ಮುಂಬೈ: ಯುವ ಆರಂಭಿಕ ಆಟಗಾರ ಪೃಥ್ವಿ ಶಾ ಮುಂಬರುವ ರಣಜಿ ಟ್ರೋಫಿ ಆವೃತ್ತಿಯಲ್ಲಿ ಮುಂಬೈ ತಂಡಕ್ಕೆ ನಾಯಕನಾಗಲಿದ್ದಾರೆ. ಸ್ಪಿನ್ನರ್ ಕುಲ್ದೀಪ್ ಯಾದವ್ ಯುಪಿ ತಂಡದ ನೇತೃತ್ವ ವಹಿಸಲಿದ್ದಾರೆ.
41 ಬಾರಿಯ ರಣಜಿ ಚಾಂಪಿಯನ್ ಮುಂಬೈ ತಂಡ ಸಿ ಗುಂಪಿಲ್ಲಿ ಸ್ಥಾನ ಪಡೆದಿದೆ. 20 ಸದಸ್ಯರ ಈ ತಂಡವನ್ನು ಪೃಥ್ವಿ ಮುನ್ನಡೆಸಲಿದ್ದಾರೆ. ಲೆಜೆಂಡರಿ ಸಚಿನ್ ತೆಂಡೂಲ್ಕರ್ ಮಗ ಅರ್ಜುನ್ ತೆಂಡೂಲ್ಕರ್ ಈ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಕಳೆದ ವರ್ಷವೂ ಮುಂಬೈ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ, ಕೋವಿಡ್ ಕಾರಣ ಬಿಸಿಸಿಐ ರಣಜಿ ಟ್ರೋಫಿಯನ್ನು ರದ್ದುಗೊಳಿಸಿತ್ತು. ಜನವರಿ 20 ರಿಂದ ಕೋಲ್ಕತಾದಲ್ಲಿ ದೆಹಲಿ ವಿರುದ್ಧ ಸೆಣಸಲಿದ್ದಾರೆ. ಈ ತಂಡದಲ್ಲಿ ಸರ್ಫರಾಜ್ ಖಾನ್, ಯಶಸ್ವಿ ಜೈಸ್ವಾಲ್, ದವಳ್ ಕುಲಕರ್ಣಿ, ಅರ್ಮನ್ ಜಾಫರ್, ಆದಿತ್ಯ ರಾರೆ, ಸಿವಂ ದುಬೆ ಅಂತಹ ಸ್ಟಾರ್ ಆಟಗಾರರು ಇದ್ದಾರೆ.
ಮುಂಬೈ ರಣಜಿ ತಂಡ:
ತಂಡ: ಪೃಥ್ವಿ ಶಾ (ನಾಯಕ), ಯಶಸ್ವಿ ಜೈಸ್ವಾಲ್, ಆಕರ್ಷಿತ್ ಗೊಮೆಲ್, ಅರ್ಮಾನ್ ಜಾಫರ್, ಸರ್ಫರಾಜ್ ಖಾನ್, ಸಚಿನ್ ಯಾದವ್, ಆದಿತ್ಯ ತಾರೆ (WK), ಹಾರ್ದಿಕ್ ತಮೋರ್ (WK), ಶಿವಂ ದುಬೆ, ಅಮನ್ ಖಾನ್, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಪ್ರಶಾಂತ್ ಸೋಲಂಕಿ, ಶಶಾಂಕ್ ಅತ್ತಾರ್ಡೆ, ಧವಲ್ ಕುಲಕರ್ಣಿ, ಮೋಹಿತ್ ಅವಸ್ತಿ, ಪ್ರಿನ್ಸ್ ಬಡಿಯಾನಿ, ಸಿದ್ಧಾರ್ಥ್ ರಾವುತ್, ರಾಯ್‌ಸ್ಟಾನ್ ಡಯಾಸ್, ಅರ್ಜುನ್ ತೆಂಡೂಲ್ಕರ್.
