ನವದೆಹಲಿ: 'ಕೈಲಾಗದವನು ಮೈ ಪರಚಿಕೊಂಡ' ಎಂಬ ಗಾದೆ ಮಾತು ಪಾಕಿಸ್ತಾನದ ಮಾಜಿ ಆಟಗಾರ ಹಸನ್ ರಝಾಗೆ ಸೂಕ್ತವಾಗಿ ಹೊಂದುತ್ತದೆ. ಏಕೆಂದರೆ ವಿಶ್ವಕಪ್ನಲ್ಲಿ ಜೈತ್ರಯಾತ್ರೆ ಮಾಡುತ್ತಿರುವ ಟೀಮ್ ಇಂಡಿಯಾದ ಪ್ರದರ್ಶನವನ್ನು ಕಂಡ ರಾಝಾ ಅವರು ಇಂತಹ ಹೇಳಿಕೆಗಳನ್ನೇ ನೀಡುತ್ತಿದ್ದಾರೆ. ಪಾಕಿಸ್ತಾನಿ ತಂಡ ಪ್ರದರ್ಶನ ನೀಡುವಲ್ಲಿ ಇರುವ ಸಮಸ್ಯೆಯ ಬಗ್ಗೆ ಚರ್ಚಿಸುವುದು ಬಿಟ್ಟು ಅಸಂಬದ್ಧ ಪ್ರಶ್ನೆಗಳನ್ನು ಮಾಡಿ ತಮ್ಮ ಮತ್ತು ಪಾಕಿಸ್ತಾನದ ಮರ್ಯಾದೆಯನ್ನು ಇನ್ನೂ ಕಳೆದುಕೊಳ್ಳುತ್ತಿದ್ದಾರೆ.
ಹಸನ್ ರಾಝಾ ಅವರ ಕೆಳ ಮಟ್ಟದ ಚಿಂತನೆಯ ಹೇಳಿಕೆಗೆವ ಟೀಮ್ ಇಂಡಿಯಾದ ಆಟಗಾರ ಮಹಮ್ಮದ್ ಶಮಿ ಟಾಂಗ್ ನೀಡಿದ್ದಾರೆ. ಅಲ್ಲದೇ ತಮ್ಮದೇ ದೇಶದ ಆಟಗಾರನ ಮಾತಿಗೆ ಸ್ವಲ್ಪ ಕಿವಿಗೊಡಿ ಎಂದು ಉಪದೇಶವನ್ನು ಮಾಡಿದ್ದಾರೆ. ನಿಮ್ಮ ತಂಡದ ಆಟಗಾರರ ಮೇಲೆ ನೀವು ನಂಬಿಕೆಯನ್ನು ಇಡದಿದ್ದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ನಡೆಯುತ್ತಿರುವ ವಿಶ್ವಕಪ್ನಲ್ಲಿ ಭಾರತ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಬ್ಯಾಟರ್ಗಳು ಎದುರಾಳಿಗಳ ಬೌಲಿಂಗ್ ಅನ್ನು ಯಶಸ್ವಿಯಾಗಿ ಎದುರಿಸಿದರೆ, ಎದುರಾಳಿಗಳ ಮೇಲೆ ಕಠಿಣ ಬೌಲಿಂಗ್ ದಾಳಿಯನ್ನು ಮಾಡಿ ಅಲ್ಪಮೊತ್ತಕ್ಕೆ ಕಟ್ಟಿಹಾಕುತ್ತಿದ್ದಾರೆ. ಟೀಮ್ ಇಂಡಿಯಾದ ಬೌಲಿಂಗ್ ವಿರುದ್ಧ ವಿಶ್ವಕಪ್ನಲ್ಲಿ ಇದುವರೆಗೆ ಯಾವುದೇ ತಂಡ 300ರ ಗಡಿ ತಲುಪಿಲ್ಲ.
