ETV Bharat / sports

ಟಿ20 ಜೊತೆಗೆ ODI ನಾಯಕತ್ವವನ್ನೂ ತ್ಯಜಿಸುವಂತೆ 6 ತಿಂಗಳ ಹಿಂದೆಯೇ ಕೊಹ್ಲಿಗೆ ಸಲಹೆ ನೀಡಿದ್ರಂತೆ ಶಾಸ್ತ್ರಿ! - ಕೊಹ್ಲಿಗೆ ಸೀಮಿತ ಓವರ್​ಗಳ ನಾಯಕತ್ವ ತ್ಯಜಿಸಲು ಶಾಸ್ತ್ರಿ ಸಲಹೆ

ಆಸ್ಟ್ರೇಲಿಯಾದಲ್ಲಿ ಭಾರತ ತಂಡ ರಹಾನೆ ನೇತೃತ್ವದಲ್ಲಿ ಟೆಸ್ಟ್​ ಸರಣಿಯನ್ನು ಕೊಹ್ಲಿಯಿಲ್ಲದೆ ಗೆದ್ದ ನಂತರ ನಾಯಕತ್ವದ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಇದೀಗ ಕೊಹ್ಲಿ ಪರಿಸ್ಥಿತಿ ನೋಡಿದರೆ 2023ಕ್ಕಿಂತ ಮುಂಚೆಯೇ ಏಕದಿನ ನಾಯಕತ್ವವನ್ನು ಬಿಡಬಹುದಾದ ಸಂದರ್ಭಗಳು ಬಂದರೂ ಬರಬಹುದು ಎಂದು ಹೇಳಲಾಗುತ್ತಿದೆ.

Shastri had suggested to Kohli to give up all white-ball captaincy: reports
ಸೀಮಿತ ಓವರ್​ಗಳ ನಾಯಕತ್ವ ತ್ಯಜಿಸುವಂತೆ ರವಿಶಾಸ್ತ್ರಿ ಸಲಹೆ
author img

By

Published : Sep 22, 2021, 11:34 PM IST

ನವದೆಹಲಿ: ಭಾರತ ತಂಡದ ಮುಖ್ಯ ಕೋಚ್​ ರವಿ ಶಾಸ್ತ್ರಿ ಸೀಮಿತ ಓವರ್​ಗಳ ನಾಯಕತ್ವ ತ್ಯಜಿಸಿ, ಬ್ಯಾಟಿಂಗ್​ ಕಡೆ ಹೆಚ್ಚಿನ ಗಮನ ಹರಿಸುವಂತೆ ವಿರಾಟ್​ ಕೊಹ್ಲಿಗೆ ಸಲಹೆ ನೀಡಿದ್ದರೆಂದು ಎಂದು ವರದಿಗಳಿಂದ ತಿಳಿದು ಬಂದಿದೆ.

ಮಾಧ್ಯಮವೊಂದರ ಪ್ರಕಾರ, ಈ ಸಲಹೆಯು ಶಾಸ್ತ್ರಿ, ಕೊಹ್ಲಿಯನ್ನು ಕೀಳಾಗಿ ಕಾಣುವ ಉದ್ದೇಶದಿಂದ ನೀಡಿಲ್ಲ. ಬದಲಾಗಿ ವಿಶ್ವ ಕ್ರಿಕೆಟ್​ನಲ್ಲಿ ಅಗ್ರ ಬ್ಯಾಟ್ಸ್‌ಮನ್‌ ಆಗಿ ಮುಂದುವರಿಯಲು ಕೊಹ್ಲಿಗೆ ಸ್ಫೂರ್ತಿ ನೀಡುವ ದೃಷ್ಟಿಯಿಂದ ನೀಡಿದ್ದರೆಂದು ವರದಿಯಿಂದ ತಿಳಿದುಬಂದಿದೆ.

ಆದರೆ ಸೀಮಿತ ಓವರ್​ಗಳ ನಾಯಕತ್ವವನ್ನು ತ್ಯಜಿಸುವ ಸಲಹೆಯನ್ನು ಕಡೆಗಣಿಸಿದ ಕೊಹ್ಲಿ, ಟಿ20 ಕ್ರಿಕೆಟ್ ​ನಾಯಕತ್ವದಿಂದ ಮಾತ್ರ ಕೆಳಗಿಳಿಯಲು ನಿರ್ಧರಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಭಾರತ ತಂಡ ರಹಾನೆ ನೇತೃತ್ವದಲ್ಲಿ ಟೆಸ್ಟ್​ ಸರಣಿಯನ್ನು ಕೊಹ್ಲಿಯಿಲ್ಲದೆ ಗೆದ್ದ ನಂತರ ನಾಯಕತ್ವದ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಇದೀಗ ಕೊಹ್ಲಿ ಪರಿಸ್ಥಿತಿ ನೋಡಿದರೆ 2023ಕ್ಕಿಂತ ಮುಂಚೆಯೇ ಏಕದಿನ ನಾಯಕತ್ವವನ್ನು ಬಿಡಬಹುದಾದ ಸಂದರ್ಭಗಳು ಬಂದರೂ ಬರಬಹುದು ಎಂದು ಹೇಳಲಾಗುತ್ತಿದೆ.

ಬಿಸಿಸಿಐ ಅಧಿಕಾರಿಗಳ ಪ್ರಕಾರ ಶಾಸ್ತ್ರಿ 6 ತಿಂಗಳ ಹಿಂದೆಯೇ ಕೊಹ್ಲಿಗೆ ಈ ಸಲಹೆ ನೀಡಿದ್ದರಂತೆ. ಆದರೆ ವಿರಾಟ್​ ಅದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಅವರಿಗೆ ಭಾರತ ತಂಡವನ್ನು ಏಕದಿನ ಕ್ರಿಕೆಟ್​ನಲ್ಲಿ ಮುನ್ನಡೆಸುವ ಹಂಬಲವಿದೆ. ಆದ ಕಾರಣ ಟಿ20 ನಾಯಕತ್ವವನ್ನು ಮಾತ್ರ ಬಿಟ್ಟುಕೊಟ್ಟಿದ್ದಾರೆ. ಬಿಸಿಸಿಐ ಕೂಡ ಕೊಹ್ಲಿಯನ್ನು ನಾಯಕನಿಗಿಂತ ಒಬ್ಬ ಸ್ಪೆಷಲಿಸ್ಟ್​ ಬ್ಯಾಟ್ಸ್​ಮನ್​ ಆಗಿ ಬಳಸಿಕೊಳ್ಳಲು ಎದುರು ನೋಡುತ್ತಿದೆ ಎನ್ನಲಾಗಿದೆ.

ಇದನ್ನು ಓದಿ:ಒತ್ತಡದಲ್ಲಿರುವ ಕೊಹ್ಲಿಯನ್ನು ಲೀಗ್​​ ಮಧ್ಯದಲ್ಲೇ ಆರ್​ಸಿಬಿ ನಾಯಕತ್ವದಿಂದ ಕೆಳಗಿಳಿಸುವ ಸಾಧ್ಯತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.