ETV Bharat / sports

ODI ವಿಶ್ವಕಪ್‌: ಭಾರತ ತಂಡಕ್ಕೆ ಕಿಶನ್ ಅಥವಾ ರಾಹುಲ್? ಪಾಂಟಿಂಗ್‌ ವಿಶ್ಲೇಷಣೆ ಹೀಗಿದೆ.. - ETV Bharath Kannada news

ಇಶಾನ್​ ಕಿಶನ್​ ಮಧ್ಯಮ ಕ್ರಮಾಂಕದಲ್ಲಿ ಬಂದು ರಿಷಭ್​ ಪಂತ್​ ಸ್ಥಾನ ತುಂಬಬೇಕು ಎನ್ನುತ್ತಾರೆ ಪಾಂಟಿಂಗ್​.

Ricky Ponting  predict 2023 World Cup Indian team
ರಿಕ್ಕಿ ಪಾಂಟಿಂಗ್​​
author img

By

Published : Apr 7, 2023, 7:39 PM IST

ದುಬೈ: ಏಕದಿನ ವಿಶ್ವಕಪ್​ಗೆ ಕೆಲವೇ ತಿಂಗಳುಗಳು ಬಾಕಿ ಇವೆ. ಪಂದ್ಯದ ವೇಳೆ ಅಭಿಮಾನಿಗಳು ಹೊಂದುವ "ನವರಸ" ಅನುಭವವನ್ನೇ ಐಸಿಸಿ ಲೋಗೋದ ಟ್ಯಾಗ್​ ಆಗಿ ಬಳಸಿ ವಿಶ್ವಕಪ್​ ವಿನ್ಯಾಸ ಬಿಡುಗಡೆ ಮಾಡಿದೆ. ಭಾರತದಲ್ಲಿ ವಿಶ್ವಕಪ್​ ನಡೆಯಲಿರುವ ಕಾರಣ ಎಲ್ಲರ ಕಣ್ಣುಗಳು ರೋಹಿತ್​ ಬಳಗದ ಮೇಲಿದೆ. ಬ್ಯಾಟಿಂಗ್​ ವೈಫಲ್ಯ ಅನುಭವಿಸುತ್ತಿರುವ ಕೆ.ಎಲ್.ರಾಹುಲ್​ಗೆ ಆರಂಭಿಕ ಸ್ಥಾನ ಸಿಗಲಿದೆಯೇ ಎಂಬ ಪ್ರಶ್ನೆ ಎಲ್ಲರದ್ದು.

ಆಸ್ಟ್ರೇಲಿಯಾದ ಮಾಜಿ ನಾಯಕ, ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್, ಭಾರತದ ವಿಶ್ವಕಪ್​ ತಂಡದಲ್ಲಿ ಕೆಲ ಆಟಗಾರರು ಬಹಳ ಮುಖ್ಯವಾಗುತ್ತಾರೆ ಎಂದು ತಮ್ಮ ಅಭಿಪ್ರಾಯವನ್ನು ಐಸಿಸಿ ವಿಮರ್ಶೆಯ ಇತ್ತೀಚಿನ ಸಂಚಿಕೆಯಲ್ಲಿ ಹೇಳಿದ್ದಾರೆ. ವಿಶ್ವಕಪ್​ ತಂಡದಲ್ಲಿ ಕೆ.ಎಲ್.ರಾಹುಲ್ ಮತ್ತು ಇಶಾನ್ ಕಿಶನ್ ಇಬ್ಬರಿಗೂ ತಂಡದಲ್ಲಿ ಅವಕಾಶ ಸಿಗಲಿದೆ ಎಂದಿದ್ದಾರೆ. ರಿಷಬ್​ ಪಂತ್​ ಕಾರು ಅಪಘಾತದಿಂದ ತಂಡದ ಭಾಗವಾಗಿರಲು ಸಾಧ್ಯವಿರದ ಕಾರಣ ಬದಲಿ ವಿಕೆಟ್​ ಕೀಪರ್​ ಸ್ಥಾನಕ್ಕೆ ಇವರಿಬ್ಬರು ಸೂಕ್ತ. ಕಿಶನ್​ ಎಡಗೈ ಬ್ಯಾಟರ್​ ಆಗಿದ್ದು ತಂಡದಲ್ಲಿ ಬೇಕಾಗುತ್ತಾರೆ ಎಂದು ಹೇಳಿದ್ದಾರೆ.

