ETV Bharat / sports

IND vs NZ 1st ODI: ಲ್ಯಾಥಮ್, ವಿಲಿಯಮ್ಸನ್​ 200 ರನ್​ಗಳ​ ಜೊತೆಯಾಟ, ಕಿವೀಸ್​ಗೆ ಗೆಲುವು - ಮೊದಲ ಏಕದಿನ ಪಂದ್ಯ

ಭಾರತ ನೀಡಿದ್ದ 307 ರನ್​ಗಳ ಗುರಿಯನ್ನು ಮೂರು ವಿಕೆಟ್​ ನಷ್ಟದಲ್ಲಿ ಕಿವೀಸ್​​ ಗುರಿ ಮುಟ್ಟಿ, ಮೊದಲ ಪಂದ್ಯ ಗೆದ್ದುಕೊಂಡಿದೆ.

Etv Bharat
ಕಿವಿಸ್​ಗೆ ಗೆಲುವು
author img

By

Published : Nov 25, 2022, 3:04 PM IST

Updated : Nov 25, 2022, 4:37 PM IST

ಆಕ್ಲೆಂಡ್​: ಮೊದಲ ಏಕದಿನ ಪಂದ್ಯದಲ್ಲಿ ಭಾರತ ಕೊಟ್ಟಿದ್ದ ಬೃಹತ್​ ಮೊತ್ತವನ್ನು 7 ವಿಕೆಟ್​ಗಳಿಂದ ಕಿವೀಸ್​ ಗೆದ್ದು ಕೊಂಡಿದೆ. ಟಾಮ್ ಲ್ಯಾಥಮ್ ಮತ್ತು ನಾಯಕ ಕೇನ್ ವಿಲಿಯಮ್ಸನ್​ ಅವರ 200 ರನ್​ಗಳ ಜೊತೆಯಾಟಕ್ಕೆ ಗೆಲುವು ದೊರೆತಿದೆ. ಕಿವೀಸ್​ ಆಟದ ಮುಂದೆ ಭಾರತೀಯ ಬೌಲಿಂಗ್​​ ಮಂಕಾಗಿದೆ.

ಮೊದಲು ಬ್ಯಾಟ್​ ಮಾಡಿದ ಭಾರತ ಅಯ್ಯರ್​, ಧವನ್​ ಮತ್ತು ಗಿಲ್​ ಅವರ ಅರ್ಧ ಶತಕದ ನೆರವಿನಿಂದ 306 ರನ್​ಗಳ ಬೃಹತ್​ ಮೊತ್ತವನ್ನು ನೀಡಿತ್ತು. ಅದನ್ನು ಬೆನ್ನು ಹತ್ತಿದ ನ್ಯೂಜಿಲ್ಯಾಂಡ್​​ ​ ತಂಡ ಕೇವಲ ಮೂರು ವಿಕೆಟ್​ ಕಳೆದು ಕೊಂಡು ಗುರಿ ಸಾಧಿಸಿದೆ.

ಆರಂಭಿಕ ಆಘಾತ: 307 ಗರಿ ಬೆನ್ನು ಹತ್ತಿದ್ದ ನ್ಯೂಜಿಲ್ಯಾಂಡ್​ಗೆ ಶಾರ್ದೂಲ್ ಠಾಕೂರ್ ಮೊದಲ ಶಾಕ್​ ನೀಡಿದರು. 7.3 ನೇ ಚೆಂಡು ಎದುರಿಸುತ್ತಿದ್ದ ಫಿನ್ ಅಲೆನ್(22) ಶಾರ್ದೂಲ್ ಎಸೆದ ಟೆಸ್ಟ್​ ಲೈನ್​ ಬೌಲ್​ ಬ್ಯಾಟ್​ಗೆ ಎಡ್ಜ್​ ಆಗಿ ಪಂತ್​ ಕೈ ಸೇರಿತು. ತಂಡದ 35 ಆಗಿದ್ದಾಗ ಅಲೆನ್ ವಿಕೆಟ್​ ನೀಡಿ ಪೆವಿಲಿಯನ್​ಗೆ ಹೆಜ್ಜೆ ಹಾಕಿದರು.

