ETV Bharat / sports

ಪದಾರ್ಪಣೆ ಪಂದ್ಯದಲ್ಲಿ ಡಕ್​ಔಟ್​ ಸೇರಿದಂತೆ 2 ವಿಭಿನ್ನ ದಾಖಲೆಗೆ ಪಾತ್ರರಾದ ಪೃಥ್ವಿ ಶಾ

author img

By

Published : Jul 25, 2021, 9:00 PM IST

ಪೃಥ್ವಿ ಶಾ ಇಂದಿನ ಪಂದ್ಯದಲ್ಲಿ ದುಶ್ಮಂತ ಚಮೀರಾ ಬೌಲಿಂಗ್ ತಾವೆದುರಿಸಿದ ಮೊದಲ ಎಸೆತದಲ್ಲೇ ಕೀಪರ್​ ಕೈಗೆ ಕ್ಯಾಚ್​ ನೀಡಿ ಗೋಲ್ಡನ್​ ಡಕ್​ ಆದರು. ಶಾ ಗಿಂತ ಮೊದಲು ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ದಕ್ಷಿಣ ಆಫ್ರಿಕಾ ವಿರುದ್ಧ, ಕನ್ನಡಿಗ ಕೆ.ಎಲ್ ರಾಹುಲ್​ ಜಿಂಬಾಬ್ವೆ ವಿರುದ್ಧ ಪದಾರ್ಪಣೆ ಪಂದ್ಯದಲ್ಲಿ ಶೂನ್ಯ ಸುತ್ತಿದ್ದರು.

ಪೃಥ್ವಿ ಶಾ ಡಕ್​ಔಟ್
ಪೃಥ್ವಿ ಶಾ ಡಕ್​ಔಟ್

ಕೊಲಂಬೊ: ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಪೃಥ್ವಿ ಶಾ ಮೂರು ಮಾದರಿಯ ಕ್ರಿಕೆಟ್​ನಲ್ಲಿ ಇನ್ನಿಂಗ್ಸ್​ ಆರಂಭಿಸಿದ ಅತ್ಯಂತ ಕಿರಿಯ ಬ್ಯಾಟ್ಸ್​ಮನ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

21 ವರ್ಷದ (58 ದಿನಗಳ) ಪೃಥ್ವಿ ಶಾ 2018ರಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಟೆಸ್ಟ್​ ಕ್ರಿಕೆಟ್​ಗೆ, 2020ರಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ ಇನ್ನಿಂಗ್ಸ್ ಆರಂಭಿಸಿದ್ದರು. ಟೆಸ್ಟ್​ನಲ್ಲಿ 134, ಏಕದಿನದಲ್ಲಿ 20 ಮತ್ತು ಟಿ20 ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.

ಇನ್ನು ಪ್ರತ್ಯೇಕವಾಗಿ ನೋಡುವುದಾರೆ, ಟೆಸ್ಟ್​ ಕ್ರಿಕೆಟ್​ನಲ್ಲಿ ವಿಜಯ್ ಮೆಹ್ತಾ(17 ವರ್ಷ, 265 ದಿನಗಳ) , ಏಕದಿನ ಕ್ರಿಕೆಟ್​ನಲ್ಲಿ ಪಾರ್ಥಿವ್​ ಪಟೇಲ್​(18 ವರ್ಷ, 317 ದಿನಗಳು) ಮತ್ತು ಟಿ20 ಕ್ರಿಕೆಟ್​ನಲ್ಲಿ ಪೃಥ್ವಿ ಶಾ(21 ವರ್ಷ, 358 ದಿನಳು) ಭಾರತದ ಇನ್ನಿಂಗ್ಸ್​ ಆರಂಭಿಸಿದ ಕಿರಿಯ ಬ್ಯಾಟ್ಸ್​ಮನ್​ ಆಗಿದ್ದಾರೆ. ಆದರೆ ಒಟ್ಟಾರೆ ಮೂರು ಮಾದರಿಯಲ್ಲಿ ಇನ್ನಿಂಗ್ಸ್​ ಆರಂಭಿಸಿದ ಕಿರಿಯ ಬ್ಯಾಟ್ಸ್​ಮನ್ ಎಂಬ ದಾಖಲೆ ಪೃಥ್ವಿ ಶಾ ಪಾಲಾಗಿದೆ.

ಪದಾರ್ಪಣೆ ಪಂದ್ಯದಲ್ಲಿ ಡಕ್​ಔಟ್​

ಪೃಥ್ವಿ ಶಾ ಇಂದಿನ ಪಂದ್ಯದಲ್ಲಿ ದುಶ್ಮಂತ ಚಮೀರಾ ಬೌಲಿಂಗ್ ತಾವೆದುರಿಸಿದ ಮೊದಲ ಎಸೆತದಲ್ಲೇ ಕೀಪರ್​ ಕೈಗೆ ಕ್ಯಾಚ್​ ನೀಡಿ ಗೋಲ್ಡನ್​ ಡಕ್​ ಆದರು. ಶಾ ಗಿಂತ ಮೊದಲು ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ದಕ್ಷಿಣ ಆಫ್ರಿಕಾ ವಿರುದ್ಧ, ಕನ್ನಡಿಗ ಕೆ.ಎಲ್ ರಾಹುಲ್​ ಜಿಂಬಾಬ್ವೆ ವಿರುದ್ಧ ಪದಾರ್ಪಣೆ ಪಂದ್ಯದಲ್ಲಿ ಶೂನ್ಯ ಸುತ್ತಿದ್ದರು.

ಇದನ್ನೂ ಓದಿ: IPL ಪುನಾರಂಭದ ವೇಳಾಪಟ್ಟಿ ಪ್ರಕಟ: ಈ 2 ಬಲಿಷ್ಠ ತಂಡಗಳ ನಡುವೆ ಸೆ.19ರಂದು ಕಾದಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.