಚು ಹರಿಸಿದ್ದು ಮಾತ್ರವಲ್ಲದೇ ತಂಡದ ಗೆಲುವಿನಲ್ಲೂ ಮಹತ್ವದ ಪಾತ್ರ ವಹಿಸಿದ್ದಾರೆ.

ಹಿಮಾಚಲ ಪ್ರದೇಶದ ಧರ್ಮಶಾಲಾ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ವಿಶ್ವಕಪ್ 15ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ನೆದರ್​​ಲ್ಯಾಂಡ್ಸ್ 38 ರನ್​ಗಳಿಂದ ಮಣಿಸಿದೆ. ಈ ಮೂಲಕ ಸ್ಕಾಟ್ ಎಡ್ವರ್ಡ್ಸ್​​​ ನೇತೃತ್ವದ ಡಚ್ ತಂಡವು ಅಚ್ಚರಿ ಫಲಿತಾಂಶವನ್ನು ನೀಡಿ ಕ್ರಿಕೆಟ್​ ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದೆ. ಜೊತೆಗೆ ಮೂರು ದಿನಗಳ ಅಂತರದಲ್ಲಿ ಎರಡನೇ ಅಚ್ಚರಿ ಫಲಿತಾಂಶಕ್ಕೆ 2023ನೇ ವಿಶ್ವಕಪ್​ ಟೂರ್ನಿ ಸಾಕ್ಷಿಯಾಗಿದೆ. ಭಾನುವಾರ ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ತಂಡಕ್ಕೆ ಅಫ್ಘಾನಿಸ್ತಾನ ತಂಡವನ್ನು ಸೋಲುಣಿಸಿತ್ತು. ಮಂಗಳವಾರ ತೆಂಬಾ ಬಾವುಮಾ ನಾಯಕತ್ವದ ಬಲಾಢ್ಯ ದಕ್ಷಿಣ ಆಫ್ರಿಕಾ ತಂಡಕ್ಕೆ ಡಚ್ಚರು ಶಾಕ್​ ಕೊಟ್ಟು ಗಮನ ಸೆಳೆದಿದ್ದಾರೆ.

ಮಳೆಯಿಂದಾಗಿ 43 ಓವರ್​ಗಳಿಗೆ ಕಡಿತಗೊಂಡಿದ್ದ ಈ ಪಂದ್ಯದ ಗೆಲುವಿನಲ್ಲಿ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಆಗಿರುವ ನಾಯಕ ಸ್ಕಾಟ್​ ಎಡ್ವರ್ಡ್ಸ್​​​ ಮಹತ್ವದ ಪಾತ್ರ ವಹಿಸಿದ್ದಾರೆ. ದಕ್ಷಿಣ ಆಫ್ರಿಕಾದ ಗಟ್ಟಿ ಬೌಲಿಂಗ್‌ ನಡುವೆಯೂ ದೃಢವಾಗಿ ನಿಂತ ಎಡ್ವರ್ಡ್ಸ್‌ 78 ರನ್​ಗಳನ್ನು ಬಾರಿಸಿದ್ದರು. ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದಿದ್ದ ನೆದರ್​​ಲ್ಯಾಂಡ್ಸ್ ತಂಡ ಹರಿಣಗಳ ದಾಳಿಗೆ ಆರಂಭದಲ್ಲಿ ತತ್ತರಿಸಿತ್ತು. ಒಂದು ಹಂತದಲ್ಲಿ ತಂಡದ ಮೊತ್ತ 82 ರನ್​ಗಳು ಆಗುವಷ್ಟರಲ್ಲಿ ಐದು ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡಿತ್ತು. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ನಾಯಕ ಎಡ್ವರ್ಡ್ಸ್​​​ ತಂಡಕ್ಕೆ ಬಲ ತುಂಬಿ 8 ವಿಕೆಟ್​ ನಷ್ಟಕ್ಕೆ 245 ರನ್​ಗಳ ಸ್ಪರ್ಧಾತ್ಮಕ ಗುರಿ ನೀಡುವಲ್ಲಿ ಯಶಸ್ವಿಯಾದರು.