ಮೊದಲ ವಿಕೆಟ್​ ಪತನವಾಗಿ ನ್ಯೂಜಿಲ್ಯಾಂಡ್ ತಂಡಕ್ಕೆ 33 ರನ್​ ಸೇರುತ್ತಿದ್ದಂತೆ ಚೊಚ್ಚಲ ಪಂದ್ಯ ಆಡುತ್ತಿರುವ ಉಮ್ರಾನ್ ಮಲಿಕ್ ಡೆವೊನ್ ಕಾನ್ವೇ(24) ವಿಕೆಟ್​​​ ಪಡೆದರು.

ಮೂರನೇ ವಿಕೆಟ್​ ಆಗಿ ಬಂದಿದ್ದ ನಾಯಕ ವಿಲಿಯಮ್ಸನ್​ ಜತೆ ಡೇರಿಲ್ ಮಿಚೆಲ್ ಸೇರಿಕೊಂಡರು. ಮಿಚೆಲ್(11) ಕ್ರೀಸ್​ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕಾಶ್ಮೀರಿ ಬೌಲರ್​ ಉಮ್ರಾನ್ ಮಿಚೆಲ್ ವಿಕೆಟ್​ ಪಡೆದು ಚೊಚ್ಚಲ ಪಂದ್ಯದ ಎರಡನೇ ವಿಕೆಟ್​ ಪಡೆದರು.

ಬೃಹತ್​ ಮೊತ್ತದ ಜೊತೆಯಾಟ: ಕಿವೀಸ್​ ಮೂರನೇ ವಿಕೆಟ್​​​ ಹೋದ ನಂತರ ನಾಯಕ ವಿಲಿಯಮ್ಸನ್(94) ಜೊತೆ ಐದನೇ ವಿಕೆಟ್​ ಆಗಿ ಬಂದ ಟಾಮ್ ಲ್ಯಾಥಮ್(145) ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಜೊತೆಯಾಟ ನೀಡಿದರು. ನಾಯಕ ಮತ್ತು ವಿಕೆಟ್​ ಕೀಪರ್​ನ 221 ರನ್​ಗಳ ಬೃಹತ್​ ಜೊತೆಯಾಟ ಕಿವೀಸ್​ಗೆ ಗೆಲುವು ತಂದಿತ್ತಿತು.

ಟಾಮ್ ಲ್ಯಾಥಮ್ ಶತಕ: ಕ್ರೀಸ್​ಗೆ ಬಂದ ಕೂಡಲೇ ಬಿರುಸಿನ ಮತ್ತು ತಾಳ್ಮೆಯ ಆಟಕ್ಕೆ ಮುಂದಾದ ಟಾಮ್ ಉತ್ತಮ ಬ್ಯಾಟಿಂಗ್​ ಪ್ರದರ್ಶಸಿದರು. 76 ಎಸೆತದಲ್ಲಿ 14 ಬೌಂಡರಿ ಮತ್ತು 3 ಸಿಕ್ಸರ್​ ನಿಂದ ಶತಕ ಪೂರೈಸಿದರು. ಶತಕದ ನಂತರ ಬ್ಯಾಟಿಂಗ್​ ವೇಗ ಹೆಚ್ಚಿಸಿ 104 ಎಸೆತದಲ್ಲಿ 145 ರನ್​ ಸಿಡಿಸಿ ಅಜೇಯರಾಗಿ ತಂಡಕ್ಕೆ ಗೆಲುವು ತಂದಿತ್ತರು.

