ಅಬುಧಾಬಿ: ಪಿಎಸ್ಎಲ್ ಫೈನಲ್ ತಲುಪಿರುವ ಪೇಶಾವರ್ ಜಾಲ್ಮಿ ತಂಡದ ಯುವ ಆಟಗಾರ ಹೈದರ್ ಅಲಿ ಮತ್ತು ವೇಗಿ ಉಮೈಲ್ ಆಸಿಫ್ ಅವರನ್ನು ಕೋವಿಡ್ 19 ಪ್ರೋಟೋಕಾಲ್ ಬ್ರೇಕ್ ಮಾಡಿದಕ್ಕಾಗಿ ಫೈನಲ್ ಪಂದ್ಯದಿಂದ ಅಮಾನತು ಮಾಡಲಾಗಿದೆ.
ಗುರುವಾರ 6ನೇ ಆವೃತ್ತಿಯ ಪಿಎಸ್ಎಲ್ ಫೈನಲ್ ಪೇಶಾವರ್ ಜಾಲ್ಮಿ ಮತ್ತು ಮುಲ್ತಾನ್ ಸುಲ್ತಾನ್ಸ್ ನಡುವೆ ನಡೆಯಲಿದೆ. ಆದರೆ ಹೈದರ್ ಮತ್ತು ಆಸೀಫ್ ಕೋವಿಡ್ 19 ನಿಯಮಗಳನ್ನು ಮೀರಿ ಬಯೋಬಬಲ್ ಹೊರ ಹೋಗಿ ಹೊರಗಿನ ಜನರನ್ನು ಭೇಟಿ ಮಾಡಿದ್ದಾರೆ. ಇದನ್ನು ಒಪ್ಪಿಕೊಂಡಿರುವ ಅವರನ್ನು ಫೈನಲ್ ಪಂದ್ಯದಿಂದ ಅಮಾನತು ಮಾಡಿದೆ.
ಬುಧವಾರ ಈ ಘಟನೆ ನಡೆದಿದ್ದು, ಗುರುವಾರ ಇಬ್ಬರು ಆಟಗಾರರನ್ನು ಟೂರ್ನಮೆಂಟ್ನ ಕೋವಿಡ್ 19 ಮ್ಯಾನೇಜ್ಮೆಂಟ್ ಪ್ಯಾನಲ್ ಬ್ಯಾರಿಸ್ಟರ್ ಸಲ್ಮಾನ್ ನಾಸೀರ್ ಮತ್ತು ಪಿಸಿಬಿ ಕಮರ್ಸಿಯಲ್ ಮತ್ತು ಪಿಎಸ್ಎಲ್ ಮುಖ್ಯಸ್ಥ ಬಾಬರ್ ಹಮೀದ್ ಅಮಾನತು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ಇಬ್ಬರು ಆಟಗಾರರು ಬಬಲ್ನಿಂದ ಹೊರ ಹೋಗಿದ್ದು ಬಂದನಂತರ ಯಾವುದೇ ತಂಡಗಳ ಜೊತೆಗೆ ಸಂಪರ್ಕ ಹೊಂದಿರದ ಕಾರಣ ಅವರನ್ನು ರೂಮ್ ಐಸೊಲೇಸನ್ಗೆ ಒಳಪಡಿಸಲಾಗಿದೆ. ಈಗಾಗಲೇ ಹೈದರ್ ಅಲಿ ಮುಂಬರುವ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಪ್ರವಾಸದಿಂದ ಹಿಂದೆ ಸರಿದಿದ್ದಾರೆ.
ಪಾಕಿಸ್ತಾನ ತಂಡ ಇಂಗ್ಲೆಂಡ್ ಮತ್ತು ವೆಸ್ಟ್ ಪ್ರವಾಸ ಕೈಗೊಳ್ಳಲಿದ್ದು, ಒಟ್ಟು 8 ಟಿ20, 3 ಏಕದಿನ ಮತ್ತು 2 ಟೆಸ್ಟ್ ಪಂದ್ಯಗಳನ್ನಾಡಲಿದೆ.
ಇದನ್ನು ಓದಿ:ಬಟ್ಲರ್ ಅಜೇಯ ಅರ್ಧಶತಕ: ಇಂಗ್ಲೆಂಡ್ಗೆ ಸುಲಭ ತುತ್ತಾದ ಶ್ರೀಲಂಕಾ