ETV Bharat / sports

ಮಹಾರಾಜ ಟ್ರೋಫಿ ಫೈನಲ್‌.. ಚಾಂಪಿಯನ್‌ ಪಟ್ಟ ಮುಡಿಗೇರಿಸಿ ಕೊಂಡ ಗುಲ್ಬರ್ಗ ಮಿಸ್ಟಿಕ್ಸ್‌ - ಈಟಿವಿ ಭಾರತ್​ ಕರ್ನಾಟಕ

ಮಹಾರಾಜ ಟ್ರೋಫಿ ಕ್ರಿಕೆಟ್ ಅಂತಿಮ ಹಣಾಹಣಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ ಅನ್ನು ಗುಲ್ಬರ್ಗ ಮಿಸ್ಟಿಕ್ಸ್‌ ಸೋಲಿಸಿ ಚಾಂಪಿಯನ್‌ ಪಟ್ಟ ಮುಡಿಗೆರಿಸಿಕೊಂಡಿದೆ.

gulbarga mystics champion
ಮಹಾರಾಜ ಟ್ರೋಫಿ ಫೈನಲ್‌
author img

By

Published : Aug 27, 2022, 7:02 AM IST

ಬೆಂಗಳೂರು: ಫೈನಲ್‌ ಪಂದ್ಯದಲ್ಲಿ ಬಲಿಷ್ಠ ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ಧ 11 ರನ್​ಗಳ ಜಯ ಗಳಿಸಿದ ಗುಲ್ಬರ್ಗ ಮಿಸ್ಟಿಕ್ಸ್‌ ಪ್ರತಿಷ್ಠಿತ ಮಹಾರಾಜ ಟ್ರೋಫಿ ಟಿ20 ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಎಲ್‌.ಆರ್‌ ಚೇತನ್‌ ಶ್ರಮ ವ್ಯರ್ಥವಾಗಿದೆ.

221 ರನ್‌ಗಳ ಬೃಹತ್‌ ಮೊತ್ತವನ್ನು ಭೇದಿಸಲು ಹೊರಟ ಬೆಂಗಳೂರು ಬ್ಲಾಸ್ಟರ್ಸ್‌ ತಂಡ ಚೇತನ್‌ ಎಲ್‌.ಆರ್‌. (91) ಹಾಗೂ ಕ್ರಾಂತಿ ಕುಮಾರ್‌ (47) ಅವರ 116 ರನ್‌ ಜೊತೆಯಾಟದಿಂದ ಗೆಲ್ಲುವ ಆತ್ಮವಿಶ್ವಾಸ ಹೊಂದಿತ್ತು. ಮನೋಜ ಭಾಂಡಗೆ 32 ರನ್‌ಗೆ 3 ವಿಕೆಟ್‌ ಗಳಿಸಿ ಪಂದ್ಯಕ್ಕೆ ತಿರುವು ನೀಡಿದರು. ಅಂತಿಮವಾಗಿ ಬೆಂಗಳೂರು 9 ವಿಕೆಟ್‌ ನಷ್ಟಕ್ಕೆ 209 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಬೆಂಗಳೂರು ಬ್ಲಾಸ್ಟರ್ಸ್‌ಗೆ ಸಿಕ್ಕ 221 ರನ್‌ ಗುರಿ: ದೇವದತ್ತ ಪಡಿಕ್ಕಲ್‌ (56*) ಹಾಗೂ ನಾಯಕ ಮನೀಶ್‌ ಪಾಂಡೆ (41*) ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಗುಲ್ಬರ್ಗ ಮಿಸ್ಟಿಕ್ಸ್‌ ತಂಡ ಮಹಾರಾಜ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಎದುರಾಳಿ ಬೆಂಗಳೂರು ಬ್ಲಾಸ್ಟರ್ಸ್‌ಗೆ 221 ರನ್‌ಗಳ ಬೃಹತ್‌ ಗುರಿಯನ್ನು ನೀಡಿತ್ತು. ಚೇಸಿಂಗ್ ಸ್ವರ್ಗ ಎಂದೇ ಕೆರೆದಿರುವ ಚಿನ್ನ ಸ್ವಾಮಿ ಕ್ರಿಡಾಂಗಣ ಬ್ಲಾಸ್ಟರ್ಸ್‌ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡಿತು.

