ETV Bharat / state

5 ಸಾವಿರ ಟ್ರ್ಯಾಕ್ಟರ್​ಗಳೊಂದಿಗೆ ಸುವರ್ಣಸೌಧಕ್ಕೆ ಪಂಚಮಸಾಲಿಗರ ಮುತ್ತಿಗೆ: ಬಸವಜಯ ಮೃತ್ಯುಂಜಯ ಸ್ವಾಮೀಜಿ - 2A RESERVATION

ವಕೀಲರ ಪರಿಷತ್ ಮುಂದಾಳತ್ವದಲ್ಲಿ ಡಿ.10ರಂದು ಸುಮಾರು 5 ಸಾವಿರ ಟ್ರ್ಯಾಕ್ಟರ್​ಗಳೊಂದಿಗೆ ಲಕ್ಷಾಂತರ ಪಂಚಮಸಾಲಿಗರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

ಬಸವಜಯ ಮೃತ್ಯುಂಜಯ ಸ್ವಾಮೀಜಿ
ಬಸವಜಯ ಮೃತ್ಯುಂಜಯ ಸ್ವಾಮೀಜಿ (ETV Bharat)
author img

By ETV Bharat Karnataka Team

Published : Nov 26, 2024, 6:33 PM IST

ಬೆಳಗಾವಿ: ಸೂರ್ಯ- ಚಂದ್ರರು ಇರುವುದು ಎಷ್ಟು ಸತ್ಯವೋ?. ಡಿ.10ರಂದು ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿ, ನಮ್ಮ ನೋವನ್ನು ವ್ಯಕ್ತಪಡಿಸಿ, ಮೀಸಲಾತಿ ಪಡೆಯೋದು ಕೂಡ ಅಷ್ಟೇ ಸತ್ಯ. ಹಾಗಾಗಿ, ಸಮಾಜ ಬಾಂಧವರು ಯಾವುದೇ ಊಹಾಪೋಹಗಳಿಗೆ ಕಿವಿಗೊಡದೇ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಲಿಂಗಾಯತ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೆ ಜಗದೀಶ್​ ಶೆಟ್ಟರ್, ಯಡಿಯೂರಪ್ಪ, ಬೊಮ್ಮಾಯಿ ಅವರು ಮುಖ್ಯಮಂತ್ರಿ ಇದ್ದಾಗಲೂ ಸುವರ್ಣಸೌಧದ ಮುಂದೆ ಉಪವಾಸ ಸತ್ಯಾಗ್ರಹ, ಹೋರಾಟ ಮಾಡಿದ್ದೇವೆ. ಹಾಗಾಗಿ, ಡಿ.10ರಂದು ವಕೀಲರ ಪರಿಷತ್ ಮುಂದಾಳತ್ವದಲ್ಲಿ ಸುಮಾರು 5 ಸಾವಿರ ಟ್ರ್ಯಾಕ್ಟರ್​ಗಳೊಂದಿಗೆ ಲಕ್ಷಾಂತರ ಪಂಚಮಸಾಲಿಗರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ತಿಳಿಸಿದರು.

ಬಸವಜಯ ಮೃತ್ಯುಂಜಯ ಸ್ವಾಮೀಜಿ (ETV Bharat)

ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆ: ನಮ್ಮ ಪಂಚಮಸಾಲಿ ಮೀಸಲಾತಿ ಹೋರಾಟ ಗಟ್ಟಿ ನಿರ್ಧಾರ‌‌ವಾಗಿದೆ. ನಾವು ಚನ್ನಮ್ಮನ ವಂಶಸ್ಥರು. ಬ್ರಿಟಿಷರ ಲಾಠಿ, ಬೂಟಿನ ಏಟಿಗೆ ಹೆದರದವರ ನಾವು. ಜನಪ್ರತಿನಿಧಿಗಳ ಮನಸ್ಥಿತಿ ಬದಲಾಗಬಹುದು. ಆದರೆ, ನಮ್ಮೆಲ್ಲರ ಮನಸ್ಥಿತಿ ಎಂದೂ ಬದಲಾಗಬಾರದು. ನಮ್ಮ ನ್ಯಾಯಯುತ, ಪ್ರಾಮಾಣಿಕ ಹೋರಾಟದಲ್ಲಿ ಪಾಲ್ಗೊಳ್ಳಲು ಯಾರೂ ಭಯ ಪಡುವ ಅವಶ್ಯಕತೆ ಇಲ್ಲ. ಒಂದು ವೇಳೆ ಸರ್ಕಾರ ಹೋರಾಟದಲ್ಲಿ ಪಾಲ್ಗೊಳ್ಳಲು ಬರುವ ಸಮಾಜ ಬಾಂಧವರನ್ನು ತಡೆಯಲು ಯತ್ನಿಸಿದರೆ, ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ ನೀಡಿದರು.

