ETV Bharat / sports

Ravichandran Ashwin: ವೆಸ್ಟ್​ ಇಂಡೀಸ್​ ಪ್ರವಾಸದಲ್ಲಿ 3 ವಿಕೆಟ್​ ಪಡೆದರೆ ಅಶ್ವಿನ್​ ಸೇರಲಿದ್ದಾರೆ ದಾಖಲೆಯ ಪುಟ! - ETV Bharath Kannada news

ವೆಸ್ಟ್​ ಇಂಡೀಸ್​ ಪ್ರವಾಸದಲ್ಲಿ ಆರ್​ ಅಶ್ವಿನ್​ ಅವರು ತಮ್ಮ ಬೌಲ್​ನಿಂದ ಹಲವಾರು ದಾಖಲೆಗಳನ್ನು ಬರೆಯುವ ಸಾಧ್ಯತೆಗಳಿದ್ದು, ಅವು ಇಂತಿದೆ..

Ravichandran Ashwin
Ravichandran Ashwin
author img

By

Published : Jul 5, 2023, 8:05 PM IST

ಆರ್​ ಅಶ್ವಿನ್​ ಭಾರತದ ವಿಭಿನ್ನ ಸ್ಪಿನ್​ ಬೌಲರ್​​ ಎಂಬುದ ಎಲ್ಲರಿಗೂ ತಿಳಿದಿರುವ ಸಂಗತಿ. ಯಾವುದೇ ಎದುರಾಳಿ ತಂಡ ಇರಲಿ ಭಾರತ ಸ್ಪಿನ್ನರ್​ಗಳ ಎದುರು ಮಣಿಯುತ್ತಾರೆ. ವಿಶೇಷವಾಗಿ ರವಿಚಂದ್ರನ್​ ಅಶ್ವಿನ್​ ಅವರ ಕೇರಮ್​ ಬೌಲ್​ಗೆ ಬಲಿಯಾಗುತ್ತಾರೆ. ಅಶ್ವಿನ್​ ಅಪರೂಪದ ಬೌಲಿಂಗ್​ ಶೈಲಿಯನ್ನು ಒಲಿಸಿಕೊಂಡಿದ್ದಾರೆ. ಇದೇ ಅವರ ಅಸ್ತ್ರ. ಈಗ ವೆಸ್ಟ್​​ ಇಂಡೀಸ್​ ಪ್ರವಾಸದಲ್ಲಿರುವ ಈ ಸ್ಪಿನ್​ ಮಾಂತ್ರಿಕ ತಮ್ಮ ಕೈಗಳಿಂದ ಒಂದಿಷ್ಟು ಜಾದೂ ಮಾಡಿದರೆ, ಕ್ರಿಕೆಟ್​ ಲೋಕದ ದೊಡ್ಡ ದೊಡ್ಡ ದಾಖಲೆಗಳನ್ನು ಬರೆಯಲಿದ್ದಾರೆ. ಆದರೆ, ಅವರಿಗೆ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​ನಲ್ಲಿ ಆದಂತೆ ಅವಕಾಶ ಸಿಕ್ಕದಿದ್ದಲ್ಲಿ ದಾಖಲೆಗಳ ನಿರ್ಮಾಣ ಕಷ್ಟ ಇದೆ.

ಆದರೆ ವೆಸ್ಟ್​ ಇಂಡೀಸ್​ ಪಿಚ್​ನಲ್ಲಿ ಭಾರತ ಇಬ್ಬರು ಸ್ಪಿನ್ ಬೌಲರ್​ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ವೆಸ್ಟ್ ಇಂಡೀಸ್ ಸರಣಿಯ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವ ಅವಕಾಶ ಅಶ್ವಿನ್‌ಗೆ ಸಿಕ್ಕರೆ, ಅವರು ಅನೇಕ ದಾಖಲೆಗಳನ್ನು ಮಾಡುತ್ತಾರೆ. ವೆಸ್ಟ್ ಇಂಡೀಸ್ ವಿರುದ್ಧ ಅತಿ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದ ಭಾರತೀಯ ಬೌಲರ್‌ಗಳ ಸಾಲಿಗೆ ಸೇರುವುದರ ಜೊತೆಗೆ, 700 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಆಟಗಾರನಾಗುತ್ತಾರೆ.

