ETV Bharat / sports

ಮೈದಾನದಲ್ಲಿ ಮತ್ತೆ ಅಬ್ಬರಿಸಲಿದ್ದಾರೆ ಯುವಿ, ಸೆಹ್ವಾಗ್​, ಭಜ್ಜಿ: ಎಲ್ಲಿ, ಯಾವಾಗ? - ಇಂಡಿಯಾ ಮಹಾರಾಜ ತಂಡ

Legends League Cricket 2022: ವಿಶ್ವ ಕ್ರಿಕೆಟ್ ಕಂಡಿರುವ ದಿಗ್ಗಜ ಕ್ರಿಕೆಟರುಗಳು​ ಇದೀಗ ಲೆಜೆಂಡ್ಸ್​​ ಕ್ರಿಕೆಟ್ ಲೀಗ್‌​ನಲ್ಲಿ ಪಾಲ್ಗೊಳ್ಳುತ್ತಿದ್ದು ವೇದಿಕೆ ಸಜ್ಜಾಗಿದೆ.

Legends League Cricket
Legends League Cricket
author img

By

Published : Jan 4, 2022, 3:11 PM IST

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿಯಾಗಿರುವ ಆಟಗಾರರು ಇದೀಗ ​​ಲೆಜೆಂಡ್ಸ್ ಕ್ರಿಕೆಟ್ ಲೀಗ್​​​ನಲ್ಲಿ ಭಾಗಿಯಾಗುತ್ತಿದ್ದಾರೆ. ಈ ಟೂರ್ನಿಯ ಪಂದ್ಯಗಳು ಒಮನ್​ನ ಅಲ್​ ಅಮೆರತ್​ ಕ್ರೀಡಾಂಗಣದಲ್ಲಿ ಜನವರಿ 20ರಿಂದ ಆರಂಭಗೊಳ್ಳಲಿವೆ.

'ಇಂಡಿಯಾ ಮಹಾರಾಜ' ಎಂಬ ಹೆಸರಿನೊಂದಿಗೆ ಭಾರತ ತಂಡ ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದೆ. ಪ್ರಮುಖವಾಗಿ ಸ್ಫೋಟಕ ಆಟಗಾರ ವೀರೇಂದ್ರ ಸೆಹ್ವಾಗ್​, ಆಲ್​ರೌಂಡರ್​​ ಯುವರಾಜ್​​ ಸಿಂಗ್​ ಹಾಗೂ ಹರ್ಭಜನ್​ ಸಿಂಗ್​​ ತಂಡದಲ್ಲಿದ್ದಾರೆ.

ಭಾರತ ಮಹಾರಾಜ ತಂಡ:

ಇರ್ಫಾನ್ ಪಠಾಣ್​, ಯೂಸುಫ್‌ ಪಠಾಣ್​, ವೀರೇಂದ್ರ ಸೆಹ್ವಾಗ್​, ಹರ್ಭಜನ್​ ಸಿಂಗ್​, ಯುವರಾಜ್​ ಸಿಂಗ್​, ಎಸ್​. ಬದ್ರಿನಾಥ್​, ಆರ್.​​ಪಿ.ಸಿಂಗ್​, ಪ್ರಗ್ಯಾನ್​ ಓಜಾ, ನಮನ್ ಓಜಾ, ಮನಪ್ರೀತ್ ಗೋನಿ, ಹೇಮಗ್​ ಬದಾನಿ, ವೇಣುಗೋಪಾಲ್​​ ರಾವ್​, ಮುನಾಫ್ ಪಟೇಲ್​, ಸಂಜಯ್​ ಬಂಗಾರ, ನಯನ್​ ಮೊಂಗ್ಯಾ, ಅಮೀತ್​​ ಭಂಡಾರಿ ತಂಡದಲ್ಲಿದ್ದಾರೆ.

Legends League Cricket
ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್​

ಉಳಿದಂತೆ, ಪಾಕ್​ ಹಾಗೂ ಶ್ರೀಲಂಕಾ ಕ್ರಿಕೆಟ್‌ ಲೆಜೆಂಡ್​ಗಳಾದ ಶೋಯೆಬ್​ ಅಖ್ತರ್​, ಶಾಹಿದ್​ ಅಫ್ರಿದಿ, ಸನತ್​​ ಜಯಸೂರ್ಯ, ಮುತ್ತಯ್ಯ ಮುರಳೀಧರನ್​, ಕಮ್ರಾನ್​ ಅಕ್ಮಲ್​, ಚಮಿಂಡಾ ವಾಸ್, ದಿಲ್ಸ್ಯಾನ್​, ಅಜರ್​ ಮೊಹಮ್ಮದ್​, ಉಪುಲ್ ತರಂಗ, ಮಿಸ್ಬಾ ಉಲ್​ ಹಕ್​, ಮೊಹಮ್ಮದ್ ಹಫೀಜ್​, ಶೋಯೆಬ್​ ಮಲಿಕ್​​, ಮೊಹಮ್ಮದ್​​ ಯೂಸೂಫ್‌​ ಹಾಗೂ ಉಮರ್ ಗುಲ್​ ಮತ್ತೊಂದು ತಂಡದಲ್ಲಿದ್ದಾರೆ.

ಇದನ್ನೂ ಓದಿ: ಅಹ್ಮದಾಬಾದ್​ ಫ್ರಾಂಚೈಸಿಗೆ ಆಶಿಶ್ ನೆಹ್ರಾ ಹೆಡ್​ ಕೋಚ್​, ಗ್ಯಾರಿ ಕಿರ್ಸ್ಟನ್​ ಮೆಂಟರ್​!

ಭಾರತ, ಏಷ್ಯಾ ಮತ್ತು ವಿಶ್ವ ಇತರೆ ತಂಡಗಳ ನಡುವೆ ಈ ಲೀಗ್​ ಪಂದ್ಯಗಳು ನಡೆಯಲಿವೆ. ಮೂರನೇ ತಂಡ ಇನ್ನೂ ಪ್ರಕಟಗೊಂಡಿಲ್ಲ. ಬಾಲಿವುಡ್​ನ ಬಿಗ್‌ಬಿ ಅಮಿತಾಬ್​ ಬಚ್ಚನ್​​​ ಲೆಜೆಂಡ್ಸ್​​ ಲೀಗ್​​ನ ರಾಯಭಾರಿಯಾಗಿದ್ದಾರೆ. ಲೀಗ್​​​ ಕಮಿಷನರ್​​ ಆಗಿ ಟೀಂ ಇಂಡಿಯಾ ಮಾಜಿ ಕೋಚ್​​ ರವಿಶಾಸ್ತ್ರಿ ಆಯ್ಕೆಯಾಗಿದ್ದಾರೆ.

ಕಳೆದ ವರ್ಷ ರೋಡ್​ ಸೇಫ್ಟಿ ವರ್ಲ್ಡ್​​​ ಸಿರೀಸ್​​ನಲ್ಲಿ ಭಾರತ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್​, ವೆಸ್ಟ್​ ಇಂಡೀಸ್​, ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡದ ಕ್ರಿಕೆಟ್‌ ದಿಗ್ಗಜರಿದ್ದರು. ಈ ವೇಳೆ ಸಚಿನ್ ತೆಂಡೂಲ್ಕರ್ ನೇತೃತ್ವದ ಟೀ ಇಂಡಿಯಾ ಚಾಂಪಿಯನ್​ ಆಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.