Roasted Bengal Gram Chikki : ನಮ್ಮಲ್ಲಿರುವ ಬಹುತೇಕರು ಬೆಲ್ಲದಿಂದ ಮಾಡಿದ ತಿಂಡಿಗಳನ್ನು ಇಷ್ಟಪಡುತ್ತಾರೆ. ಮಕ್ಕಳು ಕೂಡ ಈ ತಿಂಡಿಗಳನ್ನು ಸೇವಿಸಲು ಇಷ್ಟಪಡುತ್ತಾರೆ. ಆರೋಗ್ಯಕ್ಕೆ ಉತ್ತಮವಾದ ಬೆಲ್ಲದಿಂದ ಮಾಡಲಾಗುವ ವಿವಿಧ ಚಿಕ್ಕಿಗಳಲ್ಲಿ ಹಲವು ರೀತಿಯ ಪೋಷಕಾಂಶಗಳಿವೆ. ಹೆಚ್ಚಿನ ಜನರು ಶೇಂಗಾದಿಂದ ಗರಿಗರಿಯಾದ ಹಾಗೂ ರುಚಿಕರವಾದ ಚಿಕ್ಕಿಗಳನ್ನು ಸಿದ್ಧಪಡಿಸುತ್ತಾರೆ. ಆದರೆ ನಾವು ನಿಮಗೆ ಪುಟಾಣಿಯಿಂದ ಮಾಡಿದ ರುಚಿಕರ ಚಿಕ್ಕಿ ತಯಾರಿಸೋದು ಹೇಗೆ ಎಂಬುದನ್ನು ತಿಳಿಯೋಣ.
ಪುಟಾಣಿ ಚಿಕ್ಕಿಗೆ ಬೇಕಾಗುವ ಪದಾರ್ಥಗಳು:
- ಪುಟಾಣಿ ಚಿಕ್ಕಿ - ಕಪ್
- ಶುಂಠಿ - ಕಪ್
- ತುಪ್ಪ - ಒಂದು ಚಮಚ
- ಅಡುಗೆ ಸೋಡಾ - ಒಂದು ಟೀಚಮಚ
- ಒಣ ಖರ್ಜೂರ - ಕಾಲು ಕಪ್
- ಏಲಕ್ಕಿ - 3
ಪುಟಾಣಿ ಚಿಕ್ಕಿ ತಯಾರಿಸುವ ವಿಧಾನ:
- ಮೊದಲು ಸಿಲ್ವರ್ ಫಾಯಿನ್ನ್ನು ಕೇಕ್ ಅಚ್ಚಿನಲ್ಲಿ ಹಾಕಿ ಅದನ್ನು ಎಲ್ಲಾ ಕಡೆ ಹರಡಿಕೊಳ್ಳಿ.
- ನಂತರ ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಬೆಲ್ಲವನ್ನು ಹಾಕಿ. ಸ್ಟವ್ ಮಧ್ಯಮ ಉರಿಯಲ್ಲಿ ಇರಿಸಿ ಮತ್ತು ಬೆಲ್ಲವನ್ನು ಸಂಪೂರ್ಣವಾಗಿ ಕರಗಿಸಿ. ಅಗತ್ಯವಿದ್ದರೆ, ಒಂದು ಟೀಸ್ಪೂನ್ ನೀರನ್ನು ಮಾತ್ರ ಸೇರಿಸಿ.
- ಕರಗಿದ ಬೆಲ್ಲವನ್ನು ಕುದಿಸಿ ಮತ್ತು ಬೆಲ್ಲದ ಪಾಕ ದಪ್ಪವಾಗಬೇಕು.
- ನಂತರ ಕುದಿಯುತ್ತಿರುವ ಪಾಕಕ್ಕೆ ತುಪ್ಪ ಹಾಕಿ ಕಲಸಿ.
- ಪಾಕ ಸಿದ್ಧವಾದ ನಂತರ, ಅಡಿಗೆ ಸೋಡಾ ಸೇರಿಸಿ ಮಿಶ್ರಣ ಮಾಡಿ. ಬಳಿಕ ಒಣ ಖರ್ಜೂರ ಹಾಗೂ ಪುಟಾಣಿ ಮಿಶ್ರಣ ಮಾಡಿ.
- ಸ್ವಲ್ಪ ಸಮಯದ ನಂತರ ಏಲಕ್ಕಿ ಕಾಳುಗಳನ್ನು ಪುಡಿ ಮಾಡಿ, ಇದರೊಳಗೆ ಮಿಶ್ರಣ ಮಾಡಿ.
- ಈ ಮಿಶ್ರಣವನ್ನು ದಪ್ಪವಾಗಿ ಸಿಲ್ವರ್ ಫಾಯಿಲ್ ಕೇಕ್ ಅಚ್ಚಿನಲ್ಲಿ ಹಾಕಿ ಹಾಗೂ ಎಲ್ಲವನ್ನೂ ಇದೇ ರೀತಿ ಮಾಡಿ. ( ಸಿಲ್ವರ್ ಫಾಯಿಲ್ ಇಲ್ಲದಿರುವವರು ತುಪ್ಪ ಹಚ್ಚಿರುವ ತಟ್ಟೆಯನ್ನು ಬಳಸಿಕೊಳ್ಳಬಹುದು. )
- ತುಪ್ಪ ಸವರಿದ ಚಪಾತಿ ಮಾಡುವ ಲತ್ತುಗುಣಿಯಿಂದ ಸಮವಾಗಿ ತೀಡಬೇಕು.
- ಜೊತೆಗೆ, ಒಂದು ಚಾಕುವಿನಿಂದ, ನಿಮಗೆ ಬೇಕಾದ ಗಾತ್ರದಲ್ಲಿ ಕತ್ತರಿಸಿ.
- 1ರಿಂದ 3 ಗಂಟೆಗಳ ನಂತರ ನಿಮ್ಮ ಮುಂದೆ ರುಚಿಕರವಾದ ಪುಟಾಣಿ ಚಿಕ್ಕಿಗಳು ಸಿದ್ಧವಾಗುತ್ತವೆ.
- ನಿಮಗೆ ಇಷ್ಟವಾದಲ್ಲಿ ಪುಟಾಣಿ ಚಿಕ್ಕಿ ಟ್ರೈ ಮಾಡಬಹುದು. ಮನೆಯಲ್ಲಿರುವ ಎಲ್ಲರೂ ಇಷ್ಟಪಟ್ಟು ಸೇವಿಸುತ್ತಾರೆ.
ಇವುಗಳನ್ನು ಓದಿ: ಸೂಪರ್ ಟೇಸ್ಟಿ ಶೇಂಗಾ ಕೊಬ್ಬರಿ ಚಿಕ್ಕಿ: ಹೀಗೆ ಸಿದ್ಧಪಡಿಸಿದರೆ ಚೆನ್ನಾಗಿರುತ್ತೆ ತಿಂಗಳವರೆಗೂ ಫ್ರೆಶ್! ಟ್ರೈ ಮಾಡಿ ನೋಡಿ