ರಾಹುಲ್​ ಅವರನ್ನು ಬಿಟ್ಟು ತಂಡ ಮಾಡುತ್ತಾರೆಂದು ನಾನು ಹೇಳಲಾರೆ. ಅವರು ಖಂಡಿತವಾಗಿಯೂ ತಂಡದಲ್ಲಿ ಇರುತ್ತಾರೆ. ಹಾಗೆಯೇ ತಂಡದಲ್ಲಿ ಎಡಗೈ ಬ್ಯಾಟರ್​ನ ಅಗತ್ಯತೆಯ ಹಿನ್ನೆಲೆಯಲ್ಲಿ ಇಶಾನ್ ಕಿಶನ್ ತಂಡ ಇನ್ನೊಂದು ಆಯ್ಕೆ ಆಗಿರಲಿದ್ದಾರೆ. ಎಡಗೈ ಬ್ಯಾಟರ್​ಗಳಾದ ಜಡೇಜ, ಅಕ್ಷರ್​ ಹೇಗೆ ತಂಡಕ್ಕೆ ಆಸರೆಯಾಗುತ್ತಾರೋ ಹಾಗೆಯೇ ಕಿಶನ್ ಪರಿಣಾಮ ಬೀರಲಿದ್ದಾರೆ" ಎನ್ನುತ್ತಾರೆ ಪಾಂಟಿಂಗ್‌.

ಇದನ್ನೂ ಓದಿ: IPL: ಆರ್​ಸಿಬಿ ಸೇರಿದ ವೇಯ್ನ್ ಪಾರ್ನೆಲ್, ವೈಶಾಕ್ ವಿಜಯ್ ಕುಮಾರ್

"ಏಕದಿನ ಕ್ರಿಕೆಟ್​ನಲ್ಲಿ ರಾಹುಲ್​ ಆರಂಭಿಕರಾಗಿ ಪರಿಣಾಮ ಬೀರಿದರೆ, ಟಿ20ಯಲ್ಲಿ ಇಶಾನ್​ ಕಿಶನ್​ ಉತ್ತಮ ಓಪನರ್ ಆಗುತ್ತಾರೆ. ರಿಷಭ್ ಈಗ ಇಲ್ಲದಿರುವುದರಿಂದ, ಮಧ್ಯಮ ಕ್ರಮಾಂಕದಲ್ಲಿ ಸ್ಪೆಷಲಿಸ್ಟ್ ಎಡಗೈ ಬ್ಯಾಟರ್ ಸ್ಥಾನವನ್ನು ಕಿಶನ್​ ತುಂಬಬಹುದು. ಅವರು ನಾಲ್ಕು ಅಥವಾ ಐದನೇ ಆಟಗಾರರಾಗಿ ಕಣಕ್ಕಿಳಿದರೆ, ಸ್ಪಿನ್ನರ್​ಗಳಿಗೆ ಪರಿಣಾಮಕಾರಿ ಬ್ಯಾಟಿಂಗ್​ ಮಾಡಲಿದ್ದಾರೆ. ಹಾಗೇ ರಿಷಭ್​ ಸ್ಥಾನವನ್ನು ತುಂಬುತ್ತಾರೆ" ಎಂದಿದ್ದಾರೆ.

"ಮಧ್ಯಮ ಕ್ರಮಾಂಕದ ಮೂಲಕ ನೀವು ಎಡಗೈ ಆಟಗಾರರನ್ನು ಹೊಂದಿರಬೇಕು. ಹೆಚ್ಚಿನ ತಂಡಗಳಲ್ಲಿ ಎಡಗೈ ಆಫ್-ಸ್ಪಿನ್ ಮತ್ತು ಬಲಗೈ ಲೆಗ್ ಸ್ಪಿನ್ ಇರುತ್ತಾರೆ ಮತ್ತು ಮಧ್ಯಮ ಕ್ರಮಾಂಕದಲ್ಲಿ ನೀವು ಬಲಗೈ ಆಟಗಾರರನ್ನು ಮಾತ್ರ ಪಡೆದಿದ್ದರೆ, ಅದು ಅವರಿಗೆ ತುಂಬಾ ಕಷ್ಟಕರವಾಗಿರುತ್ತದೆ. ಈ ವೇಳೆ ಎಡಗೈ ಬ್ಯಾಟರ್​ ಇದ್ದರೆ ಸಂಭಾಳಿಸಬಹುದು ಮತ್ತು ವಿಕೆಟ್​ ನಡುವೆ ಓಟಗಳಿಂದ ರನ್​ ಗಳಿಸಬಹುದು" ಎಂದು ಪಾಂಟಿಂಗ್ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಸುಯಾಶ್ ಹೋರಾಟ ಮನೋಭಾವದ ಮುಂದೆ ಅನುಭವ ಅಮುಖ್ಯ: ಕೆಕೆಆರ್​ ಕೋಚ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.