mahraja trophy final gulbarga mystics champion
ಗುಲ್ಬರ್ಗ ಮಿಸ್ಟಿಕ್ಸ್‌ ಚಾಂಪಿಯನ್‌

ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ ತನ್ನಿಂದಾದ ಅದ್ಭುತ ಬ್ಯಾಟಿಂಗ್‌ ಪ್ರದರ್ಶಿಸಿರುವುದು ಗುಲ್ಬರ್ಗ ತಂಡಕ್ಕೆ ಹೆಮ್ಮೆಯ ಸಂಗತಿಯಾಯಿತು. ರೋಹನ್‌ ಪಾಟೀಲ್‌ (38) ಹಾಗೂ ಜೆಸ್ವತ್‌ ಆಚಾರ್ಯ (39) 60 ರನ್‌ಗಳ ಜೊತೆಯಾಟವಾಡಿ ಬೃಹತ್‌ ಮೊತ್ತಕ್ಕೆ ವೇದಿಕೆ ಹಾಕಿಕೊಟ್ಟರು. ಟೂರ್ನಿಯಲ್ಲಿ ಇದುವರೆಗೂ ಎರಡು ಶತಕ ದಾಖಲಿಸಿರುವ ರೋಹನ್‌ ಪಾಟೀಲ್‌ ಅಬ್ಬರದ ಆರಂಭ ನೀಡಿದರು. 21 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್‌ ಸಿಡಿಸಿ ಅಮೂಲ್ಯ 38 ರನ್‌ ಗಳಿಸಿ ನಿರ್ಗಮಿಸಿದರು. ಜೆಸ್ವತ್‌ ಆಚಾರ್ಯ 3 ಬೌಂಡರಿ ಹಾಗೂ 3 ಸಿಕ್ಸರ್‌ ನೆರವಿನಿಂದ 39 ರನ್‌ ಸಿಡಿಸಿ ಬೃಹತ್‌ ಮೊತ್ತಕ್ಕೆ ಮುನ್ನುಡಿ ಬರೆದರು.

ದೇವದತ್ತ ಪಡಿಕ್ಕಲ್‌ ಪಾಂಡೆ ಜೊತೆಯಾಟದಿಂದ ಬೃಹತ್ ಸ್ಕೋರ್: ಎರಡನೇ ಕ್ವಾಲಿಫಯರ್‌ನಲ್ಲಿ 96 ರನ್‌ ಸಿಡಿಸಿ ಜಯದ ರೂವಾರಿ ಎನಿಸಿದ್ದ ದೇವದತ್ತ ಪಡಿಕ್ಕಲ್‌ ಆರಂಭದಲ್ಲಿ ನಿಧಾನಗತಿಯಲ್ಲಿ ಇನ್ನಿಂಗ್ಸ್‌ ಆರಂಭಿಸಿದರೂ ನಂತರದ ಅಬ್ಬರದ ಹೊಡೆತಗಳಿಗೆ ಮನಸ್ಸು ಮಾಡಿ 42 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ ಅಜೇಯ 56 ರನ್‌ ಗಳಿಸಿ ಬೃಹತ್‌ ಮೊತ್ತಕ್ಕೆ ನೆರವಾದರು.