ಯುಪಿ ತಂಡಕ್ಕೆ ಕುಲ್ದೀಪ್ ಯಾದವ್ ನಾಯಕ
ಯುಪಿ ತಂಡವನ್ನು ಭಾರತ ತಂಡದಿಂದ ಹೊರಬಿದ್ದಿರುವ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಮುನ್ನಡಸಲಿದ್ದಾರೆ. ಗಾಯದಿಂದ 2 ತಿಂಗಳು ಮೈದಾನದಿಂದ ಹೊರಗುಳಿದಿದ್ದ ಕುಲ್ದೀಪ್ ಮುಂಬರುವ ಐಪಿಎಲ್ನಲ್ಲಿ ಅವಕಾಶ ಪಡೆಯಲು ಮತ್ತು ಭಾರತ ತಂಡಕ್ಕೆ ಮರಳಲು ಈ ರಣಜಿ ಟ್ರೋಪಿ ಪ್ರದರ್ಶನ ಪ್ರಮುಖವಾಗಲಿದೆ.
ವಿಜಯ ಹಜಾರೆ ಮತ್ತು ಸೈಯದ್ ಮುಷ್ತಾಕ್ ಅಲಿಯಲ್ಲಿ ಉತ್ತರ ಪ್ರದೇಶ ತಂಡವನ್ನು ಮುನ್ನಡೆಸಿದ್ದ ಕರನ್ ಶರ್ಮಾ ಉಪನಾಯಕನಾಗಿದ್ದಾರೆ. ಮಾಧವ್ ಕೌಶಿಕ್, ಪ್ರಿಯಂ ಗರ್ಗ್, ಅಕ್ಷ್ದೀಪ್ ನಾಥ್, ಧ್ರುವ್ ಜುರೆಲ್, ಶಿವಂ ಮಾವಿ, ಅಂಕಿತ್ ರಜಪೂತ್ ಅಂತಹ ಸ್ಟಾರ್ ಆಟಗಾರರು ಅವಕಾಶ ಪಡೆದಿದ್ದಾರೆ.
ಯುಪಿ ರಣಜಿ ತಂಡ
ಯುಪಿ ತಂಡ: ಕುಲ್ದೀಪ್ ಯಾದವ್ (ನಾಯಕ) ಕರಣ್ ಶರ್ಮಾ (ಉಪನಾಯಕ) ಮಾಧವ್ ಕೌಶಿಕ್, ಅಲ್ಮಾಸ್ ಶೌಕತ್, ಸಮರ್ಥ್ ಸಿಂಗ್, ಹರ್ದೀಪ್ ಸಿಂಗ್, ರಿಂಕು ಸಿಂಗ್, ಪ್ರಿಯಂ ಗಾರ್ಗ್, ಅಕ್ಷದೀಪ್ ನಾಥ್, ಸಮೀರ್ ಚೌಧರಿ, ಕೃತಗ್ಯಾ ಸಿಂಗ್, ಆರ್ಯನ್ ಜುಯಲ್, ಧ್ರುವ ಚಂದ್ರ ಜುರೆಲ್, ಶಿವಂ ಮಾವಿ, ಅಂಕಿತ್ ರಾಜ್‌ಪೂತ್, ಯಶ್ ದಯಾಳ್, ಕುನಾಲ್ ಯಾದವ್, ಪ್ರಿನ್ಸ್ ಯಾದವ್, ರಿಷಬ್ ಬನ್ಸಾಲ್, ಶಾನು ಸೈನಿ, ಜಸ್ಮರ್, ಜೀಶನ್ ಅನ್ಸಾರಿ, ಶಿವಂ ಶರ್ಮಾ, ಪಾರ್ಥ್ ಮಿಶ್ರಾ
ಇದನ್ನೂ ಓದಿ:ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಜಯ ಕಟ್ಟಿಟ್ಟ ಬುತ್ತಿ ಎನ್ನುತ್ತಿವೆ ಈ ಹಿಂದಿನ ದಾಖಲೆಗಳು!