ಭಾರತದಲ್ಲಿ ನಡೆದ 2023ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಬಳಿಕ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದೆ. ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ಡಿಸೆಂಬರ್ 14 ರಿಂದ 2024ರ ಜನವರಿ 7ರ ವರೆಗೆ ಮೂರು ಟೆಸ್ಟ್ ಪಂದ್ಯಗಳನ್ನು ಒಳಗೊಂಡಂತೆ ಬೆನೌಡ್-ಖಾದಿರ್ ಸರಣಿ ಆಡಲಿದೆ. ಈ ಸರಣಿಗೂ ಮುನ್ನ ಆಸೀಸ್ ಎಡಗೈ ಆರಂಭಿಕ ಉಸ್ಮಾನ್ ಖವಾಜಾ ಪಾಕಿಸ್ತಾನ ತಂಡದ ಬ್ಯಾಟರ್ ಬಾಬರ್ ಅಜಮ್ ಅವರನ್ನು ಹೊಗಳಿದ್ದಾರೆ.
ಸ್ಟೀವನ್ ಸ್ಮಿತ್ ಜೊತೆಗೆ ಬಾಬರ್ ಹೋಲಿಸುವುದು, ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರೊಂದಿಗೆ ಸ್ಮಿತ್ ಹೋಲಿಸಿದಂತೆ ಎಂದು ಉಸ್ಮಾನ್ ಖವಾಜಾ ಹೇಳಿದ್ದಾರೆ. ಬಾಬರ್ ಅಜಮ್ ಎಲ್ಲಾ ಮೂರು ಮಾದರಿಗಳಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ನಮ್ಮ ಯುಗದ ಟೆಸ್ಟ್ ಕ್ರಿಕೆಟ್ನಲ್ಲಿ ಸ್ಮಿತ್ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿದ್ದಾರೆ. ಹೀಗಾಗಿ ಬೆನೌಡ್-ಖಾದಿರ್ ಸರಣಿಯಲ್ಲಿ ಈ ಇಬ್ಬರು ಆಟಗಾರರ ಆಟವನ್ನು ನೋಡುವುದು ನಿಜಕ್ಕೂ ರೋಮಾಂಚನಕಾರಿಯಾಗಿದೆ. ಬಾಬರ್ ಬಗ್ಗೆ ಹೇಳಬೇಕಾದ ಒಂದು ವಿಷಯವೆಂದರೆ, ಕೇವಲ ಪಾಕ್ನಲ್ಲಿ ರನ್ ಗಳಿಸುವುದು ಮಾತ್ರವಲ್ಲದೆ, ವಿದೇಶದಲ್ಲಿಯೂ ರನ್ ಗಳಿಸುತ್ತಾರೆ. ಈ ಹಿಂದೆಯೂ ಇಲ್ಲಿ ಶತಕ ಬಾರಿಸಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ನಲ್ಲಿ ಪಾಕ್ ತನ್ನ ಹಳೆ ಖಾದರ್ ಅನ್ನು ಕಳೆದುಕೊಂಡಿದ್ದು, ದಾಖಲೆಗಳನ್ನು ಬರೆಯುವುದರಲ್ಲಿ ಪ್ರಭಾವಶಾಲಿಯಾಗಿಲ್ಲ. 1995ರಲ್ಲಿ ಆತಿಥೇಯರನ್ನು ಸಿಡ್ನಿಯಲ್ಲಿ 74 ರನ್‌ಗಳಿಂದ ಪಾಕ್ ಸೋಲಿಸಿತ್ತು. ಬಳಿಕ ಕಾಂಗರೂ ನೆಲದಲ್ಲಿ ಯಾವುದೇ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ನೂತನವಾಗಿ ಪಾಕ್ ತಂಡದ ಟೆಸ್ಟ್ ನಾಯಕತ್ವ ವಹಿಸಿಕೊಂಡಿರುವ ಶಾನ್ ಮಸೂದ್ ಅವರು ಸರಣಿ ಗೆದ್ದು ದಾಖಲೆ ನಿರ್ಮಿಸಲು ಎದುರು ನೋಡುತ್ತಿದ್ದಾರೆ.
ಪ್ರಸ್ತುತ ನಡೆದ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ತೋರಿದ ಪಾಕ್ ಟೂರ್ನಿಯಿಂದ ಹೊರ ನಡೆದ ಮೇಲೆ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಇದರೊಂದಿಗೆ ತಂಡದಲ್ಲಿ ಆನೇಕ ಬದಲಾವಣೆಗಳನ್ನು ಮಾಡಲಾಗಿದೆ. ಅದರಲ್ಲಿ ಮುಖ್ಯವಾಗಿ ಎಲ್ಲಾ ಮಾದರಿ ಕ್ರಿಕೆಟ್ನಿಂದ ಬಾಬರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿದೆ.
ಬೆನೌಡ್-ಖಾದಿರ್ ಟೆಸ್ಟ್ ಸರಣಿ : ಬೆನೌಡ್-ಖಾದಿರ್ ಟ್ರೋಫಿಯನ್ನು ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡಗಳ ನಡುವೆ ಆಡಿಸಲಾಗುವ ಟೆಸ್ಟ್ ಸರಣಿಯಾಗಿದೆ. ಇದನ್ನು ಕಳೆದ ವರ್ಷ ಪಾಕಿಸ್ತಾನ ಮಾರ್ಚ್ 2022ರಲ್ಲಿ ಆಸೀಸ್ ಪ್ರವಾಸ ಕೈಗೊಂಡಿದ ಸಂದರ್ಭದಲ್ಲಿ ಪ್ರಾರಂಭಿಸಲಾಯಿತು. ಬೆನೌಡ್ ಮತ್ತು ಖಾದಿರ್ ಆಸೀಸ್ ಹಾಗು ಪಾಕ್ ತಂಡದ ಮಾಜಿ ಲೆಗ್ ಸ್ಪಿನ್ ಬೌಲರ್ಸ್ಗಳಾಗಿದ್ದು, ಈ ಇಬ್ಬರ ಹೆಸರನ್ನು ಸರಣಿಗೆ ಇಡಲಾಗಿದೆ.
ಇದನ್ನೂ ಓದಿ : ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾ ಪೋಸ್ಟ್ ವೈರಲ್: ಮಾಜಿ ಕ್ರಿಕೆಟಿಗ ಕೆ.ಶ್ರೀಕಾಂತ್ ಹೇಳಿದ್ದಿಷ್ಟು