ETV Bharat / sports

ಪೃಥ್ವಿ ಶಾ ಭೀತಿ, ಸ್ವಾರ್ಥವಿಲ್ಲದ ಆಡುವ ಅಮೂಲ್ಯ ಆಟಗಾರ: ಸಂಜಯ್ ಮಂಜ್ರೇಕರ್ - ಸಂಜಯ್ ಮಂಜ್ರೇಕರ್ ಪೃಥ್ವಿ ಶಾ

ಐಪಿಎಲ್​ನಲ್ಲಿ ಹೇಳುವುದಾದರೆ ಪೃಥ್ವಿ ಶಾ ಖಂಡಿತ ಅಮೂಲ್ಯವಾದ ಕ್ರಿಕೆಟಿಗ. ಒಂದು ವೇಳೆ ನಾನೇನಾದರೂ ಹರಾಜಿನ ಟೇಬಲ್​ನಲ್ಲಿದ್ದರೆ ಎಷ್ಟೇ ಕಷ್ಟವಾದರೂ ಅವರನ್ನು ಪಡೆದುಕೊಳ್ಳುವುದಕ್ಕೆ ಹೋಗುತ್ತೇನೆ, ಏಕೆಂದರೆ ಅವರು ವಿಕೆಟ್ ಒಪ್ಪಿಸುತ್ತೇನೆ ಎಂಬ ಚಿಂತೆಯಿಲ್ಲದೇ ಆಡುವ ವ್ಯಕ್ತಿ ಎಂದು ಮಂಜ್ರೇಕರ್ ಇಎಸ್​ಪಿಎನ್ ಕ್ರಿಕ್​ಇನ್ಫೋಗೆ ಹೇಳಿದ್ದಾರೆ.

Prithvi Shaw fearless cricket
ಪೃಥ್ವಿ ಶಾ - ಸಂಜಯ್ ಮಂಜ್ರೇಕರ್
author img

By

Published : Apr 21, 2022, 7:46 PM IST

ಮುಂಬೈ: ಭಾರತದ ಭವಿಷ್ಯದ ಕ್ರಿಕೆಟಿಗ ಪೃಥ್ವಿ ಶಾ 15ನೇ ಆವೃತ್ತಿಯನ್ನು ಸ್ವಲ್ಪ ಶಾಂತವಾಗಿಯೇ ಆರಂಭಿಸಿದರೂ, ನಂತರ ಸತತ ಅರ್ಧಶತಕ ಸಿಡಿಸುವ ಮೂಲಕ ತಮ್ಮ ನೈಜ ಆಟಕ್ಕೆ ಮರಳಿದ್ದರು. ಮತ್ತೆ ಆರ್​ಸಿಬಿ ವಿರುದ್ಧ ಮಂಕಾದರೂ ಬುಧವಾರ ನಡೆದ ಪಂಜಾಬ್ ವಿರುದ್ಧ ಕೇವಲ 20 ಎಸೆತಗಳಲ್ಲಿ 41 ರನ್​ ಸಿಡಿಸಿ 116 ರನ್​ಗಳ ಗುರಿಯನ್ನು ಕೇವಲ 10.3 ಓವರ್​ಗಳಲ್ಲಿ ತಲುಪಲು ನೆರವಾಗಿದ್ದರು.

ಶಾ ಕಳೆದ ಆವೃತ್ತಿಯಿಂದಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಂಬಿಕಸ್ಥ ಬ್ಯಾಟರ್ ಆಗಿದ್ದು, ತನ್ನ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ಕ್ಯಾಪಿಟಲ್ಸ್​ಗೆ ಭರ್ಜರಿ ಆರಂಭ ಒದಗಿಸಿಕೊಡುತ್ತಿದ್ದಾರೆ. ಈ ವೇಳೆ ಕೆಲವೊಂದು ಪಂದ್ಯದಲ್ಲಿ ತಮ್ಮ ವೈಯಕ್ತಿಕ ದಾಖಲೆಯನ್ನು ಉತ್ತಮಪಡಿಸಿಕೊಳ್ಳುವ ಅವಕಾಶವಿದ್ದರೂ ತಮ್ಮ ಆಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಅವರನ್ನು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಭೀತಿಯಿಲ್ಲದೆ ಸ್ವಾರ್ಥವಿಲ್ಲದೆ ಆಡುವ ಪೃಥ್ವಿ ಆಟ ಅಮೂಲ್ಯವಾದ ಕ್ರಿಕೆಟಿಗನನ್ನಾಗಿ ಮಾಡಿದೆ ಎಂದಿದ್ದಾರೆ.

ಐಪಿಎಲ್​ನಲ್ಲಿ ಹೇಳುವುದಾದರೆ ಪೃಥ್ವಿ ಶಾ ಖಂಡಿತ ಅಮೂಲ್ಯವಾದ ಕ್ರಿಕೆಟಿಗ. ಒಂದು ವೇಳೆ ನಾನೇನಾದರೂ ಹರಾಜಿನ ಟೇಬಲ್​ನಲ್ಲಿದ್ದರೆ, ಎಷ್ಟೇ ಕಷ್ಟವಾದರೂ ಅವರನ್ನು ಪಡೆದುಕೊಳ್ಳುವುದಕ್ಕೆ ಹೋಗುತ್ತೇನೆ. ಏಕೆಂದರೆ ಅವರು ವಿಕೆಟ್ ಒಪ್ಪಿಸುತ್ತೇನೆ ಎಂಬ ಚಿಂತೆಯಿಲ್ಲದೇ ಆಡುವ ವ್ಯಕ್ತಿ ಎಂದು ಮಂಜ್ರೇಕರ್ ಇಎಸ್​ಪಿಎನ್ ಕ್ರಿಕ್​ಇನ್ಫೋಗೆ ಹೇಳಿದ್ದಾರೆ.

ಆತ ನಿರ್ಭೀತ ಮತ್ತು ನಿಸ್ವಾರ್ಥ. ಅವರು ಸತತವಾಗಿ 3 ಬೌಂಡರಿಗಳನ್ನು ಬಾರಿಸಿ ತನ್ನ ಮೊತ್ತವನ್ನು 48ಕ್ಕೆ ಏರಿಸಿಕೊಂಡರು. ನಂತರದ ಎಸೆತವನ್ನು ಕೂಡ ಸಿಕ್ಸ್ ಹೊಡೆದು 54 ರನ್​ ಪಡೆಯಬೇಕೆನ್ನುವ ವ್ಯಕ್ತಿ. ಇಂತಹ ಆಲೋಚನೆಯುಳ್ಳವರು ಅಮೂಲ್ಯವಾದ ಆಟಗಾರರು. ಇವರು ಟಾಪ್​ ಆರ್ಡರ್​ನಲ್ಲಿ ಎದುರಾಳಿಗೆ ಹಾನಿಯನ್ನುಂಟು ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಕೊಂಡಾಡಿದರು.

ಇದನ್ನೂ ಓದಿ:ಐಪಿಎಲ್​ ಇತಿಹಾಸದಲ್ಲಿ ಒಂದೇ ತಂಡದ ವಿರುದ್ಧ 1,000 ರನ್​ ಗಡಿದಾಟಿದ 2ನೇ ಬ್ಯಾಟರ್​ ವಾರ್ನರ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.