ETV Bharat / sports

ಮುಂದೂಡಿರುವ ಐಪಿಎಲ್ ಪೂರ್ಣಗೊಳಿಸಲು ಯುಎಇಗಿಂತಲೂ ಇಂಗ್ಲೆಂಡ್​ ಉತ್ತಮ ಸ್ಥಳ: ಪೀಟರ್​ಸನ್

author img

By

Published : May 8, 2021, 7:21 PM IST

ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ದದ 5 ಪಂದ್ಯಗಳ ಟೆಸ್ಟ್​ ಸರಣಿಗಾಗಿ ಇಂಗ್ಲೆಂಡ್​ಗೆ ಮುಂದಿನ ತಿಂಗಳು ಪ್ರಯಾಣ ಬೆಳಸಲಿದೆ. ಈ ಸರಣಿ ಸೆಪ್ಟೆಂಬರ್ 14 ರಂದು ಮುಗಿಯಲಿದೆ. ಹಾಗಾಗಿ ಮುಂದಿನ 31 ಪಂದ್ಯಗಳನ್ನು ಆಯೋಜಿಸಲು ಇಂಗ್ಲೆಂಡ್ ಸೂಕ್ತ ಜಾಗ ಎಂದು ಅವರು ತಿಳಿಸಿದ್ದಾರೆ.

ಕೆವಿನ್ ಪೀಟರ್ಸನ್
ಕೆವಿನ್ ಪೀಟರ್ಸನ್

ಲಂಡನ್: ಈ ವರ್ಷ ಕೋವಿಡ್ 19 ಕಾರಣ ಮುಂದೂಡಲ್ಪಟ್ಟಿರುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಸೆಪ್ಟೆಂಬರ್​ನಲ್ಲಿ ಇಂಗ್ಲೆಂಡ್​ನಲ್ಲಿ ನಡೆಯಬೇಕೆಂದು ಬಯಸುವುದಾಗಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್​ಸನ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ದದ 5 ಪಂದ್ಯಗಳ ಟೆಸ್ಟ್​ ಸರಣಿಗಾಗಿ ಇಂಗ್ಲೆಂಡ್​ಗೆ ಮುಂದಿನ ತಿಂಗಳು ಪ್ರಯಾಣ ಬೆಳಸಲಿದೆ. ಈ ಸರಣಿ ಸೆಪ್ಟೆಂಬರ್ 14 ರಂದು ಮುಗಿಯಲಿದೆ. ಹಾಗಾಗಿ ಮುಂದಿನ 31 ಪಂದ್ಯಗಳನ್ನು ಆಯೋಜಿಸಲು ಇಂಗ್ಲೆಂಡ್ ಸೂಕ್ತ ಜಾಗ ಎಂದು ಅವರು ತಿಳಿಸಿದ್ದಾರೆ.

ಸೆಪ್ಟೆಂಬರ್​ನಲ್ಲಿ ಐಪಿಎಲ್ ಮುಂದುವರಿದ ಭಾಗವನ್ನು​ ಯುಎಇನಲ್ಲಿ ಪೂರ್ಣಗೊಳಿಸುವ ಬಗ್ಗೆ ಮಾತನಾಡುತ್ತಿರುವ ಕೆಲವು ಜನರನ್ನು ನಾನು ನೋಡಿದ್ದೇನೆ. ಆದರೆ, ನಾನು ಐಪಿಎಲ್ ಇಂಗ್ಲೆಂಡ್​ಗೆ ಸ್ಥಳಾಂತರವಾಗಬೇಕೆಂದು ಬಯಸುತ್ತಿದ್ದೇನೆ . ಆ ಸಮಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್​ ಸರಣಿ ಮುಕ್ತಾಯವಾಗಿರುತ್ತದೆ. ಭಾರತದ ಅತ್ಯುತ್ತಮ ಕ್ರಿಕೆಟಿಗರು ಅಲ್ಲೇ ಇರುತ್ತಾರೆ. ಮತ್ತು ಎಲ್ಲಾ ಉತ್ತಮ ಇಂಗ್ಲಿಷ್​ ಆಟಗಾರರು ಕೂಡ ಅಲ್ಲೇ ಸಿಗಲಿದ್ದಾರೆ ಎಂದು ಬೆಟ್​ವೇ ವೆಬ್​ಸೈಟ್​ಗೆ ಬರೆದಿರುವ ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

"ಸೆಪ್ಟೆಂಬರ್ ಮಧ್ಯದಿಂದ ಕೊನೆಯವರೆಗೆ ಯುಕೆ ಕ್ರಿಕೆಟ್​ಗೆ ಅತ್ಯಂತ ಸುಂದರ ಸಮಯ. ಬಿಸಿಸಿಐ ಆ ಸಂದರ್ಭದಲ್ಲಿ ಮ್ಯಾಂಚೆಸ್ಟರ್, ಲೀಡ್ಸ್, ಬರ್ಮಿಂಗ್ಹ್ಯಾಮ್ ಮತ್ತು ಲಂಡನ್ ಎರಡು ಮೈದಾನಗಳನ್ನು ಬಳಸಬಹದು. ಜೊತೆಗೆ ಮೈದಾನದಲ್ಲಿ ಪ್ರೇಕ್ಷಕರಿಗೂ ಅನುಮತಿ ನೀಡುವ ಉತ್ತಮ ಅವಕಾಶವೂ ಇದೆ" ಎಂದು 40 ವರ್ಷದ ಆಂಗ್ಲರ ಮಾಜಿ ನಾಯಕ ತಿಳಿಸಿದ್ದಾರೆ.

ಪೀಟರ್​ಸನ್​ಗಿಂತಲೂ ಮೊದಲೇ ಸರ್ರೆ, ಮಿಡಲ್ ಎಸೆಕ್ಸ್, ವಾರ್ವಿಕ್​ಷೈರ್, ಲಂಕಾಷೈರ್ ಸೇರಿದಂತೆ ಕೆಲವು ಕ್ರಿಕೆಟ್ ಕ್ಲಬ್​ಗಳು ಮೊಟುಕುಗೊಂಡಿರುವ ಐಪಿಎಲ್ ಆಯೋಜನೆಗೆ ತಾವೂ ಸಿದ್ಧರಿದ್ದೇವೆ ಎಂದು ಇಸಿಬಿಗೆ ಪತ್ರ ಬರೆದು ಬಿಸಿಸಿಐ ಜೊತೆ ಮಾತನಾಡುವಂತೆ ಮನವಿ ಮಾಡಿಕೊಂಡಿದ್ದವು. ಅಲ್ಲದೇ ಶ್ರೀಲಂಕಾ, ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್​ಗಳು ಸಹಾ ಮುಂದೆ ಬಂದಿವೆ ಎಂದು ತಿಳಿದು ಬಂದಿದೆ.

ಇದನ್ನು ಓದಿ:ಅರ್ಧಕ್ಕೆ ನಿಂತ ಐಪಿಎಲ್ ನಡೆಸಿಕೊಡಲು ಆಫರ್ ನೀಡಿದ ಇಂಗ್ಲೆಂಡ್ ಕೌಂಟಿ ಕ್ಲಬ್ಸ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.