ETV Bharat / bharat

ಕೇರಳ ಪೊಲೀಸರಿಂದ ಶಬರಿಮಲೆ ಸಂಪ್ರದಾಯಕ್ಕೆ ಧಕ್ಕೆ ಆರೋಪ: ವಿವಾದ ಸೃಷ್ಟಿಸಿದ ವೈರಲ್ ಫೋಟೋ

ಶಬರಿಮಲೆ ದೇವಾಲಯದ ಪವಿತ್ರ 18 ಮೆಟ್ಟಿಲುಗಳ ಮೇಲೆ ಪೊಲೀಸರು ನಿಂತು ತೆಗೆಸಿಕೊಂಡ ಫೋಟೋ ಇದೀಗ ವಿವಾದ ಸೃಷ್ಟಿಸಿದೆ.

ಶಬರಿಮಲೆ
ಶಬರಿಮಲೆ (ETV Bharat)
author img

By ETV Bharat Karnataka Team

Published : 3 hours ago

Updated : 2 hours ago

ಪಥನಂತಿಟ್ಟ, ಕೇರಳ: ಶಬರಿಮಲೆ ದೇಗುಲದ ಪವಿತ್ರ 18 ಮೆಟ್ಟಿಲುಗಳ ಮೇಲೆ ಪೊಲೀಸರು ಸಮವಸ್ತ್ರ ಧರಿಸಿದ ಕೇರಳ ಪೊಲೀಸರು ನಿಂತಿರುವ ಚಿತ್ರವೊಂದು ವೈರಲ್ ಆಗಿದ್ದು, ವಿವಾದ ಸೃಷ್ಟಿಸಿದೆ. ಇದು ದೇವಾಲಯದ ಸಂಪ್ರದಾಯಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಭಕ್ತರು ಆರೋಪಿಸಿದ್ದಾರೆ. ವಿವಾದವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಘಟನೆಯ ಬಗ್ಗೆ ವರದಿ ಸಲ್ಲಿಸುವಂತೆ ಕೇರಳದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇಲಾಖೆಗೆ ಸೂಚಿಸಿದ್ದಾರೆ.

ಗರ್ಭಗುಡಿಗೆ ಬೆನ್ನು ಮಾಡಿ ನಿಂತ ಪೊಲೀಸರು: ಈ ಚಿತ್ರವನ್ನು ಶನಿವಾರ ತೆಗೆಯಲಾಗಿದ್ದು, ಇದರಲ್ಲಿ ಸಮವಸ್ತ್ರದಲ್ಲಿರುವ ಸುಮಾರು 28 ಪೊಲೀಸರು ಗರ್ಭಗುಡಿಗೆ ಬೆನ್ನು ಮಾಡಿ ನಿಂತಿರುವುದು ಕಾಣಿಸಿದೆ. ಇದು ದೇವಾಲಯದ ಸಂಪ್ರದಾಯ ಮತ್ತು ಭಕ್ತರ ನಂಬಿಕೆಗಳ ಉಲ್ಲಂಘನೆಯಾಗಿದೆ ಎನ್ನಲಾಗಿದೆ. ಪ್ರತಿದಿನದ ವಾಡಿಕೆಯಂತೆ ಮಧ್ಯಾಹ್ನ ದೇವಸ್ಥಾನದ ಬಾಗಿಲು ಮುಚ್ಚಿದ ನಂತರ ಈ ಫೋಟೊ ಸೆರೆಹಿಡಿಯಲಾಗಿದೆ ಎನ್ನಲಾಗಿದೆ.

ದೇವಾಲಯದ ಪುರೋಹಿತರು ಸಹ ಗರ್ಭಗುಡಿಯ ಕಡೆಗೆ ಮುಖ ಮಾಡಿಕೊಂಡೇ ಈ 18 ಮೆಟ್ಟಿಲುಗಳನ್ನು ಇಳಿಯುತ್ತಾರೆ ಎಂಬುದು ಗಮನಾರ್ಹ.

ಭಕ್ತರ ಜನಸಂದಣಿ ನಿಯಂತ್ರಣಕ್ಕೆ ನಿಯೋಜಿಸಲಾದ ಪೊಲೀಸರು ಮೆಟ್ಟಿಲುಗಳ ಮೇಲೆ ನಿಂತು ಫೋಟೊ ತೆಗೆಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ದೇವಾಲಯದಲ್ಲಿ ಎರಡು ತಿಂಗಳ ಉತ್ಸವದ ಋತು ನವೆಂಬರ್ 16 ರಂದು ಪ್ರಾರಂಭವಾಗಿದೆ. ಪ್ರತಿದಿನ 70,000 ಯಾತ್ರಾರ್ಥಿಗಳಿಗೆ ದರ್ಶನಕ್ಕೆ ಅವಕಾಶವಿದ್ದು, ಆನ್ ಲೈನ್ ಮೂಲಕ ದರ್ಶನದ ಬುಕಿಂಗ್ ಮಾಡಬಹುದಾಗಿದೆ.

