ನವದೆಹಲಿ: ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆದರು. ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಸಿಕ್ಸರ್ ಬಾರಿಸಿದ ಮೊದಲ ಆಟಗಾರರಾಗಿ ಹೊರಹೊಮ್ಮಿದರು. ಈ ಮೂಲಕ ವೆಸ್ಟ್ ಇಂಡೀಸ್ ದೈತ್ಯ ಬ್ಯಾಟರ್ ಕ್ರಿಸ್ಗೇಲ್ ಹೆಸರಲ್ಲಿದ್ದ ರೆಕಾರ್ಡ್ ಪುಡಿ ಮಾಡಿದರು. ಇದರ ಜೊತೆಗೆ ವಿಶ್ವಕಪ್ನಲ್ಲಿ ಅತಿ ವೇಗದ 1 ಸಾವಿರ ರನ್ ಪೂರೈಸಿದ ಜಂಟಿ ಅಗ್ರ ಆಟಗಾರ ಖ್ಯಾತಿಗೂ ಪಾತ್ರರಾದರು.
-
🗣️ "That would have been six on any ground in the WORLD!"
— ICC Cricket World Cup (@cricketworldcup) October 11, 2023 " class="align-text-top noRightClick twitterSection" data="
This Rohit Sharama six is one of the moments that could be featured in your @0xFanCraze Crictos Collectible packs!
Visit https://t.co/2yiXAnq84l to own iconic moments from the #CWC23 pic.twitter.com/WmGs8n81fL
">🗣️ "That would have been six on any ground in the WORLD!"
— ICC Cricket World Cup (@cricketworldcup) October 11, 2023
This Rohit Sharama six is one of the moments that could be featured in your @0xFanCraze Crictos Collectible packs!
Visit https://t.co/2yiXAnq84l to own iconic moments from the #CWC23 pic.twitter.com/WmGs8n81fL🗣️ "That would have been six on any ground in the WORLD!"
— ICC Cricket World Cup (@cricketworldcup) October 11, 2023
This Rohit Sharama six is one of the moments that could be featured in your @0xFanCraze Crictos Collectible packs!
Visit https://t.co/2yiXAnq84l to own iconic moments from the #CWC23 pic.twitter.com/WmGs8n81fL
ರೋಹಿತ್ ಬ್ಯಾಟ್ನಿಂದ ಮೂರು ಪ್ರಕಾರದ ಕ್ರಿಕೆಟ್‌ನಲ್ಲಿ (ಟೆಸ್ಟ್, ಏಕದಿನ, ಟಿ20) ಈವರೆಗೂ 556 ಸಿಕ್ಸರ್ ಸಿಡಿದಿವೆ. ಕ್ರಿಸ್ಗೇಲ್ 553 ಸಿಕ್ಸರ್ ಬಾರಿಸಿದ್ದರು. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲೆ ಸೃಷ್ಟಿಸಿದರು.
ರೋಹಿತ್ ಶರ್ಮಾ 473 ಇನ್ನಿಂಗ್ಸ್ ಮೂಲಕ 556 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 550 ಸಿಕ್ಸರ್‌ಗಳನ್ನು ಬಾರಿಸಿದ ಖ್ಯಾತಿಗೂ ರೋಹಿತ್ ಒಳಗಾದರು. ಇದಕ್ಕೂ ಮೊದಲು 200, 400 ಮತ್ತು 500 ಸಿಕ್ಸರ್‌ಗಳನ್ನು ಬಾರಿಸಿದ ವೇಗದ ಬ್ಯಾಟರ್ ಆಗಿದ್ದರು. 300 ಸಿಕ್ಸರ್‌ಗಳನ್ನು ಬಾರಿಸಿದ ಎರಡನೇ ವೇಗದ ಬ್ಯಾಟರ್ ಕೂಡ ರೋಹಿತ್ ಆಗಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 295 ಇನ್ನಿಂಗ್ಸ್‌ಗಳಲ್ಲಿ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ 476 ಸಿಕ್ಸರ್ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಇವರ ಬಳಿಕ ನ್ಯೂಜಿಲ್ಯಾಂಡ್ ಬ್ಯಾಟರ್ಗಳಾದ ಬ್ರೆಂಡನ್ ಮೆಕಲಂ 398, ಮಾರ್ಟಿನ್ ಗಪ್ಟಿಲ್ 383 ಸಿಕ್ಸರ್ ಸಿಡಿಸಿದ್ದಾರೆ.
ಇದನ್ನೂ ಓದಿ: ಲಂಕಾ ವಿರುದ್ಧದ ಗೆಲುವನ್ನು 'ಗಾಜಾದ ಸಹೋದರ ಸಹೋದರಿಯರಿಗೆ' ಅರ್ಪಿಸಿದ ಪಾಕ್ ಕ್ರಿಕೆಟಿಗ ಮೊಹಮ್ಮದ್ ರಿಜ್ವಾನ್