ETV Bharat / sports

ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಕ್ರಿಸ್ ಮೋರಿಸ್​

2012ರಲ್ಲಿ ಟಿ20 ಕ್ರಿಕೆಟ್​ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದ ಮೋರಿಸ್​, ದಕ್ಷಿಣ ಆಫ್ರಿಕಾ ಪರ 4 ಟೆಸ್ಟ್​, 42 ಏಕದಿನ ಮತ್ತು 23 ಟಿ20 ಪಂದ್ಯಗಳನ್ನಾಡಿದ್ದು, ಒಟ್ಟು 94 ವಿಕೆಟ್​ ಮತ್ತು 773 ರನ್​ಗಳಿಸಿದ್ದಾರೆ.

author img

By

Published : Jan 11, 2022, 3:40 PM IST

Chris Morris retires
ಕ್ರಿಸ್ ಮೋರಿಸ್​ ನಿವೃತ್ತಿ

ನವದೆಹಲಿ: ದಕ್ಷಿಣ ಆಫ್ರಿಕಾದ ಆಲ್​ರೌಂಡರ್​ ಕ್ರಿಸ್​ ಮೋರಿಸ್ ಮಂಗಳವಾರ​ ಎಲ್ಲಾ ಮಾದರಿಯ ಕ್ರಿಕೆಟ್​ಗೆ ಮಂಗಳವಾರ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಈ ದಶಕದ ಕ್ರಿಕೆಟ್​ ಪಯಣದಲ್ಲಿ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿರುವ ಆಲ್​ರೌಂಡರ್​, ಭವಿಷ್ಯದಲ್ಲಿ ಅವಕಾಶ ಸಿಕ್ಕ ಕಡೆಯಲ್ಲಿ ಕೋಚ್​ ಹುದ್ದೆಯನ್ನು ಅಲಂಕರಿಸುವ ಬಯಕೆ ವ್ಯಕ್ತಪಡಿಸಿದ್ದಾರೆ.

"ಇಂದು ನಾನು ಎಲ್ಲಾ ಪ್ರಕಾರದ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದೇನೆ. ನನ್ನ ಪ್ರಯಾಣದಲ್ಲಿ ದೊಡ್ಡ ಅಥವಾ ಚಿಕ್ಕ ಭಾಗವಾಗಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು. ಇದು ಮೋಜಿನ ಸವಾರಿಯಾಗಿತ್ತು. ಟೈಟನ್ಸ್​​ ಕ್ರಿಕೆಟ್​ ಫ್ರಾಂಚೈಸಿಯಲ್ಲಿ ಕೋಚಿಂಗ್ ಪಾತ್ರವನ್ನು ವಹಿಸಿಕೊಳ್ಳಲು ಸಂತೋಷವಾಗುತ್ತಿದೆ. ಜೀವನ ಈಗ ಆರಂಭವಾಗಿದೆ" ಎಂದು 34 ವರ್ಷದ ಮೋರಿಸ್​ ಇನ್​ಸ್ಟಾಗ್ರಾಮ್​ನಲ್ಲಿ ತಮ್ಮ ನಿವೃತ್ತಿ ನಿರ್ಧಾರವನ್ನು ಹಂಚಿಕೊಂಡಿದ್ದಾರೆ.

2012ರಲ್ಲಿ ಟಿ20 ಕ್ರಿಕೆಟ್​ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದ ಮೋರಿಸ್​, ದಕ್ಷಿಣ ಆಫ್ರಿಕಾ ಪರ 4 ಟೆಸ್ಟ್​, 42 ಏಕದಿನ ಮತ್ತು 23 ಟಿ20 ಪಂದ್ಯಗಳನ್ನಾಡಿದ್ದು, ಒಟ್ಟು 94 ವಿಕೆಟ್​ ಮತ್ತು 773 ರನ್​ಗಳಿಸಿದ್ದಾರೆ.

ಇದನ್ನೂಓದಿ:ವಿವೋ ಐಪಿಎಲ್ ಅಲ್ಲ, ಮುಂದಿನ ವರ್ಷ ಟಾಟಾ ಐಪಿಎಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.