ETV Bharat / sports

ರಿಷಭ್​ ಪಂತ್​ ನಾಯಕತ್ವದಲ್ಲೇ 2024ರ ಐಪಿಎಲ್​ ಆಡಲಿದೆ ಡೆಲ್ಲಿ ಕ್ಯಾಪಿಟಲ್ಸ್..!​​ - ETV Bharath Karnataka

Rishabh Pant will lead Delhi Capitals in IPL 2024: ಕಾರು ಅಪಘಾತದಿಂದ ಚೇತರಿಸಿಕೊಂಡಿರುವ ರಿಷಭ್​​ ಪಂತ್​ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಆಡುತ್ತಾರೆ ಎಂದು ವರದಿಯಾಗಿದೆ.

Rishabh Pant
Rishabh Pant
author img

By ETV Bharat Karnataka Team

Published : Dec 12, 2023, 7:06 PM IST

ಹೈದರಾಬಾದ್​​: ಅಂದು ಡಿಸೆಂಬರ್​​ 30, 2022 ಭಾರತ ತಂಡದ ಯುವ ಕ್ರಿಕೆಟರ್​ ರಿಷಭ್​​ ಪಂತ್​ ಕಾರು ಅಪಘಾತಕ್ಕೀಡಾಗಿದ್ದರು. ಕ್ರಿಕೆಟಿಗ ಗಂಭೀರ ಗಾಯಕ್ಕೆ ತುತ್ತಾಗಿದ್ದರು. ಅವರ ಕಾರು ಅಪಘಾತದ ಸ್ಥಳದಲ್ಲೆ ಬೆಂಕಿಗೆ ಆಹುತಿ ಆಗಿತ್ತು. ಅಪಘಾತದ ತೀವ್ರತೆಯಲ್ಲಿ ರಿಷಭ್​​ ಪಂತ್​ ಅವರ ಕಾಲು ಮತ್ತು ಹಣೆಗೆ ಗಾಯವಾಗಿತ್ತು. 18 ದಿನ ಕಳೆದರೆ ಈ ಘಟನೆಗೆ ಒಂದು ವರ್ಷ ಆಗುತ್ತದೆ.

ಅಪಘಾತಕ್ಕೊಳಗಾದ ವಿಕೆಟ್​ ಕೀಪರ್​ ರಿಷಭ್​​ ಪಂತ್​ ವರ್ಷದ ನಂತರ ಸಂಪೂರ್ಣ ಚೇತರಿಸಿಕೊಂಡಿದ್ದಾರೆ ಎಂಬ ಸಿಹಿ ಸುದ್ದಿ ಹರಿದಾಡುತ್ತಿದೆ. ಪಂತ್​ 2024ರ 17ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್)​ ವೇಳೆಗೆ ಮೈದಾನಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಈ ವರ್ಷ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ರಿಷಭ್​​ ಪಂತ್​ ಅವರ ನಾಯಕತ್ವದಲ್ಲಿ ಆಡಲಿದೆ ಎಂದು ವರದಿಯಾಗಿದೆ.

ಇತ್ತೀಚೆಗೆ ರಿಷಭ್​​ ಪಂತ್​ ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಜಿಮ್​ನಲ್ಲಿ ವರ್ಕೌಟ್​ ಮಾಡುವ ವಿಡಿಯೋಗಳನ್ನು ಪೋಸ್ಟ್​​ ಮಾಡುತ್ತಿದ್ದು ಸಂಪೂರ್ಣ ಚೇತರಿಸಿಕೊಂಡಂತೆ ಕಂಡು ಬರುತ್ತಿದೆ. ಮುಂದಿನ ವರ್ಷ ಮಾರ್ಚ್​ 23 ರಿಂದ ಮೇ 29ರ ವರೆಗೆ ಐಪಿಎಲ್​ ನಡೆಯಲಿದೆ. ಇನ್ನು ಮೂರು ತಿಂಗಳು ಬಾಕಿ ಇದ್ದು ಅಷ್ಟರೊಳಗೆ ಮೈದಾನಕ್ಕೆ ಇಳಿಯುವ ನಿರೀಕ್ಷೆ ಇದೆ.