ಡಿ.10ರಂದು ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪೂರ್ವಭಾವಿ ಸಭೆ ಕರೆಯಲಾಗುವುದು. ಇನ್ನು ಡಿ.1ರಂದು ಬೆಳಗಾವಿ ಮಹಾಂತೇಶ ಭವನದಲ್ಲಿ ಪಂಚಮಸಾಲಿ ಸಮಾಜದ ಹಾಲಿ, ಮಾಜಿ ಜನಪ್ರತಿನಿಧಿಗಳ ಸಭೆ ಕರೆಯಲಾಗಿದೆ. ಈ ವೇಳೆ ಯಾವ ರೀತಿ ಸೌಧಕ್ಕೆ ಮುತ್ತಿಗೆ ಹಾಕಬೇಕೆಂದು ಮುಕ್ತವಾಗಿ ಚರ್ಚಿಸುತ್ತೇವೆ ಎಂದರು.

2ಎ ಮೀಸಲಾತಿ ನೀಡುವಲ್ಲಿ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಹೋರಾಟ‌: ಬಸನಗೌಡ ಪಾಟೀಲ ಯತ್ನಾಳ್​, ಎ.ಬಿ. ಪಾಟೀಲ, ವಿಜಯಾನಂದ ಕಾಶಪ್ಪನವರ, ವಿನಯ ಕುಲಕರ್ಣಿ ಸೇರಿ ಬಹಳಷ್ಟು ಮಂದಿ ಆಗಮಿಸಲಿದ್ದಾರೆ. ಇನ್ನು ನಮ್ಮದು ಯಾರ ಪರ, ವಿರುದ್ಧದ ಹೋರಾಟ ಅಲ್ಲ. 2ಎ ಮೀಸಲಾತಿ ನೀಡುವಲ್ಲಿ ಸರ್ಕಾರದ ವಿಳಂಬ ನೀತಿ ಮತ್ತು ನಿರ್ಲಕ್ಷ್ಯ ಖಂಡಿಸಿ ಹೋರಾಟ‌ ಮಾಡುತ್ತಿದ್ದೇವೆ. ಬೆಳಗಾವಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಪ್ರವಾಸ ಮಾಡಿ ಹೆಚ್ಚು ಜನರನ್ನು ಸೇರಿಸಲಾಗುವುದು ಎಂದು ತಿಳಿಸಿದರು.

ಸಿಎಂ‌ ಸಿದ್ದರಾಮಯ್ಯ‌ ಅವರು ದಲಿತ ಸಮುದಾಯದ ಒಳ ಮೀಸಲಾತಿ ಸಭೆಯಲ್ಲಿ ಕ್ಯಾಬಿನೇಟ್ ಮೀಟಿಂಗ್​ ಮಾಡಿ, ಮೂರು ತಿಂಗಳೊಳಗೆ ವರದಿ ತರಿಸಿಕೊಂಡು ಒಳ ಮೀಸಲಾತಿ ಅನುಷ್ಠಾನಕ್ಕೆ ತರುವ ಭರವಸೆ ನೀಡಿದ್ದಾರೆ. ಈ ವಿಷಯ ಕೇಳಿ ನಮಗೂ ಸಂತೋಷವಾಯಿತು. ಅದೇ ರೀತಿ ಪಂಚಮಸಾಲಿಗಳಿಗೂ ಕೂಡ ಉಪಚುನಾವಣೆ ನೆಪ ಹೇಳದೇ, ವರದಿ ತರಿಸಿಕೊಂಡು ಮೀಸಲಾತಿ ಘೋಷಿಸುತ್ತೇವೆ ಎಂದು ಭರವಸೆ ನೀಡಬೇಕಾಗಿತ್ತು. ಆದರೆ, ಸರ್ಕಾರ ಅದನ್ನು ಮಾಡಲಿಲ್ಲ. ಹಾಗಾಗಿ, ಬೆಂಗಳೂರಿನಲ್ಲಿ ಅವತ್ತೆ‌ ಎಲ್ಲ ಹೋರಾಟಗಾರರು ಸೇರಿಕೊಂಡು ಬೆಳಗಾವಿ ಅಧಿವೇಶನಕ್ಕೆ ಸರ್ಕಾರ ಬಂದಾಗ ನಮ್ಮ ಆಕ್ರೋಶವನ್ನು ತೋರಿಸಬೇಕೆಂದು ನಿರ್ಧರಿಸಿದ್ದೆವು. ಆ ರೀತಿ ಈಗ ಅಹಿಂಸಾತ್ಮಕ ಚಳವಳಿ ಕೈಗೆತ್ತಿಕೊಂಡಿದ್ದೇವೆ ಎಂದರು.

ಈ ವೇಳೆ ಮಾಜಿ ಸಚಿವ ಶಶಿಕಾಂತ ನಾಯಿಕ, ಮುಖಂಡರಾದ ನಿಂಗಪ್ಪ ಫಿರೋಜಿ, ನ್ಯಾಯವಾದಿ ಆರ್.ಸಿ.ಪಾಟೀಲ, ಗುಂಡು ಪಾಟೀಲ, ಧರೆಪ್ಪ ಠಕ್ಕನ್ನವರ, ಪೂಜಾ ಸವದತ್ತಿ ಸೇರಿ ಮತ್ತಿತರರು ಇದ್ದರು.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಹೊಡೆತಕ್ಕೆ ಬಿಜೆಪಿಯವರು ಶೇಕ್ ಆಗುತ್ತಿದ್ದಾರೆ: ಸಚಿವ ಶಿವರಾಜ ತಂಗಡಗಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.