ETV Bharat / sports

ಮೂರನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ: ನ್ಯೂಜಿಲೆಂಡ್‌ ಗೆಲುವಿಗೆ ಬೇಕು 116 ರನ್‌

author img

By

Published : Nov 30, 2022, 1:16 PM IST

Updated : Nov 30, 2022, 1:35 PM IST

ಶ್ರೇಯಸ್ ಅಯ್ಯರ್ ಮತ್ತು ವಾಷಿಂಗ್ಟನ್ ಸುಂದರ್ ಅವರ ನೆರವಿನಿಂದ ಇಂದಿನ ಮೂರನೆಯ ಪಂದ್ಯದಲ್ಲಿ ಭಾರತವು ನ್ಯೂಜಿಲೆಂಡ್‌ ವಿರುದ್ಧ 219 ರನ್ ಗಳಿಸಿದೆ. ಎದುರಾಳಿ ತಂಡ ಸುಲಭ ಗೆಲುವಿಗಾಗಿ ಹೋರಾಟ ನಡೆಸಿದ್ದು, ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ.

New Zealand vs India 3rd ODI
New Zealand vs India 3rd ODI

ಕ್ರೈಸ್ಟ್‌ಚರ್ಚ್ (ನ್ಯೂಜಿಲೆಂಡ್): ಇಲ್ಲಿನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಇಳಿದ ಭಾರತ 219 ರನ್​ಗಳಿಗೆ ತನ್ನ ಎಲ್ಲ ವಿಕೆಟ್​ ಕಳೆದುಕೊಂಡಿದೆ. ಈ ಅಲ್ಪ ಮೊತ್ತ ಬೆನ್ನುತ್ತಿರುವ ಎರುರಾಳಿ ನ್ಯೂಜಿಲೆಂಡ್ ತಂಡ ಸದ್ಯ 104 ರನ್​ ಗಳಿಸಿ 1 ವಿಕೆಟ್​ ಕಳೆದುಕೊಂಡಿದೆ.

ಮೊದಲು ಕ್ರೀಸ್​ಗೆ ಇಳಿದ ನಾಯಕ ಶಿಖರ್​ ಧವನ್ (28)​ ಮತ್ತು​ ಶುಭ್​ಮನ್​ ಗಿಲ್ (13)​ ಅಲ್ಪ ಮೊತ್ತದ ರನ್ ಗಳಿಸುವ ಮೂಲಕ​ ತಂಡಕ್ಕೆ ಭದ್ರ ಬುನಾದಿ ಹಾಕುವಲ್ಲಿ ಎಡವಿದರು. ಬಳಿಕ ಬಂದ ಶ್ರೇಯಸ್ ಅಯ್ಯರ್ ತಮ್ಮ ಆಟಕ್ಕೆ ವೇಗ ನೀಡಿದರು. ಅರ್ಧ ಶತಕಕ್ಕೆ ಕೇವಲ 1 ರನ್​ (49) ಬಾಕಿ ಇರುವಾಗಲೇ ವಿಕೆಟ್​ ಒಪ್ಪಿಸಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.

  • #INDvNZ 3rd ODI | Batting first, India all-out for 219 against New Zealand, at Hagley Oval, Christchurch.

    (Washington Sundar 51, Shreyas Iyer 49, Daryl Mitchell 3-25, Adam Milne 3-57)

    (Pic: BCCI) pic.twitter.com/miC02meQup

    — ANI (@ANI) November 30, 2022 " class="align-text-top noRightClick twitterSection" data=" ">

ಆ ಬಳಿಕ ಬಂದ ರಿಷಭ್ ಪಂತ್ (10), ಸೂರ್ಯಕುಮಾರ್ ಯಾದವ್ (6), ದೀಪಕ್​ ಹೂಡಾ (12), ದೀಪಕ್​ ಚಹಾರ್ (12), ಯುಜುವೇಂದ್ರ ಚಾಹಲ್ (8) ತಮ್ಮ ಅಲ್ಪ ಮೊತ್ತದ ಕಾಣಿಕೆ ನೀಡಿದರು. ಇವರ ನಿರಾಶಾದಾಯಕ ಬ್ಯಾಟಿಂಗ್​ನಿಂದ ತಂಡ 200 ರನ್​ ಗಡಿ ದಾಟುವುದು ಕೂಡ ಅನುಮಾನ ಇತ್ತು. ವಾಷಿಂಗ್ಟನ್ ಸುಂದರ್ ಅವರ ಅಮೋಘ (51) ಅರ್ಧ ಶತಕದ ನೆರವಿನಿಂದ 219 ರನ್​ಗಳ ಗಡಿಗೆ ತಲುಪಿತು. ನ್ಯೂಜಿಲೆಂಡ್ ಪರ ಆಡಮ್ ಮಿಲ್ನೆ ಮತ್ತು ಡ್ಯಾರಿಲ್ ಮಿಚೆಲ್ ಕ್ರಮವಾಗಿ 3 ವಿಕೆಟ್ ಕಬಳಿಸಿದರೆ, ಟಿಮ್ ಸೌಥಿ ಎರಡು ವಿಕೆಟ್ ಪಡೆದರು.

ಸದ್ಯ ಮಳೆಯಿಂದ ಪಂದ್ಯ ನಿಂತಿದ್ದು, ನ್ಯೂಜಿಲೆಂಡ್‌ ಗೆಲುವಿಗೆ 116 ರನ್‌ಗಳ ಅಗತ್ಯವಿದೆ.

ಇದನ್ನೂ ಓದಿ: ಹಾರ್ದಿಕ್‌, ಪೃಥ್ವಿ ಶಾ ಭಾರತ ಕ್ರಿಕೆಟ್‌ ತಂಡದ ಭವಿಷ್ಯದ ನಾಯಕರು: ಗಂಭೀರ್

Last Updated : Nov 30, 2022, 1:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.