ಕಟಕ್: ಇಲ್ಲಿನ ಬಾರಾಬತಿ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ- ಭಾರತ ನಡುವಿನ 5 ಪಂದ್ಯಗಳ ಟಿ-20 ಸರಣಿಯ 2 ನೇ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ನವಿಮುಂಬೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬೃಹತ್ ಮೊತ್ತ ಗಳಿಸಿದ ಹೊರತಾಗಿಯೂ ಭಾರತ ಸೋಲು ಕಂಡಿತ್ತು. ದಕ್ಷಿಣ ಆಫ್ರಿಕಾ ಆಟಗಾರರು 211 ರನ್ಗಳನ್ನು ಚೇಸ್ ಮಾಡಿ ದಾಖಲೆಯ ಗೆಲುವು ಕಂಡಿದ್ದರು. ಈ ಪಂದ್ಯದಲ್ಲೂ ಭಾರತವನ್ನು ಕಟ್ಟಿಹಾಕಿ ಸರಣಿಯಲ್ಲಿ ಮುನ್ನಡೆ ಪಡೆಯಲು ಹರಿಣಗಳ ತಂಡ ಯೋಜಿಸಿದೆ.
ರಿಷಬ್ ಪಂತ್ ನೇತೃತ್ವದ ಭಾರತ ತಂಡ ಮೊದಲ ಪಂದ್ಯದಲ್ಲೇ ಕೈ ಸುಟ್ಟುಕೊಂಡಿತ್ತು. ಬೌಲರ್ ಕಳಪೆ ಪ್ರದರ್ಶನದಿಂದ ಬೃಹತ್ ಮೊತ್ತ ಪೇರಿಸಿದ್ದರೂ ಪಂದ್ಯ ಸೋತಿತ್ತು. ಇಂದಿನ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಲು ಸಜ್ಜಾಗಿದೆ.
-
South Africa have won the toss and will bowl first against #TeamIndia in the 2nd T20I.@Paytm #INDvSA pic.twitter.com/tXHUu1MyXJ
— BCCI (@BCCI) June 12, 2022 " class="align-text-top noRightClick twitterSection" data="
">South Africa have won the toss and will bowl first against #TeamIndia in the 2nd T20I.@Paytm #INDvSA pic.twitter.com/tXHUu1MyXJ
— BCCI (@BCCI) June 12, 2022South Africa have won the toss and will bowl first against #TeamIndia in the 2nd T20I.@Paytm #INDvSA pic.twitter.com/tXHUu1MyXJ
— BCCI (@BCCI) June 12, 2022
ಆಫ್ರಿಕಾ ಎರಡು ಬದಲಾವಣೆ: ಡಿ ಕಾಕ್ಗೆ ಗಾಯ, ಕ್ಲಾಸೆನ್ಗೆ ಚಾನ್ಸ್: ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಕ್ವಿಂಟನ್ ಡ ಕಾಕ್ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದು, ಪಂದ್ಯದಿಂದ ಕೈ ಬಿಡಲಾಗಿದೆ. ಇವರ ಸ್ಥಾನಕ್ಕೆ ಹೆನ್ರಿಚ್ ಕ್ಲಾಸೆನ್ಗೆ ಅವಕಾಶ ನೀಡಲಾಗಿದೆ. ಅಲ್ಲದೇ, ಟ್ರಿಸ್ಟಾನ್ ಸ್ಟಬ್ಸ್ ಬದಲಿಗೆ ರೀಜಾ ಹೆನ್ರಿಕ್ಸ್ರನ್ನು ಸೇರಿಸಿಕೊಳ್ಳಲಾಗಿದೆ.
ತಂಡ ಇಂತಿದೆ: ಭಾರತ: ರಿಷಬ್ ಪಂತ್ (ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಅವೇಶ್ ಖಾನ್, ಭುವನೇಶ್ವರ್ ಕುಮಾರ್ ಮತ್ತು ಯುಜುವೇಂದ್ರ ಚಹಲ್.
ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ (ನಾಯಕ), ರೀಜಾ ಹೆನ್ರಿಕ್ಸ್, ರಾಸ್ಸಿ ವೆನ್ ಡೆರ್ ಡುಸೆನ್, ಡೇವಿಡ್ ಮಿಲ್ಲರ್, ಹೆನ್ರಿಕ್ ಕ್ಲಾಸೆನ್, ಡ್ವೈನ್ ಪ್ರಿಟೋರಿಯಸ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಅನ್ರಿಚ್ ನಾರ್ಟ್ಜೆ ಮತ್ತು ತಬ್ರೈಜ್ ಶಮ್ಸಿ.
ಓದಿ: ಪ್ಯಾರಾ ಶೂಟಿಂಗ್ ವಿಶ್ವಕಪ್: ಮತ್ತೊಂದು ಚಿನ್ನದ ಪದಕ ಗೆದ್ದ ಅವನಿ ಲೇಖರಾ