ಮುಂಬೈ: ದೆಹಲಿ ಕೊಟ್ಟ 224 ರನ್ ಬೃಹತ್ ಮೊತ್ತ ಬೆನ್ನತ್ತಿದ್ದ ಬೆಂಗಳೂರಿನ ಮಂಧಾನ ಪಡೆ, ಗುರಿ ತಲುಪಲು ವಿಫಲವಾಗಿದೆ. ಪುರುಷರ ಆರ್ಸಿಬಿ ಟೀಮ್ನ ರೀತಿ ಮೊದಲ ಪಂದ್ಯದಲ್ಲಿ ವುಮೆನ್ ತಂಡ ಸೋಲನುಭವಿಸಿದೆ. ದೆಹಲಿ ವಿರುದ್ಧದ ಮೊದಲ ಪಂದ್ಯದಲ್ಲಿ ಆರ್ಸಿಬಿ 60 ರನ್ಗಳಿಂದ ಸೋಲನುಭವಿಸಿತು.
ಬೆಂಗಳೂರು ಪರ ನಾಯಕಿ ಮಂಧಾನ (35), ಎಲ್ಲಿಸ್ ಪೆರ್ರಿ (31) ಮತ್ತು ಹೀದರ್ ನೈಟ್ (34) ರನ್ ಗಳಿಸಿದ್ದರಿಂದ ತಂಡ 150 + ರನ್ ದಾಖಲಿಸಲು ಶಕ್ತವಾಯಿತು. ಇದರಿಂದ ಹೀನಾಯ ಸೋಲಿನಿಂದ ಆರ್ಸಿಬಿ ಪಾರಾಯಿತು. ಬೌಲಿಂಗ್ನಲ್ಲಿ 5 ವಿಕೆಟ್ ಪಡೆದ ತಾರಾ ನಾರ್ರಿಸ್ ಅವರಿಗೆ ಆಲಿಸ್ ಕ್ಯಾಪ್ಸೆ 1 ವಿಕೆಟ್ ಮತ್ತು ಶಿಖಾ ಪಾಂಡೆ 2 ವಿಕೆಟ್ ಕಿತ್ತರು. ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಪ್ರಥಮ 5 ವಿಕೆಟ್ ಪಡೆದು ತಾರಾ ನಾರ್ರಿಸ್ ದಾಖಲೆ ಮಾಡಿದರು.
ಆರ್ಸಿಬಿ ಬೌಲಿಂಗ್ ವೈಫಲ್ಯ: ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಸೋತು ಬ್ಯಾಟಿಂಗ್ ಮಾಡಿದರೂ ಬೃಹತ್ ಮೊತ್ತ ಕಲೆಹಾಕಿದರು. ಬೆಂಗಳೂರು ನಾಯಕಿ ಮಂಧಾನ ಯೋಜನೆ ಅಡಿಮೇಲಾಯಿತು. ಮೊದಲ ವಿಕೆಟ್ಗೆ 150+ ಜೊತೆಯಾಟ (162 ರನ್) ಮಾಡಿದ ಶಫಾಲಿ ವರ್ಮಾ ಮತ್ತು ಮೆಗ್ ಲ್ಯಾನಿಂಗ್ ಆರ್ಸಿಬಿ ಬೌಲರ್ಗಳನ್ನು ಕಾಡಿದರು.
-
The first bowler to take a fifer in the #TATAWPL
— Women's Premier League (WPL) (@wplt20) March 5, 2023 " class="align-text-top noRightClick twitterSection" data="
USA's Tara Norris 🫡
Remember the name! 👏👏
Follow the match ▶️ https://t.co/593BI7xKRy#TATAWPL | #RCBvDC pic.twitter.com/nuU7a0UzL8
">The first bowler to take a fifer in the #TATAWPL
— Women's Premier League (WPL) (@wplt20) March 5, 2023
USA's Tara Norris 🫡
Remember the name! 👏👏
Follow the match ▶️ https://t.co/593BI7xKRy#TATAWPL | #RCBvDC pic.twitter.com/nuU7a0UzL8The first bowler to take a fifer in the #TATAWPL
— Women's Premier League (WPL) (@wplt20) March 5, 2023
USA's Tara Norris 🫡
Remember the name! 👏👏
Follow the match ▶️ https://t.co/593BI7xKRy#TATAWPL | #RCBvDC pic.twitter.com/nuU7a0UzL8
ಆರಂಭದಿಂದಲೇ ತಮ್ಮ ಫಾರ್ಮ್ನ್ನು ಮುಂದುವರೆಸಿದ ಶಫಾಲಿ ವರ್ಮಾ ಭರ್ಜರಿ ಬ್ಯಾಟ್ ಬೀಸಿದರು. ತಂಡದ ಮೊತ್ತವನ್ನು ಒಮ್ಮೆಗೆ ಮೇಲಕ್ಕೆ ಕೊಂಡೊಯ್ದರು. 10 ಬೌಂಡರಿ ಮತ್ತು 4 ಸಿಕ್ಸ್ಗಳಿಂದ ಶಫಾಲಿ ವರ್ಮಾ 84 ರನ್ ಗಳಿಸಿದರು. ಅತ್ತ ಮೆಗ್ ಲ್ಯಾನಿಂಗ್ 14 ಬೌಂಡರಿಯಿಂದ 72ರನ್ ಗಳಿಸಿದರು. ಮೆಗ್ ಲ್ಯಾನಿಂಗ್ ಮತ್ತು ಶಫಾಲಿ ವರ್ಮಾರನ್ನು ಹೀದರ್ ನೈಟ್ ಒಬ್ಬರ ಬೆನ್ನ ಹಿಂದೆ ಮೊತ್ತೊಬ್ಬರನ್ನು ಪೆವಿಲಿಯನ್ಗೆ ಕಳಿಸಿದರು.
