ETV Bharat / sports

ಲಾರ್ಡ್ಸ್​ನಲ್ಲಿ ಟೀಂ ಇಂಡಿಯಾ ಸೇರಿಕೊಂಡ ಪೃಥ್ವಿ ಶಾ, ಸೂರ್ಯಕುಮಾರ್​ ಯಾದವ್​ - Suryakumar Yadav join Indian team at Lord's

ನಾಟಿಂಗ್​ಹ್ಯಾಮ್​ನಲ್ಲಿ ನಡೆದಿದ್ದ ಮೊದಲ ಟೆಸ್ಟ್​ ಡ್ರಾನಲ್ಲಿ ಅಂತ್ಯಗೊಂಡಿತ್ತು. ಇದೀಗ ಲಾರ್ಡ್ಸ್​ನಲ್ಲಿ 2ನೇ ಟೆಸ್ಟ್​ ಪಂದ್ಯ ನಡೆಯುತ್ತಿದೆ. ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 364 ರನ್​ಗಳಿಸಿದೆ. ಇದಕ್ಕುತ್ತರವಾಗಿ 341 ರನ್​ಗಳಿಸಿ 3ನೇ ದಿನ ಬ್ಯಾಟಿಂಗ್ ನಡೆಸುತ್ತಿದೆ. ರೂಟ್​ 151 ರನ್​ಗಳಿಸಿದ್ದರೆ. ಮೊಯೀನ್ ಅಲಿ 28 ರನ್​ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ..

Prithvi Shaw, Suryakumar Yadav join Indian team at Lord's
ಟೀಮ್ ಇಂಡಿಯಾ ಸೇರಿಕೊಂಡ ಪೃಥ್ವಿ ಶಾ, ಸೂರ್ಯಕುಮಾರ್​ ಯಾದವ್​
author img

By

Published : Aug 14, 2021, 9:34 PM IST

ಲಂಡನ್ : ಬದಲಿ ಆಟಗಾರರಾಗಿ ಇಂಗ್ಲೆಂಡ್​ಗೆ ಪ್ರಯಾಣಿಸಿದ್ದ ಭಾರತದ ಯುವ ಆಟಗಾರ ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಯಾದವ್​ ಶನಿವಾರ ಲಾರ್ಡ್ಸ್​ ಮೈದಾನದಲ್ಲಿ 2ನೇ ಟೆಸ್ಟ್ ಪಂದ್ಯ ಆಡುತ್ತಿರುವ ಭಾರತ ತಂಡ ಸೇರಿದ್ದಾರೆ.

ಶ್ರೀಲಂಕಾ ವಿರುದ್ಧದ ಸೀಮಿತ ಓವರ್​ಗಳ ಸರಣಿಯ ಮುಗಿದ ನಂತರ ಆಗಸ್ಟ್​ 3ರಂದು ಇಂಗ್ಲೆಂಡ್​ ತಲುಪಿದ್ದರು. ನಂತರ 10 ದಿನಗಳ ಕ್ವಾರಂಟೈನ್​ಗೆ ಒಳಗಾಗಿದ್ದರು. ಇದೀಗ ಕ್ವಾರಂಟೈನ್ ಮುಗಿಸಿದ್ದು, ಭಾರತ ತಂಡವನ್ನು ಸೇರಿದ್ದಾರೆ. ಇವರಿಬ್ಬರು 3ನೇ ಟೆಸ್ಟ್​ ಪಂದ್ಯದ ಆಯ್ಕೆಗೆ ಲಭ್ಯರಾಗಲಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಬಿಸಿಸಿಐ, ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಯಾದವ್​, ನಿಮಗೆ ಲಾರ್ಡ್ಸ್​ಗೆ ಸ್ವಾಗತ ಎಂದು ಇಬ್ಬರ ಫೋಟೊವನ್ನು ಶೇರ್​ ಮಾಡಿಕೊಂಡಿದೆ.

ಶುಬ್ಮನ್ ಗಿಲ್​ ಗಾಯಗೊಂಡು ಭಾರತಕ್ಕೆ ಹಿಂತಿರುಗಿದ್ದು, ಅವರ ಬದಲಿಗೆ ಪೃಥ್ವಿ ಶಾರನ್ನು ಹೆಚ್ಚುವರಿ ಆರಂಭಿಕನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಇನ್ನು, ಆಲ್​ರೌಂಡರ್​ ವಾಷಿಂಗ್ಟನ್ ಸುಂದರ್​ ಮತ್ತು ವೇಗಿ ಆವೇಶ್​ ಖಾನ್​ ಕೂಡ ಗಾಯದಿಂದ ಹೊರ ಬಿದ್ದಿದ್ದರಿಂದ ಸೂರ್ಯಕುಮಾರ್​ ಯಾದವ್​ಗೆ ಟೀಂ ಮ್ಯಾನೇಜ್ಮೆಂಟ್ ಕರೆ ನೀಡಿತ್ತು.

ನಾಟಿಂಗ್​ಹ್ಯಾಮ್​ನಲ್ಲಿ ನಡೆದಿದ್ದ ಮೊದಲ ಟೆಸ್ಟ್​ ಡ್ರಾನಲ್ಲಿ ಅಂತ್ಯಗೊಂಡಿತ್ತು. ಇದೀಗ ಲಾರ್ಡ್ಸ್​ನಲ್ಲಿ 2ನೇ ಟೆಸ್ಟ್​ ಪಂದ್ಯ ನಡೆಯುತ್ತಿದೆ. ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 364 ರನ್​ಗಳಿಸಿದೆ. ಇದಕ್ಕುತ್ತರವಾಗಿ 341 ರನ್​ಗಳಿಸಿ 3ನೇ ದಿನ ಬ್ಯಾಟಿಂಗ್ ನಡೆಸುತ್ತಿದೆ. ರೂಟ್​ 151 ರನ್​ಗಳಿಸಿದ್ದರೆ. ಮೊಯೀನ್ ಅಲಿ 28 ರನ್​ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಇದನ್ನು ಓದಿ:ಟೆಸ್ಟ್​ನಲ್ಲಿ ಜೋ ರೂಟ್ 9000 ರನ್​.. ಈ ಸಾಧನೆ ಮಾಡಿದ 2ನೇ ಇಂಗ್ಲಿಷ್ ದಾಂಡಿಗ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.