ಕೆಳ ಕ್ರಮಾಂಕದಲ್ಲಿ ನಾಯಕನ ಗರಿಷ್ಠ ಸ್ಕೋರ್: ಏಳನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಬಂದ ಸ್ಕಾಟ್ ಎಡ್ವರ್ಡ್ಸ್ 69 ಎಸೆತಗಳಲ್ಲಿ ಒಂದು ಸಿಕ್ಸರ್​, 10 ಬೌಂಡರಿಗಳ ಸಮೇತ ಅಜೇಯ 78 ರನ್​ ಬಾರಿಸಿದ್ದರು. ಇದು ಏಕದಿನ ವಿಶ್ವಕಪ್​ ಇತಿಹಾಸದಲ್ಲಿ ನಂ.7 ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಮಾಡಿ ಗರಿಷ್ಠ ರನ್​ಗಳಿಸಿದ ಆಟಗಾರರ ಪಟ್ಟಿಯಲ್ಲಿ ಎಡ್ವರ್ಡ್ಸ್ ಸಹ ಸೇರುವಂತಾಗಿದೆ. ಅಷ್ಟೇ ಅಲ್ಲದೇ, ಭಾರತ ಕ್ರಿಕೆಟ್​ ದಿಗ್ಗಜರಲ್ಲಿ ಒಬ್ಬರಾದ ಕಪಿಲ್ ದೇವ್​ ಅವರ 36 ವರ್ಷಗಳ ಹಳೆಯ ದಾಖಲೆಯನ್ನು ಡಚ್ಚರ ನಾಯಕ ಮುರಿದ್ದಾರೆ.

1987ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್​ ವಿರುದ್ಧ ಕಪಿಲ್ ದೇವ್​ ಕೆಳ ಕ್ರಮಾಂಕದಲ್ಲಿ ಬಂದು 72 ರನ್ ಗಳಿಸಿದ್ದರು. ಈಗ 78 ರನ್​ ಬಾರಿಸಿ ಸ್ಕಾಟ್ ಎಡ್ವರ್ಡ್ಸ್ ಈ ದಾಖಲೆಯನ್ನು ಹಿಂದಿಕ್ಕಿದ್ದಾರೆ. 2019ರ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್​ ವಿರುದ್ಧ 8ನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯಾದ ಆಟಗಾರ ನಾಥನ್​ ಕೌಲ್ಟರ್​ ನೈಲ್​ 92 ರನ್ ಬಾರಿಸಿದ್ದರು.

ವಿಶ್ವಕಪ್‌ನಲ್ಲಿ ನೆದರ್​​ಲ್ಯಾಂಡ್ಸ್​​​ಗೆ 3ನೇ ಗೆಲುವು: ವಿಶ್ವಕಪ್ ಟೂರ್ನಿಯಲ್ಲಿ ನೆದರ್​​ಲ್ಯಾಂಡ್ಸ್​​ ತಂಡ ಇದುವರೆಗೆ 3ನೇ ಗೆಲುವು ಸಹ ಇದಾಗಿದೆ. 2003ರಲ್ಲಿ ನಮೀಬಿಯಾ ತಂಡವನ್ನು 64 ರನ್‌ಗಳಿಂದ ನೆದರ್​​ಲ್ಯಾಂಡ್ಸ್​​ ಸೋಲಿಸಿತ್ತು. 2007ರಲ್ಲಿ ಸ್ಕಾಟ್ಲೆಂಡ್‌ ತಂಡನ್ನು ಎಂಟು ವಿಕೆಟ್‌ಗಳಿಂದ ಮಣಿಸಿತ್ತು. ಈಗ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು 38 ರನ್‌ಗಳಿಂದ ಅನನುಭವಿ ಡಚ್ಚರು ಸೋಲಿಸಿದ್ದಾರೆ.

ಇದನ್ನೂ ಓದಿ: ವಿಶ್ವಕಪ್​ ಕ್ರಿಕೆಟ್‌ನಲ್ಲಿ ನೆದರ್ಲೆಂಡ್‌ಗೆ​ ಅಚ್ಚರಿಯ ಗೆಲುವು! ಬಲಿಷ್ಠ ದಕ್ಷಿಣ ಆಫ್ರಿಕಾ ತಂಡಕ್ಕೆ ನಿರಾಶೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.