ಆದರೆ ನಂತರ ಬಂದ ಮರಿಜಾನ್ನೆ ಕಪ್ ಮತ್ತು ಜೆಮಿಮಾ ರಾಡ್ರಿಗಸ್ ರನ್ ಹೊಳೆ ಮುಂದುವರೆಸಿದರು. ಮರಿಜಾನ್ನೆ ಕಪ್ 3 ಸಿಕ್ಸ್ ಮತ್ತು 3 ಬೌಂಡರಿಯಿಂದ 17 ಎಸೆತದಲ್ಲಿ 39 ರನ್ ಗಳಿಸಿದರು. ಜೆಮಿಮಾ ರಾಡ್ರಿಗಸ್ ಕೂಡ ಕಪ್ಗೆ ಇನ್ನೊಂದು ಬದಿಯಲ್ಲಿ ಸಾಥ್ ನೀಡಿದ್ದು, 15 ಎಸೆತ ಎದುರಿಸಿ 3 ಬೌಂಡರಿಯಿಂದ 22 ರನ್ ಕಲೆ ಹಾಕಿದರು.
ಡೆಲ್ಲಿ ನಿಯಂತ್ರಿಸಲು 7 ಬೌಲರ್ಗಳು ಕಣಕ್ಕೆ: ಬಿರುಸಿನ ಆಟ ಆಡುತ್ತಿದ್ದ ಡೆಲ್ಲಿಯನ್ನು ನಿಯಂತ್ರಿಸಲು ಮಂಧಾನ ಏಳು ಬೌಲರ್ಗಳಿಂದ ಬೌಲಿಂಗ್ ಮಾಡಿಸಿದರು. ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ಆಶಾ ಶೋಬನಾ, ಪ್ರೀತಿ ಬೋಸ್, ಮೇಗನ್ ಶುಟ್ ಮತ್ತು ರೇಣುಕಾ ಠಾಕೂರ್ ಸಿಂಗ್ ಬೌಲಿಂಗ್ ಮಾಡಿದರೂ ದೆಹಲಿ ತಂಡವನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ.
ಡೆಲ್ಲಿ ದಾಖಲೆ: ಇದು ಈಗ ಎಲ್ಲಾ ಪ್ರಮುಖ ಮಹಿಳಾ ಟಿ20 ಲೀಗ್‌ಗಳಲ್ಲಿ ಎರಡನೇ ಅತಿ ಹೆಚ್ಚು ಮೊತ್ತವಾಗಿದೆ. 2017 ರಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ವಿರುದ್ಧ ಸಿಡ್ನಿ ಸಿಕ್ಸರ್ಸ್ 4 ವಿಕೆಟಿಗೆ 242 ಸ್ಕೋರ್ ಮಾಡಿದ್ದು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ದಾಖಲೆಯ ಹೊರತಾಗಿ, ಡೆಲ್ಲಿ ಕ್ಯಾಪಿಟಲ್ಸ್ ವುಮೆನ್ಸ್ ಈಗ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಅತಿ ಹೆಚ್ಚು ಮಹಿಳಾ ಟಿ20 ಮೊತ್ತವನ್ನು ಗಳಿಸಿದ್ದಾರೆ.
ಮುಂಬೈ ಇಂಡಿಯನ್ಸ್ ದಾಖಲೆ ಉಡೀಸ್: ಮೊದಲ ಪಂದ್ಯದ ದಾಖಲೆ ಎರಡನೇ ಪಂದ್ಯದಲ್ಲಿ ಮುರಿಯಲಾಗಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 5 ವಿಕೆಟ್ ನಷ್ಟಕ್ಕೆ 207 ರನ್ ಗುರಿ ನೀಡಿದ್ದರು. ಎರಡನೇ ಪಂದ್ಯದಲ್ಲಿ ಡೆಲ್ಲಿ ಇದನ್ನು ಮೀರಿಸಿ 223 ಗಳಿಸಿದೆ. ಭಾರತ ತಂಡ ಹಾಗೂ ಮುಂಬೈ ತಂಡದ ನಾಯಕಿಯಾಗಿರುವ ಹರ್ಮನ್ಪ್ರಿತ್ ಕೌರ್ ಗಳಿಸಿದ್ದ 65 ರನ್ ಡಬ್ಲ್ಯೂಪಿಎಲ್ನ ಅತೀ ಹೆಚ್ಚು ರನ್ ಆಗಿತ್ತು. ಈಗ ಅಂಡರ್ - 19 ಕ್ಯಾಪ್ಟನ್ ಆಗಿದ್ದ ಶಫಾಲಿ ವರ್ಮಾಗಳಿಸಿದ 84 ಅತೀ ಹೆಚ್ಚಿನ ಅಂಕ ಆಗಿದೆ. 72 ರನ್ ಗಳಿಸಿ ಎರಡನೇ ಸ್ಥಾನದಲ್ಲಿ ಮೆಗ್ ಲ್ಯಾನಿಂಗ್ ಇದ್ದಾರೆ. ಕೌರ್ ಮೂರನೇ ಸ್ಥಾನ ಹೊಂದಿದ್ದಾರೆ.
ಇದನ್ನೂ ಓದಿ: WPL 2023: ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಮಂಧಾನ, ಸ್ಪೋರ್ಟ್ಸ್ ಫಾರ್ ಆಲ್ ಥೀಮ್ನಲ್ಲಿ ಆರ್ಸಿಬಿ ಟೀಂ