ಡಿ. 19 ರಂದು ಬಿಡ್​ ವೇಳೆ ಮಾಹಿತಿ: ಡಿಸೆಂಬರ್​ 19 ರಂದು ದುಬೈನಲ್ಲಿ 2024ರ ಐಪಿಎಲ್​ ಮಿನಿ ಹರಾಜು ನಡೆಯಲಿದೆ. ಈ ವೇಳೆ ನಾಯಕ ಯಾರೆಂದು ತಿಳಿದು ಬರಲಿದೆ ಎನ್ನಲಾಗಿದೆ. ಅಲ್ಲದೇ, ಇತ್ತಿಚೆಗೆ ಕೋಲ್ಕತ್ತಾದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಶಿಬಿರದಲ್ಲಿ ಪಂತ್​ ಕಾಣಿಸಿಕೊಂಡಿದ್ದಾರೆ. ಅಲ್ಲಿ ಅವರು ಕೋಚಿಂಗ್ ಸಿಬ್ಬಂದಿ ರಿಕಿ ಪಾಂಟಿಂಗ್, ಸೌರವ್ ಗಂಗೂಲಿ ಮತ್ತು ಪ್ರವೀಣ್ ಆಮ್ರೆ ಅವರೊಂದಿಗೆ ಸಮಾಲೋಚಿಸಿದ್ದಾರೆ ಎನ್ನಲಾಗಿದೆ.

ಟಿ20 ವಿಶ್ವಕಪ್​ ಆಡ್ತಾರಾ ಪಂತ್​: ಐಪಿಎಲ್​ನಲ್ಲಿ ಪಂತ್​ ಆಡುತ್ತಾರೆ ಎಂದಾದರೆ​ ವಿಶ್ವಕಪ್​ನಲ್ಲೂ ಆಡುವ ನಿರೀಕ್ಷೆ ಇದೆ. ಮೇ ಅಂತ್ಯಕ್ಕೆ ಐಪಿಎಲ್​ ಮುಕ್ತಾಯವಾದರೆ, ಜೂನ್​ನಲ್ಲಿ ವೆಸ್ಟ್​ ಇಂಡೀಸ್​ ಮತ್ತು ಯುಎಸ್​ಎನಲ್ಲಿ ಟಿ20 ವಿಶ್ವಕಪ್​ ನಡೆಯಲಿದೆ. ಇದಕ್ಕೆ ಒಂದು ವರ್ಷಕ್ಕೂ ಹೆಚ್ಚಿನ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ದೂರ ಇದ್ದ ಪಂತ್​ ಅವರನ್ನು ಆಯ್ಕೆದಾರರು ಐಪಿಎಲ್​ ಆಧಾರದಲ್ಲಿ ತೆಗೆದುಕೊಳ್ಳುತ್ತಾರಾ ಎಂಬುದು ಪ್ರಶ್ನೆಯಾಗಿದೆ. ವಿಕೆಟ್​ ಕೀಪರ್​ ಸ್ಥಾನಕ್ಕೆ ಇಶಾನ್​ ಕಿಶನ್​ ಮತ್ತು ಜಿತೇಶ್​ ಶರ್ಮಾ ಪ್ರಸ್ತುತ ಪಂತ್​ಗೆ ಪ್ರತಿಸ್ಪರ್ಧಿಗಳಾಗಿದ್ದಾರೆ.

ಕಾರು ಅಪಘಾತದಿಂದ ಗಾಯಗೊಂಡ ರಿಷಬ್​ ಪಂತ್​ 2023ರಲ್ಲಿ ಐಪಿಎಲ್​, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಮತ್ತು ಏಕದಿನ ವಿಶ್ವಕಪ್​ನಲ್ಲಿ ಭಾಗವಹಿಸುವ ಅವಕಾಶವನ್ನು ಕಳೆದುಕೊಂಡರು.

ಇದನ್ನೂ ಓದಿ: ಈ ಬಾರಿ ಗೂಗಲ್​ನಲ್ಲಿ ಹೆಚ್ಚು ಸರ್ಚ್​ ಆದ ಕ್ರಿಕೆಟಿಗ ಶುಭ್ಮನ್​ ಗಿಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.