ನಾಯಕ ಮನೀಶ್‌ ಪಾಂಡೆ ಕೇವಲ 17 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್‌ ನೆರವಿನಿಂದ ಅಜೇಯ 41 ರನ್‌ ಸಿಡಿಸಿ ನಾಯಕನ ಜವಾಬ್ದಾರಿ ನಿಭಾಯಿಸಿದರು. ಪಡಿಕ್ಕಲ್‌ ಹಾಗೂ ಪಾಂಡೆ 62 ರನ್‌ ಜೊತೆಯಾಟವಾಡಿ ಅಸಾಧಾರಣ ಮೊತ್ತ ಪೇರಿಸಲು ನೆರವಾದರು. ಇದಕ್ಕೂ ಮುನ್ನ ಯುವ ಆಟಗಾರ ಕೃಷ್ಣನ್‌ ಶ್ರೀಜಿತ್‌ 25 ಎಸತೆಗಳಲ್ಲಿ 38 ರನ್‌ ಗಳಿಸಿ ತಂಡದ ಪರ ಜವಾಬ್ದಾರಿಯುತ ಆಟವಾಡಿದರು.

ಬೆಂಗಳೂರು ಬ್ಲಾಸ್ಟರ್ಸ್‌ ಅನಿರುಧ್‌ ಜೋಶಿ ಎಕನಾಮಿಕಲ್ ಬೌಲರ್‌: ಬೆಂಗಳೂರು ಬ್ಲಾಸ್ಟರ್ಸ್‌ ಪರ ಅನಿರುಧ್‌ ಜೋಶಿ 3 ಓವರ್‌ಗಲ್ಲಿ ಕೇವಲ 15 ರನ್‌ ನೀಡಿ 1 ವಿಕೆಟ್‌ ಪಡೆಯುವ ಮೂಲಕ ಯಶಸ್ವಿ ಬೌಲರ್‌ ಎನಿಸಿದರು.

ಗುಲ್ಬರ್ಗ ತಂಡಕ್ಕೆ 25 ಲಕ್ಷ ರೂಪಾಯಿ ಬಹುಮಾನ: ವಿಜೇತ ಗುಲ್ಬರ್ಗ ತಂಡ 25 ಲಕ್ಷ ರೂಪಾಯಿ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು.

ಸಂಕ್ಷಿಪ್ತ ಸ್ಕೋರ್‌:ಗುಲ್ಬರ್ಗ ಮಿಸ್ಟಿಕ್ಸ್‌: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 220 ( ರೋಹನ್‌ ಪಾಟೀಲ್‌ 38, ಜೆಸ್ವತ್‌ ಆಚಾರ್ಯ 39, ಕೃಷ್ಣನ್‌ ಶ್ರೀಜಿತ್‌ 38, ದೇವದತ್ತ ಪಡಿಕ್ಕಲ್‌ 56*, ಮನೀಶ್‌ ಪಾಂಡೆ 41* ಪ್ರದೀಪ್‌ 51ಕ್ಕೆ 1, ರಿಶಿ ಬೋಪಣ್ಣ 35ಕ್ಕೆ 1, ಅನಿರುಧ್‌ ಜೋಶಿ 15ಕ್ಕೆ 1)

ಬೆಂಗಳೂರು ಬ್ಲಾಸ್ಟರ್ಸ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 209 (ಎಲ್‌.ಆರ್‌. ಚೇತನ್‌ 91, ಕ್ರಾಂತಿ ಕುಮಾರ್‌ 47, ರಿತೇಶ್‌ ಭಟ್ಕಳ್‌ 20ಕ್ಕೆ 2, ಪ್ರಣವ್‌ ಭಾಟಿಯಾ 39ಕ್ಕೆ 2, ಮನೋಜ್‌ ಭಾಂಡಗೆ 32ಕ್ಕೆ 3)

ಇದನ್ನೂ ಓದಿ : ಮಹಾರಾಜ ಟ್ರೋಫಿ : ಫೈನಲ್ ಪಂದ್ಯಕ್ಕೂ ಕ್ರಿಕೆಟ್ ಅಭಿಮಾನಿಗಳಿಗೆ ಸಿಗಲಿದೆ ಫ್ರೀ ಎಂಟ್ರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.