ETV Bharat / sports

ಶಿಮ್ಲಾದ ರತ್ನಾಡಿಯಲ್ಲಿ ಕುಟುಂಬದೊಂದಿಗೆ ಕೂಲ್​ ಕ್ಯಾಪ್ಟನ್​ - ರತ್ನಾಡಿ

ಟೀಮ್​ ಇಂಡಿಯಾ ಮಾಜಿ ನಾಯಕ, ಕ್ಯಾಪ್ಟನ್​ ಕೂಲ್ ನಾಯಕ ಮಹೇಂದ್ರ ಸಿಂಗ್ ಧೋನಿ ಶಿಮ್ಲಾದಲ್ಲಿ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಖತ್​ ಎಂಜಾಯ್​ ಮಾಡುತ್ತಿದ್ದಾರೆ.

ms-dhoni-reached-ratnadi-panchayat-of-jubbal-kotkhai
ಶಿಮ್ಲಾದ ರತ್ನಾಡಿಯಲ್ಲಿ ಕುಟಂಬದೊಂದಿಗೆ ಕೂಲ್​ ಕ್ಯಾಪ್ಟನ್​
author img

By

Published : Jun 21, 2021, 9:14 PM IST

ಶಿಮ್ಲಾ: ಮೂರು ದಿನ ಶಿಮ್ಲಾ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜುಬ್ಬಲ್‌ನ ರತ್ನಡಿ ಪಂಚಾಯಿತಿ ತಲುಪಿದ್ದಾರೆ. ಧೋನಿ ರತ್ನಾಡಿಯಲ್ಲಿನ ಮೀನಾ ಬಾಗ್ ಹೋಂಸ್ಟೇನಲ್ಲಿ ತಂಗಲಿದ್ದಾರೆ.

ವಿಶೇಷ ಎಂದರೆ, ಧೋನಿ ಶಿಮ್ಲಾದ ದೊಡ್ಡ ಪಂಚತಾರಾ ಹೋಟೆಲ್‌ನಲ್ಲಿ ಉಳಿದುಕೊಳ್ಳುವ ಬದಲು ಹೋಂಸ್ಟೇನಲ್ಲಿ ಸಮಯ ಕಳೆಯುತ್ತಿದ್ದಾರೆ. ಇದಕ್ಕೂ ಮೊದಲು ಧೋನಿ ಮೆಹ್ಲಿಯ ಹೋಂ ಸ್ಟೇ ಮತ್ತು ನಂತರ ಶಿಮ್ಲಾ ನಗರದ ಕನ್ಲಾಗ್​ನಲ್ಲಿ ತಂಗಿದ್ದರು. ಸಾಕಷ್ಟು ಅಭಿಮಾನಿಗಳು ಮಾಹಿಯನ್ನು ಕಣ್ಣು ತುಂಬಿಕೊಳ್ಳಲು ಮುಗಿ ಬಿದ್ದಿದ್ದರು.

ಧೋನಿ ಕುಟುಂಬದೊಂದಿಗೆ ಹಿಮಾಚಲದಲ್ಲಿರುವ ಪ್ರಸಿದ್ಧ ಸಿಡ್ಡು ಸೇರಿದಂತೆ ಇತರ ಖಾದ್ಯಗಳನ್ನು ಸವಿದು ಆನಂದಿಸುತ್ತಿದ್ದಾರೆ. ಧೋನಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ಶಿಮ್ಲಾದ ವಾತಾವರಣ ಸಖತ್​ ಎಂಜಾಯ್​ ಮಾಡುತ್ತಿದ್ದಾರೆ.

ಓದಿ:ಸಿಎಂ ಹಾಗೂ ಅವರ ಮಗ ದುಡ್ಡು ಹೊಡೆಯುವುದನ್ನ ಬಿಟ್ಟು ಬೇರೇನೂ ಮಾಡುತ್ತಿಲ್ಲ : ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.