ETV Bharat / sports

ಜನಾಂಗೀಯ ನಿಂದನೆಯ ಟ್ವೀಟ್​: ರಾಬಿನ್​ಸನ್​ ನಂತರ ಮತ್ತೊಬ್ಬ ಇಂಗ್ಲೆಂಡ್ ಆಟಗಾರನ ವಿಚಾರಣೆ

author img

By

Published : Jun 8, 2021, 4:03 PM IST

ಆ ಆಟಗಾರನ ಹಳೆಯ ಟ್ವೀಟ್‌ಗಳನ್ನು ವಿಸ್ಡೆನ್.ಕಾಮ್ ಪತ್ತೆಹಚ್ಚಿದೆ. ಆದರೆ, ಆತ ಟ್ವೀಟ್ ಮಾಡಿದ್ದ ಸಮಯದಲ್ಲಿ 16 ನೇ ವಯಸ್ಸನ್ನು ತಲುಪದ ಕಾರಣ ಕ್ರಿಕೆಟಿಗನ ಗುರುತನ್ನು ಬಹಿರಂಗಗೊಳಿಸಿಲ್ಲ. ಆದರೆ, ಆಟಗಾರನ ಹೆಸರನ್ನು ಬಹಿರಂಗಪಡಿಸದೇ ಟ್ವೀಟ್​ಗಳ ಸ್ಕ್ರೀನ್ ಶಾಟ್​ಗಳನ್ನು ವೆಬ್ ಸೈಟ್ ಹಂಚಿಕೊಂಡಿದೆ.

ಇಂಗ್ಲೆಂಡ್ ಆಟಗಾರನ ವಿಚಾರಣೆ
ಇಂಗ್ಲೆಂಡ್ ಆಟಗಾರನ ವಿಚಾರಣೆ

ಲಂಡನ್: ಅವಹೇಳನಕಾರಿ ಟ್ವೀಟ್​ಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಉದಯೋನ್ಮುಖ ವೇಗಿ ಆಲ್ಲಿ ರಾಬಿಬ್​ಸನ್ ಅಮಾನತಾದ ನಂತರ ಮತ್ತೊಬ್ಬ ಕ್ರಿಕೆಟಿಗ ತನ್ನ ಹದಿಹರೆಯದ ವಯಸ್ಸಿನಲ್ಲಿ ಜನಾಂಗೀಯ ನಿಂದನೆ ಸೂಚಿಸುವ ಟ್ವೀಟ್ ಮಾಡಿರುವುದು ಬೆಳಕಿಗೆ ಬಂದಿದ್ದು, ಆ ಕ್ರಿಕೆಟಿಗನನ್ನು ಇಂಗ್ಲೆಂಡ್​ ಕ್ರಿಕೆಟ್ ಮಂಡಳಿ ವಿಚಾರಣೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

ಆ ಆಟಗಾರನ ಹಳೆಯ ಟ್ವೀಟ್‌ಗಳನ್ನು ವಿಸ್ಡೆನ್.ಕಾಮ್ ಪತ್ತೆಹಚ್ಚಿದೆ. ಆದರೆ, ಆತ ಟ್ವೀಟ್ ಮಾಡಿದ್ದ ಸಮಯದಲ್ಲಿ 16 ನೇ ವಯಸ್ಸನ್ನು ತಲುಪದ ಕಾರಣ ಕ್ರಿಕೆಟಿಗನ ಗುರುತನ್ನು ಬಹಿರಂಗಗೊಳಿಸಿಲ್ಲ. ಆದರೆ, ಆಟಗಾರನ ಹೆಸರನ್ನು ಬಹಿರಂಗಪಡಿಸದೇ ಟ್ವೀಟ್​ಗಳ ಸ್ಕ್ರೀನ್ ಶಾಟ್​ಗಳನ್ನು ವೆಬ್ ಸೈಟ್ ಹಂಚಿಕೊಂಡಿದೆ.

"ನೀವು ಏಷ್ಯನ್ನರೊಂದಿಗೆ ಹೊರಗೆ ಹೋಗುತ್ತಿದ್ದೀರಿ" ಎಂದು #asianthroughhandthrough # hweollo #chinky ಹ್ಯಾಶ್‌ಟ್ಯಾಗ್‌ಗಳೊಂದಿಗೆ ತನಿಖೆಗೆ ಒಳಪಟ್ಟಿರುವ ಆಟಗಾರ ಪೋಸ್ಟ್ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಈ ಬಗ್ಗೆ ತನಿಖೆ ಆರಂಭಿಸಿದೆ.

ಇಂಗ್ಲೆಂಡ್ ಆಟಗಾರ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಐತಿಹಾಸಿಕ ಆಕ್ರಮಣಕಾರಿ ವಿಷಯವನ್ನು ಪೋಸ್ಟ್ ಮಾಡಿದ್ದಾನೆ ಎಂದು ನಮ್ಮ ಗಮನಕ್ಕೆ ತರಲಾಗಿದೆ. ನಾವು ಅದನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಸೂಕ್ತ ಸಮಯದಲ್ಲಿ ಪ್ರತಿಕ್ರಿಯೆಯನ್ನು ನೀಡುತ್ತೇವೆ" ಎಂದು ಇಸಿಬಿ ವಕ್ತಾರರು ವೆಬ್‌ಸೈಟ್​ವೊಂದಕ್ಕೆ ತಿಳಿಸಿದ್ದಾರೆ.

2012-2013ರ ಸಮಯದಲ್ಲಿ ಆಲ್ಲಿ ರಾಬಿನ್​ಸನ್​ ಮಹಿಳೆಯರ ಬಗ್ಗೆ ಕೀಳಾಗಿ, ಏಷ್ಯಾದ ಜನರು ಮತ್ತು ಮುಸ್ಲಿಂ ಸಮುದಾಯದ ಬಗ್ಗೆಯೂ ಕೆಟ್ಟದಾಗಿ ಟ್ವೀಟ್​ ಮಾಡಿದ್ದಾರೆ. ಇದಕ್ಕಾಗಿ ಅವರ ವಿರುದ್ಧ ತನಿಖೆ ನಡೆಯುತ್ತಿರುವುದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಇಸಿಬಿ ಅಮಾನತು ಮಾಡಿದೆ.

ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್​ ನಡುವಿನ ಮೊದಲನೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಈ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ರಾಬಿನ್​ಸನ್​ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ 42 ರನ್ ಬಾರಿಸಿ ಮಿಂಚಿದ್ದರು.

ಇದನ್ನು ಓದಿ:ಹದಿಹರೆಯದಲ್ಲಿ ಮಾಡಿದ ವಿವಾದಾತ್ಮಕ ಟ್ವೀಟ್​: ಇಂಗ್ಲೆಂಡ್​ ತಂಡದಿಂದ ಹೊರಬಿದ್ದ ಯುವ ಕ್ರಿಕೆಟಿಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.