ಆ್ಯಶಸ್ ಮೊದಲ ಪಂದ್ಯದ ಗೆಲುವಿನ ರೂವಾರಿ ಪ್ಯಾಟ್ ಕಮಿನ್ಸ್ ಟೆಸ್ಟ್ ಕ್ರಿಕೆಟ್‌ನ 'ಹೊಸ ಮಿ.ಕೂಲ್': ವೀರೇಂದ್ರ ಸೆಹ್ವಾಗ್ - ಕಮಿನ್ಸ್ ಆಟಕ್ಕೆ ಸೆಹ್ವಾಗ್ ಬಹುಪರಾಕ್
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಮಿಸ್ಟರ್ ಕೂಲ್, ಕೂಲ್ ಕ್ಯಾಪ್ಟನ್ ಎಂದೇ ಕರೆಯಲಾಗುತ್ತಿದೆ. ಆದರೆ ಈಗ ಆ್ಯಶಸ್ ಟೆಸ್ಟ್‌ನ ಮೊದಲ ಪಂದ್ಯದ ಬಳಿಕ ಹೊಸ ಮಿಸ್ಟರ್ ಕೂಲ್ ಆಟಗಾರನನ್ನು ವೀರೇಂದ್ರ ಸೆಹ್ವಾಗ್ ಹೆಸರಿಸಿದ್ದಾರೆ.
ನವದೆಹಲಿ: ಆ್ಯಶಸ್ ಕ್ರಿಕೆಟ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ನಿನ್ನೆ (ಮಂಗಳವಾರ) ಆತಿಥೇಯ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಎರಡು ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿತು. ಈ ಮೂಲಕ ಆಸೀಸ್ ಐದು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಹಾಗೂ ಉಸ್ಮಾನ್ ಖವಾಜಾ ತಂಡದ ಗೆಲುವಿನ ಹೀರೋಗಳಾಗಿ ಹೊರಹೊಮ್ಮಿದ್ದಾರೆ. ಅದರಲ್ಲೂ, ಪ್ಯಾಟ್ ಕಮಿನ್ಸ್ ಆಟಕ್ಕೆ ಭಾರತದ ದಿಗ್ಗಜ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮನಸೋತಿದ್ದು, ಅವರನ್ನು ಟೆಸ್ಟ್ ಕ್ರಿಕೆಟ್‌ನ 'ಹೊಸ ಮಿಸ್ಟರ್ ಕೂಲ್' ಎಂದು ಬಣ್ಣಿಸಿದ್ದಾರೆ.
ಇಂಗ್ಲೆಂಡ್ನ ಎಡ್ಜ್‌ಬಾಸ್ಟನ್‌ನಲ್ಲಿ ಮಂಗಳವಾರ ಮೊದಲ ಟೆಸ್ಟ್‌ನ ಕೊನೆಯ ದಿನ ಆಸ್ಟ್ರೇಲಿಯಾ ಎರಡು ವಿಕೆಟ್‌ಗಳ ರೋಚಕ ಜಯದೊಂದಿಗೆ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿಯಿತು. ಮೊದಲ ಇನ್ನಿಂಗ್ಸ್ನಲ್ಲಿ 393/8 ರನ್ಗಳಿಗೆ ಇಂಗ್ಲೆಂಡ್ ಡಿಕ್ಲೇರ್ ಮಾಡಿಕೊಂಡಿತ್ತು. ಆಸ್ಟ್ರೇಲಿಯಾ 386 ರನ್ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿ ಕೇವಲ 7 ರನ್‌ಗಳ ಹಿನ್ನಡೆ ಅನುಭವಿಸಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ ಪ್ಯಾಟ್ ಕಮಿನ್ಸ್ ಹಾಗೂ ನಾಥನ್ ಲಯಾನ್ ತಲಾ ನಾಲ್ಕು ವಿಕೆಟ್ ಪಡೆದು ಇಂಗ್ಲೆಂಡ್ ತಂಡವನ್ನು ಕೇವಲ 273 ರನ್ಗಳಿಗೆ ಕಟ್ಟಿ ಹಾಕಿದ್ದರು. ಇದರಿಂದ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ನಲ್ಲಿ 273 ರನ್‌ಗಳ ಗೆಲುವಿನ ಗುರಿ ಪಡೆದಿತ್ತು.
-
What a Test Match. One of the best I have seen in recent times. Testcricket is Best Cricket.
