ನವದೆಹಲಿ: ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ಸೋತ ಪಂದ್ಯದಲ್ಲಿ ಕಳಪೆ ಬೌಲಿಂಗ್ ಪ್ರದರ್ಶನ ತೋರಿದ್ದ ಮೊಹಮ್ಮದ್ ಶಮಿ ಪರ ಮಾತನಾಡಿದ್ದಕ್ಕೆ ವಿರಾಟ್ ಕೊಹ್ಲಿಯ 9 ತಿಂಗಳ ಮಗಳಿಗೆ ಅತ್ಯಾಚಾರದ ಬೆದರಿಕೆ ಹಾಕಿರುವುದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿ, ಭಾರತ ತಂಡದ ನಾಯಕನ ಬೆನ್ನಿಗೆ ನಿಂತಿದ್ದಾರೆ.
"ಪ್ರೀತಿಯ ವಿರಾಟ್, ಈ ಜನರು ತಮ್ಮ ಮನಸ್ಸಿನ ತುಂಬಾ ಕೇವಲ ದ್ವೇಷವನ್ನೇ ತುಂಬಿಕೊಂಡಿದ್ದಾರೆ. ಏಕೆಂದರೆ ಅವರಿಗೆ ಯಾರೊಬ್ಬರೂ ಪ್ರೀತಿಯನ್ನು ನೀಡಿಲ್ಲ, ಅವರನ್ನು ಕ್ಷಮಿಸಿ, ತಂಡವನ್ನು ರಕ್ಷಣೆ ಮಾಡಿ" ಎಂದು ರಾಹುಲ್ ಮಂಗಳವಾರ ಟ್ವೀಟ್ ಮಾಡಿದ್ದಾರೆ.
-
Dear Virat,
— Rahul Gandhi (@RahulGandhi) November 2, 2021 " class="align-text-top noRightClick twitterSection" data="
These people are filled with hate because nobody gives them any love. Forgive them.
Protect the team.
">Dear Virat,
— Rahul Gandhi (@RahulGandhi) November 2, 2021
These people are filled with hate because nobody gives them any love. Forgive them.
Protect the team.Dear Virat,
— Rahul Gandhi (@RahulGandhi) November 2, 2021
These people are filled with hate because nobody gives them any love. Forgive them.
Protect the team.
ಇದಕ್ಕೂ ಮುನ್ನ, ದೆಹಲಿಯ ಮಹಿಳಾ ಆಯೋಗ ಕೂಡ ಕೊಹ್ಲಿ ಮಗಳಿಗೆ ಬೆದರಿಕೆ ಹಾಕಿದ್ದವರ ವಿರುದ್ಧ ತೆಗೆದುಕೊಂಡಿರುವ ಕ್ರಮದ ಬಗ್ಗೆ ನವೆಂಬರ್ 8ರೊಳಗೆ ಮಾಹಿತಿ ನೀಡುವಂತೆ ದೆಹಲಿ ಮಹಿಳಾ ಆಯೋಗ ದೆಹಲಿ ಪೊಲೀಸರಿಗೆ ನೋಟಿಸ್ ನೀಡಿತ್ತು.
9 ತಿಂಗಳ ಮಗುವಿನ ಮೇಲೆ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕುವುದು ತುಂಬಾ ಅವಮಾನಕರ ಸಂಗತಿ. ಈ ತಂಡ ನಮ್ಮ ದೇಶವನ್ನು ಸಾವಿರಾರು ಬಾರಿ ಹೆಮ್ಮೆಪಡುವಂತೆ ಮಾಡಿದೆ. ಆದರೆ ಒಮ್ಮೆ ಸೋಲು ಕಂಡಿದ್ದಕ್ಕೆ ಈ ರೀತಿ ಮೂರ್ಖತನದಿಂದ ವರ್ತಿಸುವುದು ಎಷ್ಟು ಸರಿ? ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಳಿವಾಲ್ ಟ್ವಿಟರ್ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಕೊಹ್ಲಿ ಪುತ್ರಿಗೆ ಕಿಡಿಗೇಡಿಗಳ ಬೆದರಿಕೆ: ದೆಹಲಿ ಪೊಲೀಸರಿಗೆ ಮಹಿಳಾ ಆಯೋಗದಿಂದ ನೋಟಿಸ್