ETV Bharat / sports

IND vs SA 2nd ODI : ಶಹಬಾಜ್ ಅಹ್ಮದ್ ಚೊಚ್ಚಲ ವಿಕೆಟ್​ ಸಂಭ್ರಮ.. ನೋಡಿ

ರಾಂಚಿಯಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಶಹಬಾಜ್ ಅಹ್ಮದ್ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದು, ಚೊಚ್ಚಲ ವಿಕೆಟ್​ ಪಡೆದಿದ್ದಾರೆ.

author img

By

Published : Oct 9, 2022, 5:04 PM IST

shahbaz-ahmed-get-international-cricket-first-wicket
ಶಹಬಾಜ್ ಅಹ್ಮದ್ ಚೊಚ್ಚಲ ವಿಕೆಟ್​ ಸಂಭ್ರಮ.. ನೋಡಿ

ರಾಂಚಿ : ದಕ್ಷಿಣ ಆಫ್ರಿಕ ಮತ್ತು ಭಾರತದ 2ನೇ ಏಕದಿನ ಪಂದ್ಯ ನಡೆಯುತ್ತಿದೆ. ಟಾಸ್​ ಗೆದ್ದ ಕೇಶವ ಮಹಾರಾಜ್​ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡರು. ಹರಿಣಗಳಿಗೆ ಮೊದಲ ಆಘಾತವನ್ನು ಸಿರಾಜ್​ ಕ್ವಿಂಟನ್ ಡಿ ಕಾಕ್ ವಿಕೆಟ್​ ಪಡೆಯುವ ಮೂಲಕ ನೀಡಿದರು. ಭಾರತಕ್ಕೆ ಎರಡನೇ ವಿಕೆಟನ್ನು ಶಹಬಾಜ್ ಅಹ್ಮದ್ ತಂದುಕೊಟ್ಟರು. ಇದು ಅವರ ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ವಿಕೆಟ್​ ಆಗಿದೆ.

ಜನೆಮನ್ ಮಲನ್ ಅವರನ್ನು ಲೆಗ್​ ಬಿಫೋರ್​ ವಿಕೆಟ್​ ಮಾಡುವ ಮೂಲಕ ಅವರ ಚೊಚ್ಚಲ ಪಡೆದರು. ವಿಕೆಟ್​ ಪಡೆದು ಸಂಭ್ರಮಿಸುತ್ತಿರುವ ವಿಡಿಯೋವನ್ನು ಬಿಸಿಸಿಐ ಆಫೀಶಿಯಲ್​ ಟ್ವಿಟರ್​ ಹ್ಯಾಡಲ್​ನಲ್ಲಿ ಹಂಚಿಕೊಂಡಿದೆ. ಇಂದಿನ ಪಂದ್ಯ ಮುಖಾಂತರ ಬೌಲಿಂಗ್​ ಆಲ್​ರೌಂಡರ್ ಶಹಬಾಜ್ ಅಹ್ಮದ್ ಅಂತಾರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದರು.

ಮೊದಲ ಪಂದ್ಯದ ಸೋಲಿನ ನಂತರ ನಾಯಕ ಶಿಖರ್​ ಧವನ್ ತಂಡದಲ್ಲಿ ಎರಡು ಬದಲಾವಣೆ ಮಾಡಿದ್ದಾರೆ. ರವಿ ಬಿಷ್ಣೋಯ್ ಮತ್ತು ರುತುರಾಜ್ ಗಾಯಕ್ವಾಡ್ ಬದಲಿಗೆ ವಾಷಿಂಗ್ಟನ್ ಸುಂದರ್ ಮತ್ತು ಶಹಬಾಜ್ ಅಹ್ಮದ್ ಅವರನ್ನು ಕಣಕ್ಕೆ ಇಳಿಸಿದ್ದಾರೆ.

ಸದ್ಯದ ಮಟ್ಟಿಗೆ ದಕ್ಷಿಣ ಆಫ್ರಿಕಾ 44 ಓವರ್​ಗಳಲ್ಲಿ 254ಕ್ಕೆ 5 ವಿಕೆಟ್​ ಕಳದುಕೊಂಡು ಆಡುತ್ತಿದೆ.

ಇದನ್ನೂ ಓದಿ; ಟಿ20 ವಿಶ್ವಕಪ್​: ಬೂಮ್ರಾ ಬದಲಿ ಆಟಗಾರನ ಘೋಷಣೆಗೆ ಇಂದೇ ಕೊನೆ ದಿನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.