-
Legendary pacer @wasimakramlive comments on #HasanRaza's statement on Indian bowlers, being given different balls to bowl.#ASportsHD #ARYZAP #CWC23 #ThePavilion #ShoaibMalik #MoinKhan #FakhreAlam #MisbahulHaq #AskThePavilion pic.twitter.com/uJ9YU9V745
— ASports (@asportstvpk) November 3, 2023 " class="align-text-top noRightClick twitterSection" data="
">Legendary pacer @wasimakramlive comments on #HasanRaza's statement on Indian bowlers, being given different balls to bowl.#ASportsHD #ARYZAP #CWC23 #ThePavilion #ShoaibMalik #MoinKhan #FakhreAlam #MisbahulHaq #AskThePavilion pic.twitter.com/uJ9YU9V745
— ASports (@asportstvpk) November 3, 2023Legendary pacer @wasimakramlive comments on #HasanRaza's statement on Indian bowlers, being given different balls to bowl.#ASportsHD #ARYZAP #CWC23 #ThePavilion #ShoaibMalik #MoinKhan #FakhreAlam #MisbahulHaq #AskThePavilion pic.twitter.com/uJ9YU9V745
— ASports (@asportstvpk) November 3, 2023
ರಾಝಾ ಟೀಕೆ: ಈ ರೀತಿ ಬೌಲಿಂಗ್ ಕಂಡ ಪಾಕಿಸ್ತಾನದ ಆಟಗಾರ ಹಸನ್ ರಾಝಾ, ಭಾರತ ತಂಡಕ್ಕೆ ವಿಶೇಷ ಬಾಲ್ ನೀಡಲಾಗುತ್ತದೆ. ಅದಕ್ಕಾಗಿ ಅವರ ಬೌಲರ್ಗಳು ಅಷ್ಟು ಪರಿಣಾಮಕಾರಿ ಬೌಲಿಂಗ್ ಮಾಡುತ್ತಾರೆ. ಅವರ ಬ್ಯಾಟಿಂಗ್ ವೇಳೆ ತಿರುಗದ, ಸ್ವಿಂಗ್ ಆಗದ ಬೌಲ್ಗಳು, ಎದುರಾಳಿ ತಂಡ ಬ್ಯಾಟಿಂಗ್ ಮಾಡುವಾಗ ಮಾತ್ರ ಹೇಗೆ ಅಷ್ಟೊಂದು ಸ್ಪಿನ್, ಸ್ವಿಂಗ್ ಆಗುತ್ತದೆ. ಈ ಬಗ್ಗೆ ತನಿಖೆ ನಡೆಸ ಬೇಕು ಎಂದು ಹೇಳಿದ್ದರು.
ವಾಸಿಂ ಪ್ರತಿಕ್ರಿಯೆ: ಈ ಹೇಳಿಕೆಯನ್ನು ಮಾದ್ಯಮ ಒಂದರಲ್ಲಿ ಪಾಕಿಸ್ತಾನ ಮಾಜಿ ಆಟಗಾರ ವಾಸಿಂ ಅಕ್ರಮ್ ಅಲ್ಲ ಗಳೆದಿದ್ದರು. ಭಾರತೀಯ ತಂಡ ಉತ್ತಮವಾಗಿ ಬೌಲಿಂಗ್ ಮಾಡುತ್ತಿದೆ. ಅದರಲ್ಲಿ ಅನುಮಾನ ಇಲ್ಲ. ಆದರೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ. ನಾವು ಅನುಮಾನಿಸುವುದು ಸರಿ ಅಲ್ಲ. ಇಡೀ ಪ್ರಪಂಚ ಇದನ್ನು ನೋಡುತ್ತಿದೆ ಎಂದಿದ್ದರು.
-
Hasan Raza Raises Questions on Indian Victory!
— Hasnain Liaquat (@iHasnainLiaquat) November 5, 2023 " class="align-text-top noRightClick twitterSection" data="
1 :- DRS was manipulated by BCCI with help of Broadcasters
2:- DRS was also Manipulated in 2011 when Sachin Tendulkar was playing Against Saeed Ajmal.
3:- Why Indian Team is Playing Outclass in every worldcup Event Happened in India.… pic.twitter.com/ieIJGy0cqH
">Hasan Raza Raises Questions on Indian Victory!
