ETV Bharat / sports

ವರ್ಷದ ಟೆಸ್ಟ್​ ತಂಡ ಪ್ರಕಟಿಸಿದ ಕ್ರಿಕೆಟ್​ ಆಸ್ಟ್ರೇಲಿಯಾ ; ರೋಹಿತ್​ ಸೇರಿ ಭಾರತದ ನಾಲ್ವರ ಆಯ್ಕೆ, ಕೊಹ್ಲಿಗಿಲ್ಲ ಸ್ಥಾನ! - ವರ್ಷದ ಟೆಸ್ಟ್​ ತಂಡ ಪ್ರಕಟಿಸಿದ ಕ್ರಿಕೆಟ್​ ಆಸ್ಟ್ರೇಲಿಯಾ

ಕ್ರಿಕೆಟ್ ಆಸ್ಟ್ರೇಲಿಯಾ ಈ ವರ್ಷದ ಅತ್ಯುತ್ತಮ ಟೆಸ್ಟ್ ತಂಡ ಆಯ್ಕೆ ಮಾಡಿದ್ದು, ಆಡುವ 11ರ ಬಳಗದಲ್ಲಿ ಟೀಂ ಇಂಡಿಯಾ ಟೆಸ್ಟ್​ ನಾಯಕ ವಿರಾಟ್​ ಕೊಹ್ಲಿಗೆ ಸ್ಥಾನ ನೀಡಿಲ್ಲ..

Rohit Sharma in Cricket Australia XI of 2021

author img

By

Published : Dec 31, 2021, 10:17 PM IST

ಮೆಲ್ಬೋರ್ನ್​​(ಆಸ್ಟ್ರೇಲಿಯಾ) : ಈ ವರ್ಷದ ಅತ್ಯುತ್ತಮ ಟೆಸ್ಟ್​ ತಂಡ ಪ್ರಕಟಿಸಿರುವ ಕ್ರಿಕೆಟ್​​ ಆಸ್ಟ್ರೇಲಿಯಾ ಭಾರತದ ನಾಲ್ವರು ಆಟಗಾರರನ್ನ ಆಯ್ಕೆ ಮಾಡಿದೆ. ವಿಶೇಷವೆಂದರೆ ವಿಶ್ವ ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಬರೆದಿರುವ ಟೀಂ ಇಂಡಿಯಾ ಟೆಸ್ಟ್​ ಕ್ಯಾಪ್ಟನ್​ ವಿರಾಟ್ ಕೊಹ್ಲಿಗೆ ಆವಕಾಶ ನೀಡಿಲ್ಲ.

ತಂಡದಲ್ಲಿ ಭಾರತದ ಸೀಮಿತ ಓವರ್​ಗಳ ನಾಯಕ ರೋಹಿತ್​ ಶರ್ಮಾ,ವಿಕೆಟ್ ಕೀಪರ್​​ ಬ್ಯಾಟ್ಸ್​ಮನ್​ ರಿಷಭ್ ಪಂತ್, ರವಿಚಂದ್ರನ್​ ಅಶ್ವಿನ್ ಹಾಗೂ ಅಕ್ಷರ್ ಪಟೇಲ್​ ಅವಕಾಶ ಪಡೆದಿದ್ದಾರೆ. 2021ರಲ್ಲಿ ಜೋ ರೂಟ್​ ಅತಿ ಹೆಚ್ಚು ಟೆಸ್ಟ್​ ರನ್​ಗಳಿಕೆ ಮಾಡಿದ್ದು, ಮಧ್ಯಮ ಕ್ರಮಾಂಕದ ಬ್ಯಾಟರ್​ ಆಗಿ ನೇಮಕಗೊಂಡಿದ್ದಾರೆ.

ಇದನ್ನೂ ಓದಿರಿ: ಆಫ್ರಿಕಾ ವಿರುದ್ಧ ODI ಸರಣಿಗೆ ಟೀಂ ಇಂಡಿಯಾ ಪ್ರಕಟ.. ಕೆ ಎಲ್​ ರಾಹುಲ್​ಗೆ ನಾಯಕತ್ವದ ಜವಾಬ್ದಾರಿ

2021ರಲ್ಲಿ ಟೀಂ ಇಂಡಿಯಾ ಟೆಸ್ಟ್ ನಾಯಕ ವಿರಾಟ್​ ಕೊಹ್ಲಿ ಬ್ಯಾಟಿಂಗ್​ನಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಏನು ಮೂಡಿ ಬಂದಿಲ್ಲ. ಆದರೆ, ಅನೇಕ ಪಂದ್ಯಗಳಲ್ಲಿ ತಂಡವನ್ನ ಅತ್ಯುತ್ತಮವಾಗಿ ಮುನ್ನಡೆಸಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆ ಮಾಡಿರುವ ಟೆಸ್ಟ್ ತಂಡ : ದಿಮುತ್​​ ಕರುಣಾರತ್ನೆ(ಕ್ಯಾಪ್ಟನ್​​), ರೋಹಿತ್​ ಶರ್ಮಾ, ಮಾರ್ನಸ್​ ಲ್ಯಾಬುಸ್ಟಾಗ್ನೆ, ಜೋ ರೂಟ್, ಫವಾದ್​ ಆಲಂ, ರಿಷಭ್ ಪಂತ್​(ವಿ.ಕೀ), ರವಿಚಂದ್ರನ್​ ಅಶ್ವಿನ್​, ಕೈಲ್​ ಜೇಮ್ಸನ್​, ಅಕ್ಷರ್ ಪಟೇಲ್, ಹಸನ್​ ಅಲಿ, ಶಾಹೀನ್​ ಶಾ ಆಫ್ರಿದಿ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.