ETV Bharat / sports

ಟಿ20 ವಿಶ್ವಕಪ್: ಫೈನಲ್​ನಲ್ಲಿ ನಮಗೆ ಭಾರತವೇ ಎದುರಾಳಿಯಾಗಿ ಸಿಗಬೇಕು; ಪಾಕ್​ ಮೆಂಟರ್​ ಹೇಡನ್​​ - ಟಿ20 ವಿಶ್ವಕಪ್​ 2022

ಪಾಕ್​ ತಂಡದ ಮೆಂಟರ್ ಮ್ಯಾಥ್ಯೂ ಹೇಡನ್ ಐಸಿಸಿ ಟಿ20 ವಿಶ್ವಕಪ್​ ಕ್ರಿಕೆಟ್​ ಟೂರ್ನಿಯ ಫೈನಲ್ ಪಂದ್ಯದ ಬಗ್ಗೆ ಮಾತನಾಡಿದ್ದಾರೆ.

Mentor Matthew Hayden Says Pakistan Team Wants India in t20 world cup Final match
ಟಿ20 ವಿಶ್ವಕಪ್
author img

By

Published : Nov 10, 2022, 9:38 AM IST

ನ್ಯೂಜಿಲೆಂಡ್​ ವಿರುದ್ಧ ಬುಧವಾರ ನಡೆದ ಮೊದಲ ಸೆಮಿಫೈನಲ್​ ಪಂದ್ಯ ಜಯಿಸಿದ ಪಾಕಿಸ್ತಾನ ಐಸಿಸಿ ಟಿ20 ವಿಶ್ವಕಪ್​ ಕ್ರಿಕೆಟ್​ ಟೂರ್ನಿಯ ಫೈನಲ್​ ಪ್ರವೇಶಿಸಿದೆ. ಅಂತಿಮ ಹಂತಕ್ಕೆ ತಲುಪಿದ ಬೆನ್ನಲ್ಲೇ ಪಾಕ್​ ತಂಡದ ಮೆಂಟರ್ ಮ್ಯಾಥ್ಯೂ ಹೇಡನ್ ಟೀಂ ಇಂಡಿಯಾ ಬಗ್ಗೆ ಮಾತನಾಡಿದ್ದಾರೆ. ತಾವು ಫೈನಲ್​ ಪಂದ್ಯದಲ್ಲಿ ಭಾರತವನ್ನು ಎದುರಿಸಲು ಬಯಸುವುದಾಗಿ ಹೇಡನ್​ ಹೇಳಿದ್ದಾರೆ.

ಪಂದ್ಯದ ಬಳಿಕ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಮೆಂಟರ್​ ಹೇಡನ್​, 'ಫೈನಲ್​ ಪಂದ್ಯದಲ್ಲಿ ಭಾರತವೇ ನಮಗೆ ಎದುರಾಳಿಯಾಗಬೇಕು. ಯಾಕೆಂದರೆ ಅವರ ವಿರುದ್ಧದ ಪಂದ್ಯವು ಬಹಳ ರೋಚಕತೆಯಿಂದ ಕೂಡಿರಲಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ. 'ಇಂದಿನ ಪ್ರದರ್ಶನವು ಬಹಳ ವಿಶೇಷವಾಗಿತ್ತು. ವೇಗದ ಬೌಲರ್​ಗಳು ಉತ್ತಮ ಪ್ರದರ್ಶನ ತೋರಿದರು. ನಾವು ಇನ್ನೂ ಸಹ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅತ್ಯುತ್ತಮ ಪ್ರದರ್ಶನ ತೋರಿಲ್ಲ ಎಂದು ನಾನು ಭಾವಿಸುತ್ತೇನೆ. ಇದು ಬಹುಶಃ ನಮ್ಮನ್ನು ಅಂತಿಮ ಪಂದ್ಯದಲ್ಲಿ ಎದುರಿಸುವವರಿಗೆ ಭಯ ಮೂಡಿಸಲಿದೆ' ಎಂದಿದ್ದಾರೆ.

'ಮೆಲ್ಬೋರ್ನ್‌ ಪಿಚ್​​ ಉತ್ತಮ ಬ್ಯಾಟಿಂಗ್ ಟ್ರ್ಯಾಕ್ ಆಗಿರಲಿದೆ. ಅಲ್ಲಿ ಆಕಾಶವೇ ಮಿತಿಯಾಗಿದೆ. ನೀವು ಆಟಗಾರನ ನೈಪುಣ್ಯತೆಯನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ. ಬಾಬರ್ ಹಾಗೂ ರಿಜ್ವಾನ್ ಹಲವಾರು ವರ್ಷಗಳಿಂದ ತಂಡಕ್ಕಾಗಿ ಉತ್ತಮ ಆಟವಾಡಿದ್ದಾರೆ. ಮೊಹಮ್ಮದ್ ಹ್ಯಾರಿಸ್ ನೆಟ್​ ಅಭ್ಯಾಸದ ವೇಳೆ ಪ್ರತಿ ಬೌಲರ್​ಗಳಿಗೂ ಭರ್ಜರಿ ಹೊಡೆತ ಬಾರಿಸಿದ್ದಾರೆ' ಎಂದು ತಂಡದ ಆಟಗಾರರ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನ್ಯೂಜಿಲೆಂಡ್​ ಮಣಿಸಿ ಫೈನಲ್​ ಪ್ರವೇಶಿಸಿದ ಪಾಕಿಸ್ತಾನ ತಂಡವು ಮೂರನೇ ಬಾರಿಗೆ ಈ ಸಾಧನೆ ಮಾಡಿದಂತಾಗಿದೆ. ಪಾಕ್​ ಹೊರತುಪಡಿಸಿ ಶ್ರೀಲಂಕಾ ಮಾತ್ರ ಟಿ20 ವಿಶ್ವಕಪ್​ ಟೂರ್ನಿಯಲ್ಲಿ 3 ಸಲ ಪ್ರಶಸ್ತಿ ಸುತ್ತಿಗೆ ತಲುಪಿತ್ತು.

ಇದನ್ನೂ ಓದಿ: ಫೈನಲ್​​​​​ನಲ್ಲಿ ಭಾರತ ಪಾಕ್ ಸೆಣಸುವುದನ್ನು ನಾವು ನೋಡಲು ಬಯಸುವುದಿಲ್ಲ: ಬಟ್ಲರ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.