ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ದಾಖಲು ಮಾಡಿದ್ದು, ಅಂಕ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿ ಮುಂದುವರೆದಿದೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ಸ್ ನೀಡಿದ್ದ 178 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಆರ್ಸಿಬಿ ಯಾವುದೇ ವಿಕೆಟ್ನಷ್ಟವಿಲ್ಲದೇ 16.3 ಓವರ್ಗಳಲ್ಲಿ ಗೆಲುವಿನ ದಡ ಸೇರಿತು. ಆರಂಭಿಕರಾಗಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು.
ಐಪಿಎಲ್ ಇತಿಹಾಸದಲ್ಲೇ ಮೊದಲ ಶತಕ ಸಿಡಿಸಿ ಮಿಂಚಿದ ಕನ್ನಡಿಗ ದೇವದತ್ ಪಡಿಕ್ಕಲ್, ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ವೇಳೆ ಮಾತನಾಡಿದ ಪಡಿಕ್ಕಲ್, ಕೊಹ್ಲಿ ಜೊತೆಗಿನ ಜೊತೆಯಾಟದಿಂದಲೇ ಮಧ್ಯಮ ಕ್ರಮಾಂಕದಲ್ಲಿ ಸುಲಭವಾಗಿ ಬೌಂಡರಿ ಸಿಡಿಸಲು ಸುಲಭವಾಯಿತು ಎಂದಿದ್ದಾರೆ.
ಮಧ್ಯಮ ಓವರ್ಗಳಲ್ಲಿ ಬೌಂಡರಿ ಹೊಡೆಯುವುದು ಒಂದು ಸವಾಲಿನ ಕೆಲಸ, ಆದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಜೊತೆ ಮೈದಾನದಲ್ಲಿದ್ದ ಕಾರಣ ಬೌಂಡರಿ ಸಿಡಿಸುವುದು ಸುಲಭವಾಯಿತು ಎಂದಿದ್ದಾರೆ. ಚೊಚ್ಚಲ ಶತಕ ಹತ್ತಿರವಾಗುತ್ತಿದ್ದಂತೆ ಮನಸ್ಸಿನಲ್ಲಿ ಏನು ಓಡಲು ಶುರುವಾಯಿತು ಎಂದು ಕೇಳಿದಾಗ ಗೆಲುವು ಹೆಚ್ಚು ಮಹತ್ವದಾಗಿದ್ದರಿಂದ ತಮ್ಮ ಮೈಲಿಗಲ್ಲು ಬಗ್ಗೆ ಯೋಚಿಸಲಿಲ್ಲ ಎಂದರು. ಪಂದ್ಯ ಮುಗಿಸಲು ನಾನು ನೋಡುತ್ತಿದ್ದೆ. ಅದು ಹೆಚ್ಚು ಮುಖ್ಯವಾಗಿತ್ತು ಎಂದರು.
ಇದನ್ನೂ ಓದಿ: ಖರೀದಿ ಮಾಡಿರುವ ಬೆಲೆಗೆ ಕ್ರಿಸ್ ಮೋರಿಸ್ ಯೋಗ್ಯನಲ್ಲ: ಕೆವಿನ್ ಪೀಟರ್ಸನ್ ವಾಗ್ದಾಳಿ!
ರಾಯಲ್ ಚಾಲೆಂಜರ್ಸ್ ಆಡಿರುವ 4 ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿದ್ದು, ಅಂಕಪಟ್ಟಿಯಲ್ಲಿ 8 ಪಾಯಿಂಟ್ಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಇದೀಗ ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಾಟ ನಡೆಸಲಿದೆ. ನಿನ್ನೆಯ ಪಂದ್ಯದಲ್ಲಿ 20ರ ಹರೆಯದ ದೇವದತ್ 52 ಎಸೆತಗಳಲ್ಲಿ ಅಜೇಯ 101ರನ್ಗಳಿಕೆ ಮಾಡಿದ್ರೆ, ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ ಅಜೇಯ 72ರನ್ಗಳಿಕೆ ಮಾಡಿದ್ದರು.