3,000 ಅಡಿ ಎತ್ತರದ ಪರ್ವತ ಶ್ರೇಣಿಗಳಲ್ಲಿ ನೆಲೆಸಿರುವ ಅಯ್ಯಪ್ಪ ಸ್ವಾಮಿ: ಸಮುದ್ರ ಮಟ್ಟದಿಂದ 3,000 ಅಡಿ ಎತ್ತರದಲ್ಲಿರುವ ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಗಳಲ್ಲಿ ನೆಲೆಗೊಂಡಿರುವ ಶಬರಿಮಲೆ ದೇವಸ್ಥಾನವು ಪಥನಂತಿಟ್ಟ ಜಿಲ್ಲೆಯ ಪಂಬಾದಿಂದ ನಾಲ್ಕು ಕಿ.ಮೀ ಎತ್ತರದಲ್ಲಿದೆ. ಇದು ರಾಜ್ಯ ರಾಜಧಾನಿಯಿಂದ ಸುಮಾರು 100 ಕಿ.ಮೀ ದೂರದಲ್ಲಿದೆ.

ಪ್ರೌಢಾವಸ್ಥೆಯನ್ನು ತಲುಪಿದ ಮಹಿಳೆಯರಿಗೆ ದೇವಾಲಯಕ್ಕೆ ಪ್ರವೇಶವಿಲ್ಲ. ಪಂಬಾ ನದಿಯಿಂದ ಕಾಲ್ನಡಿಗೆಯಲ್ಲಿ ಮಾತ್ರ ದೇವಾಲಯವನ್ನು ತಲುಪಬಹುದಾಗಿದೆ.

ಸಂಪ್ರದಾಯದ ಪ್ರಕಾರ ಪವಿತ್ರ ದೇವಾಲಯಕ್ಕೆ ಹೊರಡುವ ಮೊದಲು, ಯಾತ್ರಿಕರು ಸಾಮಾನ್ಯವಾಗಿ 41 ದಿನಗಳ ಕಠಿಣ ವ್ರತ ಕೈಗೊಳ್ಳುತ್ತಾರೆ. ಈ ಅವಧಿಯಲ್ಲಿ ಅವರು ಪಾದರಕ್ಷೆಗಳನ್ನು ಧರಿಸುವುದಿಲ್ಲ, ಕಪ್ಪು ಧೋತಿ ಧರಿಸುತ್ತಾರೆ ಮತ್ತು ಕಟ್ಟುನಿಟ್ಟಾದ ಸಸ್ಯಾಹಾರಿ ಆಹಾರ ಕ್ರಮ ಅನುಸರಿಸುತ್ತಾರೆ. ಪ್ರತಿಯೊಬ್ಬ ಯಾತ್ರಿಕನು ತನ್ನ ತಲೆಯ ಮೇಲೆ 'ಇರುಮುಡಿ' ಹೊತ್ತುಕೊಳ್ಳಬೇಕಾಗುತ್ತದೆ. ಇರುಮುಡಿ ಇಲ್ಲದೆ ಸನ್ನಿಧಾನದ ಪವಿತ್ರ 18 ಮೆಟ್ಟಿಲುಗಳನ್ನು ಹತ್ತಲು ಯಾರಿಗೂ ಅವಕಾಶವಿಲ್ಲ. ಪೊಲೀಸರಿಂದ ಸಂಪ್ರದಾಯದ ಉಲ್ಲಂಘನೆ ಆಗಿದೆಯಾ ಮತ್ತು ಆಗಿದ್ದರೆ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ : ಬ್ಯಾಲೆಟ್ ಪೇಪರ್ ಮತದಾನ ಮರು ಜಾರಿ ಕೋರಿದ್ದ ಅರ್ಜಿ ಸುಪ್ರೀಂನಿಂದ ವಜಾ; ಸೋತಾಗ ತಪ್ಪು, ಗೆದ್ದಾಗ ಸರಿ, ಇದು ಹೇಗೆ?- ಕೋರ್ಟ್​ ಪ್ರಶ್ನೆ

Last Updated : 2 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.