ಲಂಡನ್ : ಪ್ರಥಮ ದರ್ಜೆ ಕ್ರಿಕೆಟ್ಗೂ ಹಂಡ್ರೆಡ್ ಮಾದರಿಯ ಲೀಗ್ ಸ್ಪರ್ಧೆಯನ್ನು ಆಯೋಜಿಸುವುದರಿಂದ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ಗೆ ಅನುಕೂಲಕರವಾಗಲಿದೆ ಎಂದು ಮಾಜಿ ಇಂಗ್ಲೆಂಡ್ ನಾಯಕ ಕೆವಿನ್ ಪೀಟರ್ಸನ್ ಹೇಳಿದ್ದಾರೆ.
2005, 2009, 2010-11, 2013ರ ಆ್ಯಶಸ್ ಟೆಸ್ಟ್ ಸರಣಿ ಜಯಿಸಿರುವ ಪೀಟರ್ಸನ್ ವಿಶ್ವದ ಪುರಾತನ ಪ್ರಥಮ ದರ್ಜೆ ಕ್ರಿಕೆಟ್ ಆಗಿರುವ ಕೌಂಟಿ ಚಾಂಪಿಯನ್ಶಿಪ್ ತನ್ನ ಹೊಳಪನ್ನು ಕಳೆದುಕೊಂಡಿದೆ.
ಟೆಸ್ಟ್ ತಂಡಕ್ಕೆ ಉತ್ತಮ ಸೇವೆ ಸಲ್ಲಿಸುವ ಆಟಗಾರರನ್ನು ಕೊಡುವುದಕ್ಕೆ ಅದು ಸೂಕ್ತವಾಗಿಲ್ಲ ಎಂದು ಸ್ಪೋರ್ಟ್ ವೆಬ್ಸೈಟ್ವೊಂದಕ್ಕೆ ಬರೆದ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.
ಕ್ರಿಕೆಟ್ನಲ್ಲಿ ಎಲ್ಲಾ ಕಡೆಯಲ್ಲೂ ದುಡ್ಡು ಸಿಗುತ್ತಿರುವುದರಿಂದ ಅತ್ಯುತ್ತಮ ಆಟಗಾರರು ಕೌಂಟಿಯಲ್ಲಿ ಆಡುತ್ತಿಲ್ಲ. ಹಾಗಾಗಿ, ನಾನು ಈ ಹಿಂದೆ ಶ್ರೇಷ್ಠ ಆಟಗಾರರಿಂದ ಕಲಿತಂತೆ ಇಂದಿನ ಯುವ ಇಂಗ್ಲಿಷ್ ಆಟಗಾರರಿಗೆ ಕಲಿಯಲು ಅವಕಾಶ ಸಿಗುತ್ತಿಲ್ಲ.
ಇಂದಿನ ದಿನಗಳಲ್ಲಿ ನಮ್ಮ ಬ್ಯಾಟರ್ಗಳು ಸಾಧಾರಣ ಪಿಚ್ನಲ್ಲೂ ಸರಾಸರಿ ಬೌಲರ್ಗಳಿಗೂ ಸುಲಭವಾಗಿ ವಿಕೆಟ್ ಒಪ್ಪಿಸುತ್ತಿದ್ದಾರೆ ಎಂದು ಪೀಟರ್ಸನ್ ತಿಳಿಸಿದ್ದಾರೆ. ಆದ್ದರಿಂದ ಈಗಾಗಲೇ ಇಸಿಬಿ ಸೃಷ್ಟಿಸಿರುವ ಹಂಡ್ರೆಡ್ ಅಂತಾ ಹೊಸ ಸ್ಪರ್ಧೆಯನ್ನು ಆರಂಭಿಸಬೇಕು, ಅದು ಅತ್ಯುತ್ತಮರು ಮತ್ತೊಂದು ಅತ್ಯುತ್ತಮ ಆಟಗಾರರ ಎದುರು ಆಡಿದರೆ ಉತ್ತಮ ಸ್ಪರ್ಧೆ ಏರ್ಪಡುತ್ತದೆ ಮತ್ತು ಹೆಚ್ಚು ವೀಕ್ಷಕರನ್ನು ಸೆಳೆಯಬಹುದು.
ಹೊಸ ಆಟಗಾರರು ಅನುಭವಿಗಳ ಜೊತೆ ಆಡಿದಾಗ ಉತ್ತಮ ಅನುಭವವನ್ನು ಪಡೆದುಕೊಳ್ಳಲಿದ್ದಾರೆ. ವಿಶ್ವದ ಟಾಪ್ ಆಟಗಾರರು ಭಾಗವಹಿಸುವುದರಿಂದ ಇಂಗ್ಲಿಷ್ ಆಟಗಾರರಿಗೆ ಅನುಕೂಲ ಕೂಡ ಆಗಲಿದೆ ಎಂದು ಬರೆದಿದ್ದಾರೆ.
ಕೆವಿನ್ ಪೀಟರ್ಸನ್ ಈ ನೂತನ ಪ್ರಥಮ ದರ್ಜೆ ಕ್ರಿಕೆಟ್ನ ಫ್ರಾಂಚೈಸಿಗೆ 8 ತಂಡಗಳು ರೌಂಡ್ ರಾಬಿನ್ ಟೂರ್ನಿಯನ್ನು ಸಲಹೆ ಮಾಡಿದ್ದಾರೆ.
ಇದನ್ನೂ ಓದಿ:ತವರಿನ ಅಭಿಮಾನಿಗಳ ಮುಂದೆ ವರ್ಷದ ಮೊದಲ ಶತಕ ಸಿಡಿಸಿ ಅಬ್ಬರಿಸಿದ ಡೆವೊನ್ ಕಾನ್ವೆ