ETV Bharat / sports

ರೋಹಿತ್​ ಶರ್ಮಾಗೆ ಬೆನ್ನುನೋವು, ವೈದ್ಯಕೀಯ ತಂಡದಿಂದ ಚಿಕಿತ್ಸೆ.. - ರೋಹಿತ್​ ಗಾಯದ ಬಗ್ಗೆ ಬಿಸಿಸಿಐ ಟ್ವೀಟ್​

ಬೆನ್ನು ನೋವಿನಿಂದ ಬಳಲುತ್ತಿರುವ ಭಾರತ ತಂಡದ ನಾಯಕ ರೋಹಿತ್​ ಶರ್ಮಾ ಉಳಿದ ಪಂದ್ಯಗಳಿಗೆ ಲಭ್ಯರಾಗುತ್ತಾರಾ ಇಲ್ಲವೇ ಎಂಬ ಬಗ್ಗೆ ಬಿಸಿಸಿಐ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ವೈದ್ಯಕೀಯ ತಂಡ ರೋಹಿತ್​ಗೆ ಚಿಕಿತ್ಸೆ ಮುಂದುವರಿಸಿದೆ.

Etv Bharatrohit-sharma-provides-update-on-his-injury
Etv Bharatರೋಹಿತ್​ ಶರ್ಮಾಗೆ ಬೆನ್ನುನೋವು
author img

By

Published : Aug 3, 2022, 10:31 AM IST

ಭಾರತ ತಂಡದ ನಾಯಕ ರೋಹಿತ್ ಶರ್ಮಾ ವೆಸ್ಟ್​ ಇಂಡೀಸ್​ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಗಾಯಗೊಂಡು ಆಟದ ಮಧ್ಯೆಯೇ ನಿವೃತ್ತಿ ಪಡೆದರು. ಇದು ತಂಡ ಮತ್ತು ಭಾರತೀಯ ಕ್ರಿಕೆಟಿಗರಲ್ಲಿ ಆತಂಕ ಉಂಟು ಮಾಡಿದೆ. ವಿಂಡೀಸ್​ ವಿರುದ್ಧ ಇನ್ನೂ 2 ಪಂದ್ಯಗಳು ಬಾಕಿ ಇವೆ. 2-1 ರಲ್ಲಿ ಮುನ್ನಡೆಯಲ್ಲಿರುವ ಭಾರತ ಇನ್ನೊಂದು ಪಂದ್ಯ ಗೆದ್ದಲ್ಲಿ ಸರಣಿ ಗೆಲ್ಲಲಿದೆ.

ಪಂದ್ಯದಲ್ಲಿ 11 ರನ್​ ಗಳಿಸಿ ಆಟವಾಡುತ್ತಿದ್ದ ರೋಹಿತ್​ ಶರ್ಮಾ ಸ್ನಾಯು ಸೆಳೆತಕ್ಕೆ ಒಳಗಾದರು. ಈ ವೇಳೆ, ತಂಡದ ಫಿಜಿಯೋ ತಪಾಸಣೆ ನಡೆಸಿದರು. ನೋವು ಹೆಚ್ಚಾದ ಕಾರಣ ಫಿಸಿಯೋ ಸಲಹೆಯ ಮೇರೆಗೆ ಮೈದಾನ ತೊರೆದರು.

  • 🚨 UPDATE: #TeamIndia captain Rohit Sharma has a back spasm.

    The BCCI medical team is monitoring his progress.#WIvIND

    — BCCI (@BCCI) August 2, 2022 " class="align-text-top noRightClick twitterSection" data=" ">

ಬಳಿಕ ಬಿಸಿಸಿಐ ರೋಹಿತ್ ಗಾಯದ ಬಗ್ಗೆ ಅಪ್ಡೇಟ್​​ ನೀಡಿತು. ರೋಹಿತ್​ ವಾಸ್ತವವಾಗಿ ಬೆನ್ನು ಸೆಳೆತಕ್ಕೆ ಒಳಗಾಗಿದ್ದಾರೆ. ವೈದ್ಯಕೀಯ ತಂಡ ನಿಗಾ ವಹಿಸುತ್ತಿದೆ ಎಂದು ಟ್ವೀಟ್​ ಮಾಡಿದೆ.

ಸೂರ್ಯಕುಮಾರ್​ ಯಾದವ್​ರ ಹೋರಾಟದ ಫಲವಾಗಿ ಭಾರತ 3ನೇ ಟಿ - 20 ಪಂದ್ಯದಲ್ಲಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಪಂದ್ಯದ ಮುಕ್ತಾಯದ ಬಳಿಕ ಆಟಗಾರರೊಂದಿಗೆ ರೋಹಿತ್ ಕಾಣಿಸಿಕೊಂಡರು. ಮುಂದಿನ ಪಂದ್ಯಗಳಿಗೆ ಕೆಲ ದಿನಗಳ ಬಿಡುವು ನೀಡಲಾಗಿದೆ. ಅಷ್ಟೊತ್ತಿಗಾಗಲೇ ರೋಹಿತ್​ ನೋವಿನಿಂದ ಚೇತರಿಸಿಕೊಳ್ಳುವ ಸಾಧ್ಯತೆ ಇದೆ.

ಓದಿ: WI vs Ind: ವಾರ್ನರ್​ ಪಾರ್ಕ್​ನಲ್ಲಿ ಮೆರೆದಾಡಿದ ಭಾರತ.. ವಿಂಡೀಸ್​ ವಿರುದ್ಧ 7 ವಿಕೆಟ್​ ಜಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.