2010 ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅಶ್ವಿನ್ ಅವರು 25.93 ರ ಸರಾಸರಿಯಲ್ಲಿ ಮತ್ತು 3.37 ರ ಎಕಾನಮಿ ರೇಟ್‌ನಲ್ಲಿ ಒಟ್ಟು 697 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಎಲ್ಲ ಮೂರು ಸ್ವರೂಪಗಳಲ್ಲಿ 270 ಪಂದ್ಯಗಳನ್ನು ಆಡಿದ್ದಾರೆ. 700 ವಿಕೆಟ್‌ಗಳ ಮೈಲಿಗಲ್ಲು ತಲುಪಲು ಅವರಿಗೆ ಕೇವಲ 3 ವಿಕೆಟ್‌ಗಳ ಅಗತ್ಯವಿದೆ. ಟೆಸ್ಟ್​​ ಬೌಲಿಂಗ್​ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ವಿಶ್ವ ಶ್ರೇಷ್ಟ ಬೌಲರ್​ ಅಶ್ವಿನ್​ 32 ಬಾರಿ ಕನಿಷ್ಠ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ಅಶ್ವಿನ್ ಇದುವರೆಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ವಿರುದ್ಧ ಕೇವಲ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 21.85 ಸರಾಸರಿಯಲ್ಲಿ 60 ವಿಕೆಟ್ ಪಡೆದಿದ್ದಾರೆ. ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಅವರು 2 ಟೆಸ್ಟ್‌ಗಳಲ್ಲಿ 8ಕ್ಕಿಂತ ಹೆಚ್ಚು ವಿಕೆಟ್ ಪಡೆದರೆ, ಬಿಷನ್ ಸಿಂಗ್ ಬೇಡಿ (62), ಚಂದ್ರಶೇಖರ್ (65) ಮತ್ತು ವೆಂಕಟರಾಘವನ್ (68) ಮೀರಿಸಲಿದ್ದಾರೆ. ಟೀಂ ಇಂಡಿಯಾದ ಸ್ಪಿನ್ ಬೌಲರ್ ಆರ್ ಅಶ್ವಿನ್ ಅವರು ವೆಸ್ಟ್ ಇಂಡೀಸ್ ಪ್ರವಾಸದಲ್ಲಿ 3 ವಿಕೆಟ್ ಪಡೆದ ತಕ್ಷಣ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ವಿಕೆಟ್‌ ಪಡೆದ ಮೂರನೇ ಭಾರತೀಯ ಮತ್ತು ವಿಶ್ವದ 16 ನೇ ಬೌಲರ್ ಆಗಲಿದ್ದಾರೆ. ಇಲ್ಲಿಯವರೆಗೆ ಭಾರತದ ಮಾಜಿ ಬೌಲರ್‌ಗಳಾದ ಅನಿಲ್ ಕುಂಬ್ಳೆ (953) ಮತ್ತು ಹರ್ಭಜನ್ ಸಿಂಗ್ (707) ಮಾತ್ರ 700ಕ್ಕೂ ಹೆಚ್ಚು ವಿಕೆಟ್​ ಕಬಳಿಸಿದ್ದಾರೆ.

ಜುಲೈ 12 ರಿಂದ ನಡೆಯಲಿರುವ ಟೆಸ್ಟ್ ಪಂದ್ಯದೊಂದಿಗೆ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸವನ್ನು ಪ್ರಾರಂಭಿಸಲಿದೆ. ಇಲ್ಲಿ ಟೀಂ ಇಂಡಿಯಾ ಎರಡು ಟೆಸ್ಟ್, ಮೂರು ಏಕದಿನ ಮತ್ತು ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದ್ದು, ಇದರಲ್ಲಿ ಅಶ್ವಿನ್ ಮತ್ತು ಜಡೇಜಾ ಹೊಸ ಬೌಲರ್‌ಗಳೊಂದಿಗೆ ತಮ್ಮ ಬೌಲಿಂಗ್ ಅನ್ನು ಪ್ರದರ್ಶನವನ್ನು ನೀಡಲಿದ್ದಾರೆ.

ಇದನ್ನೂ ಓದಿ: ICC Raking: ಅಗ್ರ ಸ್ಥಾನದಲ್ಲೇ ಮುಂದುವರಿದ ಅಶ್ವಿನ್​, ಬ್ಯಾಟಿಂಗ್​ ಶ್ರೇಯಾಂಕದಲ್ಲಿ ಉತ್ತುಂಗಕ್ಕೇರಿದ ಗಾಯಾಳು ವಿಲಿಯಮ್ಸನ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.