— Virender Sehwag (@virendersehwag) June 20, 2023 " class="align-text-top noRightClick twitterSection" data="
Was a gutsy decision by England to declare just before close on Day 1, especially considering the weather. But Khawaja was outstanding in both innings and @patcummins30 is the new Mr.… pic.twitter.com/9QqC2hjyzr
">What a Test Match. One of the best I have seen in recent times. Testcricket is Best Cricket.
— Virender Sehwag (@virendersehwag) June 20, 2023
Was a gutsy decision by England to declare just before close on Day 1, especially considering the weather. But Khawaja was outstanding in both innings and @patcummins30 is the new Mr.… pic.twitter.com/9QqC2hjyzrWhat a Test Match. One of the best I have seen in recent times. Testcricket is Best Cricket.
— Virender Sehwag (@virendersehwag) June 20, 2023
Was a gutsy decision by England to declare just before close on Day 1, especially considering the weather. But Khawaja was outstanding in both innings and @patcummins30 is the new Mr.… pic.twitter.com/9QqC2hjyzr
ಆದರೆ, ಅಂತಿಮ ದಿನದಾಟ ಮಳೆಯಿಂದಾಗಿ ವಿಳಂಬವಾಯಿತು. 3 ವಿಕೆಟ್ ಕಳೆದುಕೊಂಡು 107 ರನ್ ಗಳಿಸಿದ್ದ ಆಸ್ಟ್ರೇಲಿಯಾ ತಂಡದ ಗೆಲುವಿಗೆ 174 ರನ್ ಅಗತ್ಯವಿತ್ತು. ಮಧ್ಯಾಹ್ನ ತಡವಾಗಿ ಆರಂಭವಾದ ಪಂದ್ಯದಲ್ಲಿ 4 ವಿಕೆಟ್ ಉರುಳಿಸಿ ಆಂಗ್ಲ ಬೌಲರ್‌ಗಳು ಪ್ರಾಬಲ್ಯ ಮೆರೆದಿದ್ದರು. ಕೊನೆಯ ಸೆಷನ್ನಲ್ಲಿ ಆಸ್ಟ್ರೇಲಿಯಾಕ್ಕೆ 3 ವಿಕೆಟ್‌ಗಳಿಂದ 73 ರನ್ ಗಳಿಸಬೇಕಾಗಿತ್ತು. ಇದರಿಂದ ಕಾಂಗಾರು ಪಡೆ ಸೋಲುತ್ತದೆ ಎಂದೇ ಬಹುತೇಕರು ಭಾವಿಸಿದ್ದರು. ಆದರೆ, ಪ್ಯಾಟ್ ಕಮಿನ್ಸ್ ಉಪಯುಕ್ತ ಬ್ಯಾಟಿಂಗ್ ಪ್ರದರ್ಶಿಸಿದರು. 9ನೇ ವಿಕೆಟ್‌ಗೆ ನಾಥನ್ ಲಯಾನ್ ಜೊತೆಗೂಡಿ ಕಮಿನ್ಸ್ 72 ಎಸೆತಗಳಲ್ಲಿ 55 ರನ್‌ಗಳ ಕೊಡುಗೆ ನೀಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕಮಿನ್ಸ್ 44 ರನ್ ಬಾರಿಸಿದರೆ, ಇವರಿಗೆ ಉತ್ತಮ ಸಾಥ್ ನೀಡಿದ ನಾಥನ್ 16 ರನ್ ಕಲೆ ಹಾಕಿದರು.
ಕಮಿನ್ಸ್ ಆಟಕ್ಕೆ ಸೆಹ್ವಾಗ್ ಬಹುಪರಾಕ್: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ನಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ಗೆದ್ದು ಟೆಸ್ಟ್ ಚಾಂಪಿಯನ್ ಪಟ್ಟಕ್ಕೇರಿದ ನಂತರ ಪ್ಯಾಟ್ ಕಮಿನ್ಸ್ ಟೀಂ ಮೊದಲ ಹಾಗೂ ಪ್ರತಿಷ್ಟಿತ ಆ್ಯಶಸ್ ಟೆಸ್ಟ್ ಸರಣಿ ಆಡುತ್ತಿದೆ. ಮೊದಲ ಪಂದ್ಯದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಕಮಿನ್ಸ್ ಜವಾಬ್ದಾರಿಯುತ ಆಟ ಪ್ರದರ್ಶನ ಕ್ರಿಕೆಟ್ ಜಗತ್ತನ್ನು ಗಮನ ಸೆಳೆಯುವಂತೆ ಮಾಡಿದೆ. ಕಮಿನ್ಸ್ ಆಟಕ್ಕೆ ವೀರೇಂದ್ರ ಸೆಹ್ವಾಗ್ ಕೂಡ ಬಹುಪರಾಕ್ ಎಂದಿದ್ದು, ಸಂಚಲನಕಾರಿ ಟ್ವೀಟ್ ಮಾಡಿದ್ದಾರೆ.
