ಹ್ಯಾಮಿಲ್ಟನ್ : ಕ್ರಿಕೆಟ್ ಶಿಶು ನೆದರ್ಲ್ಯಾಂಡ್ ವಿರುದ್ಧ ಬಲಿಷ್ಠ ನ್ಯೂಜಿಲ್ಯಾಂಡ್ ಇಲ್ಲಿ ನಡೆದ 2ನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 118 ರನ್ಗಳ ಜಯ ಸಾಧಿಸಿದೆ. ಮೂರು ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ಟಾಸ್ ಗೆದ್ದ ನೆದರ್ಲ್ಯಾಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕರಾಗಿ ಬಂದ ಮಾರ್ಟಿನ್ ಗುಪ್ಟಿಲ್(6), ಹೆನ್ರಿ ನಿಕೋಲಸ್ಗೆ (19), ವಿಲ್ ಯಂಗ್(1), ಹಿರಿಯ ಅಟಗಾರ ರಾಸ್ ಟೇಲರ್(1) ಮತ್ತು ಬ್ರೇಸ್ವೆಲ್ 1 ರನ್ಗೆ ಔಟಾಗುವ ಮೂಲಕ ತಂಡ 32 ರನ್ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
-
New Zealand win by 118 runs and take an unassailable 2-0 ODI series lead against Netherlands 🎉#NZvNED pic.twitter.com/zix3GAmWYO
— ICC (@ICC) April 2, 2022 " class="align-text-top noRightClick twitterSection" data="
">New Zealand win by 118 runs and take an unassailable 2-0 ODI series lead against Netherlands 🎉#NZvNED pic.twitter.com/zix3GAmWYO
— ICC (@ICC) April 2, 2022New Zealand win by 118 runs and take an unassailable 2-0 ODI series lead against Netherlands 🎉#NZvNED pic.twitter.com/zix3GAmWYO
— ICC (@ICC) April 2, 2022
ಈ ವೇಳೆ ತಂಡದ ರನ್ ಹೆಚ್ಚಿಸುವ ಜವಾಬ್ದಾರಿ ಹೊತ್ತ ನಾಯಕ ಟಾಮ್ ಲಾಥಮ್ ಭರ್ಜರಿ ಶತಕ ಸಿಡಿಸಿದರು. 123 ಎಸೆತಗಳಲ್ಲಿ 10 ಬೌಂಡರಿ, 5 ಸಿಕ್ಸರ್ ಸಮೇತ 140 ರನ್ ಬಾರಿಸಿ ಅಜೇಯರಾಗಿ ಉಳಿದರು.
ಲಾಥಮ್ ಕೂಡಿಕೊಂಡ ಬೌಲರ್ ಬ್ರೇಸ್ವೆಲ್ 41 ರನ್ ಸಿಡಿಸುವ ಮೂಲಕ ತಂಡದ ಮೊತ್ತ 250 ಗಡಿ ದಾಟಲು ನೆರವಾದರು. ಅಂತಿಮವಾಗಿ ನ್ಯೂಜಿಲ್ಯಾಂಡ್ ತಂಡ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 264 ರನ್ ಪೇರಿಸಿತು. ಇನ್ನು ನೆದರ್ಲ್ಯಾಂಡ್ ಪರ ವ್ಯಾನ್ ಬೀಕ್ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರೆ, ಫ್ರೆಡ್ ಕ್ಲಾಸೀನ್ 3, ರಿಪ್ಪಾನ್ 1, ಸೀಲಾರ್ 1 ವಿಕೆಟ್ ಪಡೆದರು.
ಅಲ್ಪಮೊತ್ತಕ್ಕೆ ಔಟಾದ ನೆದರ್ಲ್ಯಾಂಡ್ : ನ್ಯೂಜಿಲ್ಯಾಂಡ್ ನೀಡಿದ ಸವಾಲಿನ ಮೊತ್ತ ಬೆನ್ನತ್ತಿದ ನೆದರ್ಲ್ಯಾಂಡ್ ತಂಡ ಅನುಭವದ ಕೊರತೆಯಿಂದ ಕೇವಲ 34.1 ಓವರ್ಗಳಲ್ಲಿ 146 ರನ್ಗೆ ಆಲೌಟ್ ಆಯಿತು. ವಿಕ್ರಮಜಿತ್ ಸಿಂಗ್ (31) ಮತ್ತು ಬಾಸ್ ಡಿ ಲೀಡ್ (37) ರನ್ ಗಳಿಸಿದರೂ ಇನ್ನುಳಿದ ಬ್ಯಾಟ್ಸಮನ್ಗಳು ಒಂದಂಕಿ ಮೊತ್ತ ದಾಟದ ಕಾರಣ ತಂಡ ಸರ್ವಪತನ ಕಂಡಿತು.
ಓದಿ: ಜೋಸ್ ಬಟ್ಲರ್ ಶತಕ.. ಮುಂಬೈ ಇಂಡಿಯನ್ಸ್ಗೆ 194 ರನ್ಗಳ ಗುರಿ ನೀಡಿದ ರಾಜಸ್ತಾನ ರಾಯಲ್ಸ್