ವಿಲಿಯಮ್ಸನ್ ಅರ್ಧಶತಕ: ಬ್ಲಾಕ್​ಕ್ಯಾಪ್ಸ್​ ನಾಯಕ ವಿಲಿಯಮ್ಸನ್ ಕ್ರೀಸ್​ನಲ್ಲಿ ಬಲವಾಗಿ ನಿಂತು ತಾಳ್ಮೆಯಿಂದ ಭಾರತೀಯ ಬೌಲರ್​ಗಳನ್ನು ದಂಡಿಸಿದರು. ಎಂದಿನಂತೆ ವಿಕೆಟ್​ ಕಾಯ್ದು ಕೊಳ್ಳುವ ಕೆಲಸವನ್ನು ವಿಲಿಯಮ್ಸನ್ ಮಾಡಿದರು. 98 ಬಾಲ್​ ಎದುರಿಸಿ 94 ರನ್​ ದಾಖಲಿಸಿದರು. ಇದು ವಿಲಿಯಮ್ಸನ್ ಅವರ 40 ನೇ ಅರ್ಧ ಶತಕವಾಗಿದೆ.

ಚೊಚ್ಚಲ ಪಂದ್ಯದಲ್ಲಿ ಉಮ್ರಾನ್​ಗೆ ವಿಕೆಟ್​: ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಇಂದು ಅರ್ಶ್‌ದೀಪ್, ಉಮ್ರಾನ್ ಪದಾರ್ಪಣೆ ಮಾಡಿದರು. ಉಮ್ರಾನ್ ಪದಾರ್ಪಣೆ ಪಂದ್ಯದಲ್ಲಿ ಎರಡು ವಿಕೆಟ್​ ಪಡೆದು ಮಿಂಚಿದರು. 10 ಓವರ್​ ಬೌಲ್​ ಮಾಡಿದ ಇವರು 66 ರನ್​ ಬಿಟ್ಟುಕೊಟ್ಟು ಡೆವೊನ್ ಕಾನ್ವೇ ಮತ್ತು ಡೇರಿಲ್ ಮಿಚೆಲ್ ಅವರ ವಿಕೆಟ್​ ಪಡೆದರು. 8.1 ಓವರ್​ಗೆ ಮಾಡಿ 68 ರನ್​ ಕೊಟ್ಟು ಅರ್ಶ್‌ದೀಪ್ ಕೊಂಚ ದುಬಾರಿ ಆದರು.

ಟಿಮ್ ಸೌಥಿ ದಾಖಲೆ : ನ್ಯೂಜಿಲ್ಯಾಂಡ್​ ಪರ ಮೊದಲ ಇನ್ನಿಂಗ್ಸ್​ನಲ್ಲಿ ಬೌಲ್​ ಮಾಡಿದ್ದ ಸೌಥಿ ಏಕದಿನ ಮಾದರಿಯಲ್ಲಿ 200 ವಿಕೆಟ್​​​ ಪಡೆದ ಸಾಧನೆ ಮಾಡಿದರು. ಇಂದಿನ ಪಂದ್ಯದಲ್ಲಿ 10 ಓವರ್​ಗೆ 73 ರನ್​ ಕೊಟ್ಟು 3 ವಿಕೆಟ್​ ಪಡೆದಿದ್ದಾರೆ. 200 ವಿಕೆಟ್​​​ ಪಡೆದ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದರು. ಡೇನಿಯಲ್​ ವಿಕ್ಟರ್​ 297, ಮಿಲ್ಸ್​ 240 ಮತ್ತು ಕ್ರಿಸ್​ ಹ್ಯಾರಿಸ್​ 203 ವಿಕೆಟ್​ ಪಡೆದಿದ್ದಾರೆ. ಸೌಥಿ 300 ಟೆಸ್ಟ್​ ಪಂದ್ಯಗಳಲ್ಲಿ 347, 200 ಏಕದಿನದಲ್ಲಿನ 202 ಮತ್ತು 100 ಟಿ-20ಯಲ್ಲಿ 134 ವಿಕೆಟ್​ ಪಡೆದಿದ್ದಾರೆ.

ಇದನ್ನೂ ಓದಿ: ಅಯ್ಯರ್​, ಧವನ್​, ಗಿಲ್​ ಅರ್ಧ ಶತಕದಾಟ: ನ್ಯೂಜಿಲೆಂಡ್‌ಗೆ ಬೃಹತ್​ ಟಾರ್ಗೆಟ್​

Last Updated : Nov 25, 2022, 4:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.