ಆ್ಯಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದ ಫಲಿತಾಂಶದ ನಂತರ ಟ್ವೀಟ್ ಮಾಡಿರುವ ಸೆಹ್ವಾಗ್, ''ಎಂತಹ ಟೆಸ್ಟ್ ಪಂದ್ಯ. ಇತ್ತೀಚಿನ ದಿನಗಳಲ್ಲಿ ನಾನು ನೋಡಿದ ಅತ್ಯುತ್ತಮ ಪಂದ್ಯಗಳಲ್ಲಿ ಒಂದು. ಟೆಸ್ಟ್ ಕ್ರಿಕೆಟ್ ಅತ್ಯುತ್ತಮ ಕ್ರಿಕೆಟ್ ಆಗಿದೆ. ವಿಶೇಷವಾಗಿ ಹವಾಮಾನವನ್ನು ಪರಿಗಣಿಸಿ ಮೊದಲ ದಿನ ಮುಕ್ತಾಯಗೊಳ್ಳುವ ಮೊದಲೇ ಡಿಕ್ಲೇರ್ ಘೋಷಿಸಿದ ಇಂಗ್ಲೆಂಡ್ ನಿರ್ಧಾರ ಛಲದಿಂದ ಕೂಡಿತ್ತು. ಆದರೆ, ಖವಾಜಾ ಎರಡೂ ಇನ್ನಿಂಗ್ಸ್‌ಗಳಲ್ಲಿ ಅತ್ಯುತ್ತಮ ಆಟ ನೀಡಿದರು. ಪ್ಯಾಟ್ ಕಮಿನ್ಸ್ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಮಿಸ್ಟರ್ ಕೂಲ್. ಒತ್ತಡದಲ್ಲೂ ಲಯಾನ್ ಜೊತೆಗೂಡಿ ಎಂತಹ ಇನ್ನಿಂಗ್ಸ್ ಅನ್ನು ಅವರು ಕಟ್ಟಿದರು. ಈ ಜೊತೆಯಾಟವು ದೀರ್ಘಕಾಲದವರೆಗೆ ನೆನಪಿರುತ್ತದೆ'' ಎಂದು ಹೇಳಿದ್ದಾರೆ.
ನಿಧಾನಗತಿ ಆಟ- ಉಭಯ ತಂಡಗಳಿಗೂ ದಂಡ: ಮತ್ತೊಂದೆಡೆ, ಮೊದಲ ಆ್ಯಶಸ್ ಟೆಸ್ಟ್‌ನಲ್ಲಿ ನಿಧಾನಗತಿಯ ಆಟ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ತಲಾ ಎರಡು ಅಂಕಗಳನ್ನು ಕಡಿತ ಮಾಡಲಾಗಿದೆ. ಅಲ್ಲದೇ, ಇತ್ತಂಡಗಳ ಆಟಗಾರರಿಗೆ ಪಂದ್ಯದ ಶೇ.40ರಷ್ಟು ದಂಡ ವಿಧಿಸಲಾಗಿದೆ. ತಂಡಗಳು ತಮ್ಮ ಗುರಿಗಿಂತ ಎರಡು ಓವರ್‌ಗಳಷ್ಟು ನಿಧಾನಗತಿಯ ಆಟ ಪ್ರದರ್ಶಿಸಿವೆ ಎಂದು ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಹೇಳಿದ್ದಾರೆ. ಇದನ್ನು ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಒಪ್ಪಿಕೊಂಡಿದ್ದಾರೆ. ಇದರಿಂದ ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ತಿಳಿಸಿದೆ.
ಇದನ್ನೂ ಓದಿ: ವುಮೆನ್ಸ್ ಇಂಡಿಯಾ ಎ ಟೀಂ ಮಡಿಲಿಗೆ 2023ರ ACC ಮಹಿಳಾ ಉದಯೋನ್ಮುಖ ಟೀಮ್ ಕಪ್