ETV Bharat / sports

​ಕಳೆದ ಆವೃತ್ತಿಯಲ್ಲಿ 20 ಲಕ್ಷ ಪಡೆದಿದ್ದ ಪಡಿಕ್ಕಲ್​ಗೆ ಈ ಬಾರಿ​ 7.75 ಕೋಟಿ ರೂ: ಹರ್ಷಲ್​ ಪಟೇಲ್​ಗೆ 10.75 ಕೋಟಿ ರೂ! - ರಾಯಲ್ ಚಾಲೆಂಜರ್ಸ್ ಬೆಂಗಳೂರು ಹರ್ಷಲ್ ಪಟೇಲ್​

2019ರ ಹರಾಜಿನಲ್ಲಿ ಕರ್ನಾಟಕದ ಯುವ ಬ್ಯಾಟರ್​ನನ್ನು ಆರ್​ಸಿಬಿ 20 ಲಕ್ಷ ರೂಗಳಿಗೆ ರಿಟೈನ್ ಮಾಡಿಕೊಂಡಿತ್ತು. ನಂತರ 2021ರ ವರೆಗೆ ರಿಟೈನ್ ಮಾಡಕೊಂಡು ಬಂದಿತ್ತು. 2020 ಮತ್ತು 2021ರಲ್ಲಿ ಆರಂಭಿಕ ಬ್ಯಾಟರ್​ ಆಗಿ ಕಣಕ್ಕಿಳಿದಿದ್ದ ಪಡಿಕ್ಕಲ್​ 473, 2021ರಲ್ಲಿ 411 ರನ್​​ಗಳಿಸಿದ್ದರು.

Harshal Patel back with RCB for whopping Rs 10.75 crore
ಐಪಿಎಲ್ ಮೆಗಾ ಹರಾಜು
author img

By

Published : Feb 12, 2022, 2:17 PM IST

ಬೆಂಗಳೂರು: ಭಾರತ ತಂಡದ ಭವಿಷ್ಯದ ತಾರೆ ದೇವದತ್​ ಪಡಿಕ್ಕಲ್​ 2022ರ ಮೆಗಾ ಹರಾಜಿನಲ್ಲಿ 7.75 ಕೋಟಿ ರೂ ಪಡೆಯುವ ಮೂಲಕ ಬಂಪರ್​ ಬೆಲೆ ಪಡೆದಿದ್ದಾರೆ. ಕರ್ನಾಟಕ ಯುವ ಆಟಗಾರನನ್ನು ರಾಜಸ್ತಾನ್​ ರಾಯಲ್ಸ್​ ಖರೀದಿಸಿದೆ.

2019ರ ಹರಾಜಿನಲ್ಲಿ ಕರ್ನಾಟಕದ ಯುವ ಬ್ಯಾಟರ್​ನನ್ನು ಆರ್​ಸಿಬಿ 20 ಲಕ್ಷ ರೂಗಳಿಗೆ ರಿಟೈನ್ ಮಾಡಿಕೊಂಡಿತ್ತು. ನಂತರ 2021ರ ವರೆಗೆ ರಿಟೈನ್ ಮಾಡಿಕೊಂಡು ಬಂದಿತ್ತು. 2020 ಮತ್ತು 2021ರಲ್ಲಿ ಆರಂಭಿಕ ಬ್ಯಾಟರ್​ ಆಗಿ ಕಣಕ್ಕಿಳಿದಿದ್ದ ಪಡಿಕ್ಕಲ್​ 473, 2021ರಲ್ಲಿ 411 ರನ್​​ಗಳಿಸಿದ್ದರು.

ಮತ್ತೊಬ್ಬ ಮಾಜಿ ಆರ್​ಸಿಬಿ ಆಟಗಾರ ಹರ್ಷಲ್​ ಪಟೇಲ್ ಕೂಡ ಭರ್ಜರಿ ಮೊತ್ತ ಪಡೆದಿದ್ದಾರೆ. 2021ರ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮತ್ತೆ ಆರ್​​ಸಿಬಿಗೆ 10.75 ಕೋಟಿ ರೂ ನೀಡಿ ಖರೀದಿಸಿದೆ. ಕಳೆದ ಆವೃತ್ತಿಯಲ್ಲಿ ಪಟೇಲ್​ ಕೇವಲ 20 ಲಕ್ಷ ರೂ ಪಡೆದುಕೊಂಡಿದ್ದರು. 2021ರಲ್ಲಿ 32 ವಿಕೆಟ್​ ಪಡೆದುಕೊಂಡಿದ್ದ ಪಟೇಲ್​ ಪರ್ಪಲ್​ ಕ್ಯಾಪ್​ ಪಡೆದುಕೊಂಡಿದ್ದರು. ಈ ಪ್ರದರ್ಶನವೇ ಅವರಿಗೆ 20 ಲಕ್ಷ ಮೂಲ ಬೆಲೆಯಿಂದ 10.75 ಕೋಟಿಗೆ ಏರುವಂತೆ ಮಾಡಿದೆ.

ಆರ್​ಸಿಬಿ ವಿರಾಟ್​ ಕೊಹ್ಲಿಯನ್ನು 15 ಕೋಟಿರೂಗೆ , ಮ್ಯಾಕ್ಸ್​ವೆಲ್​ರನ್ನು 11 ಕೋಟಿ ಮತ್ತು ಸಿರಾಜ್​ರನ್ನು 7 ಕೋಟಿ ರೂ ನೀಡಿ ರಿಟೈನ್ ಮಾಡಿಕೊಂಡಿತ್ತು. ಪ್ರಸ್ತುತ ಬೆಂಗಳೂರಿನಲ್ಲಿ ನಡೆಯುತ್ತಿರುವ ಹರಾಜಿನಲ್ಲಿ ಆರ್​ಸಿಬಿ ಪಟೇಲ್​ ಜೊತೆಗೆ ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟರ್​ ಫಾಫ್​ ಡು ಪ್ಲೆಸಿಸ್​ರನ್ನು 7 ಕೋಟಿ ರೂ. ನೀಡಿ ಖರಿದೀಸಿದೆ.

ಇದನ್ನೂ ಓದಿ:IPL 2022 Auction: ಶ್ರೇಯಸ್ ಅಯ್ಯರ್​ಗೆ ಬಂಪರ್​.. 12.5 ಕೋಟಿ ನೀಡಿದ ಕೆಕೆಆರ್​, ಧವನ್ ಪಂಜಾಬ್​ ಪಾಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.