— Hasnain Liaquat (@iHasnainLiaquat) November 5, 2023
1 :- DRS was manipulated by BCCI with help of Broadcasters
2:- DRS was also Manipulated in 2011 when Sachin Tendulkar was playing Against Saeed Ajmal.
3:- Why Indian Team is Playing Outclass in every worldcup Event Happened in India.… pic.twitter.com/ieIJGy0cqHHasan Raza Raises Questions on Indian Victory!
— Hasnain Liaquat (@iHasnainLiaquat) November 5, 2023
1 :- DRS was manipulated by BCCI with help of Broadcasters
2:- DRS was also Manipulated in 2011 when Sachin Tendulkar was playing Against Saeed Ajmal.
3:- Why Indian Team is Playing Outclass in every worldcup Event Happened in India.… pic.twitter.com/ieIJGy0cqH
ಶಮಿ ಪ್ರತ್ಯುತ್ತರ: ರಾಝಾ ಅವರ ಈ ಹೇಳಿಕೆಗೆ ಮೊಹಮ್ಮದ್ ಶಮಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಾಕಿ ಉತ್ತರ ನೀಡಿದ್ದಾರೆ. "ಶರ್ಮ್ ಕರೋ ಯಾರ್ (ನಾಚಿಕೆಗೇಡು), ನೀವು ಆಟದ ಮೇಲೆ ಕೇಂದ್ರೀಕರಿಸಬೇಕು ಮತ್ತು ಅನುಪಯುಕ್ತ ಅಸಂಬದ್ಧತೆಯ ಮೇಲೆ ಅಲ್ಲ, ನೀವು ಕನಿಷ್ಠ ಇತರರ ಯಶಸ್ಸನ್ನು ಆನಂದಿಸಬಹುದು. ಇದು ಐಸಿಸಿ ವಿಶ್ವಕಪ್, ಸ್ಥಳೀಯ ಕ್ರಿಕೆಟ್ ಪಂದ್ಯಾವಳಿ ಅಲ್ಲ. ವಾಸಿಂ ಅಕ್ರಮ್ ವಿವರಿಸಲು ಪ್ರಯತ್ನಿಸಿದ್ದಾರೆ, ಕನಿಷ್ಠ ನಿಮ್ಮ ಆಟಗಾರನನ್ನು ನಂಬಲು ಪ್ರಯತ್ನಿಸಿ." ಎಂದು ಬರೆದುಕೊಂಡಿದ್ದಾರೆ.
ಭಾರತದ ನಡೆಯುತ್ತಿರುವ ವಿಶ್ವಕಪ್ನ ಲೀಗ್ ಪಂದ್ಯದಲ್ಲಿ 8 ಪಂದ್ಯವನ್ನು ಆಡಿದ್ದು ಎಲ್ಲವನ್ನೂ ಗೆದ್ದುಕೊಂಡಿದೆ. ಸೋಲಿಲ್ಲದ ಸರದಾರನಂತೆ ಮುನ್ನುಗ್ಗುತ್ತಿರುವ ಭಾರತ ಯಶಸ್ಸನ್ನು ಕಾಣಲಾಗದೇ ಹಸನ್ ರಾಝಾ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪಾಕಿಸ್ತಾನ ತಂಡಕ್ಕೆ ಸೆಮೀಸ್ ಪ್ರವೇಶ 50-50 ಆಗಿದೆ. ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯವನ್ನು ಗೆದ್ದರೂ ಸೆಮೀಸ್ ಪ್ರವೇಶ ನ್ಯೂಜಿಲೆಂಡ್ ಮತ್ತು ಅಫ್ಘಾನ್ ಸೋಲಿನ ಮೇಲೆ ನಿಂತಿದೆ.
ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್: ಸ್ಟೋಕ್ಸ್ ಶತಕ, ಮಲನ್, ವೋಕ್ಸ್ ಅರ್ಧಶತ; ಡಚ್ಚರಿಗೆ 340 ರನ್ಗಳ ಗುರಿ