ETV Bharat / sports

ಮಹಾರಾಜ ಟ್ರೋಫಿ: ಸುಚಿತ್​ ಆಲ್​ರೌಂಡ್​ ಆಟಕ್ಕೆ ಬೆಂಡಾದ ಮೈಸೂರು ವಾರಿಯರ್ಸ್​ - maharaja trophy

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೈಸೂರು ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ 23 ರನ್​ಗಳ ಜಯ ಸಾಧಿಸಿತು.

bangalore-blasters-win
ಸುಚಿತ್​ ಆಲ್​ರೌಂಡ್​ ಆಟಕ್ಕೆ ಬೆಂಡಾದ ಮೈಸೂರು ವಾರಿಯರ್ಸ್​
author img

By

Published : Aug 21, 2022, 9:34 AM IST

Updated : Aug 22, 2022, 4:46 PM IST

ಬೆಂಗಳೂರು: ಬೆಂಗಳೂರು ಬ್ಲಾಸ್ಟರ್ಸ್​ ತಂಡದ ಜಗದೀಶ್​ ಸುಚಿತ್‌ ಅವರ ಆಲ್​ರೌಂಡ್​ ಆಟದ (40 ರನ್‌, 19ಕ್ಕೆ 2) ಮುಂದೆ ಮೈಸೂರು ವಾರಿಯರ್ಸ್​ ತಂಡದ ಆಟ ಕಳೆಗುಂದಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಾರಾಜ ಟ್ರೋಫಿ ಟಿ-20 ಟೂರ್ನಿಯ ಗುಂಪು ಹಂತದ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ 23 ರನ್‌ ಅಂತರದ ಜಯ ಸಾಧಿಸಿತು. ಬೆಂಗಳೂರು ಬ್ಲಾಸ್ಟರ್ಸ್​ ನೀಡಿದ 158 ರನ್​ ಬೆನ್ನತ್ತಿದ್ದ ಮೈಸೂರು ವಾರಿಯರ್ಸ್ ಸತತವಾಗಿ ವಿಕೆಟ್‌ ಕಳೆದುಕೊಂಡು ಸೋಲಿಗೆ ಶರಣಾಯಿತು.

ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಮೈಸೂರು ತಂಡ ಬೆಂಗಳೂರನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಇನಿಂಗ್ಸ್​ ಆರಂಭಿಸಿದ ಎಲ್​.ಆರ್​ ಚೇತನ್​ (29) ಮತ್ತು ನಾಯಕ ಮಯಾಂಕ್​ ಅಗರ್​ವಾಲ್​ (31) ಮೊದಲ ವಿಕೆಟ್​ಗೆ 61 ರನ್​ ಗಳಿಸಿ ಭದ್ರ ಬುನಾದಿ ಹಾಕಿದರು. ಬಳಿಕ ಬಂದ ಅನೀಶ್​ 23 ಮಾಡಿದರೆ, ಶಿವಕುಮಾರ್​ ರಕ್ಷಿತ್​ 2, ಅನಿರುದ್ಧ್​ ಜೋಶಿ 7 ರನ್​ಗೆ ಪೆವಿಲಿಯನ್​ ಸೇರಿದರು. ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ತಂಡಕ್ಕೆ ಈ ಹಂತದಲ್ಲಿ ಜಗದೀಶ್​ ಸುಚಿತ್​ ಬ್ಯಾಟಿಂಗ್​ ನೆರವಾಯಿತು.

ಸುಚಿತ್​ ಔಟಾಗುವ ಮೊದಲು ಭರ್ಜರಿ ಬ್ಯಾಟ್ ಬೀಸಿ 6 ಬೌಂಡರಿ, 1 ಸಿಕ್ಸರ್​ ನೆರವಿನಿಂದ 40 ರನ್​ ಗಳಿಸಿದರು. ಕೊನೆಯಲ್ಲಿ ಕ್ರಾಂತಿಕುಮಾರ್​ 15 ರನ್​ ಮಾಡಿದರು. ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 157 ರನ್​ ಗಳಿಸಿತು. ಮೈಸೂರು ಪರವಾಗಿ ಅನುಭವಿ ಬೌಲರ್​ ಶ್ರೇಯಸ್​ ಗೋಪಾಲ್ 3 ವಿಕೆಟ್​ ಪಡೆದರು.

ಶ್ರೇಯಸ್​ ಗೋಪಾಲ್ ಬೌಲಿಂಗ್​
ಶ್ರೇಯಸ್​ ಗೋಪಾಲ್ ಬೌಲಿಂಗ್​

ಸಾಧಾರಣ ಮೊತ್ತ ದಾಟದ ವಾರಿಯರ್ಸ್​: 157 ​ರನ್​ಗಳ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಮೈಸೂರು ವಾರಿಯರ್ಸ್​ ತಂಡ ಆರಂಭದಿಂದಲೇ ವಿಕೆಟ್​ ಕೈಚೆಲ್ಲಿತು. ಆಲೌರಂಡರ್​ ಶ್ರೇಯಸ್​ ಗೋಪಾಲ್​ ಏಕಾಂಗಿಯಾಗಿ ಹೋರಾಡಿ 50 ರನ್​ ಗಳಿಸಿದರು. ಪವನ್​ ದೇಶಪಾಂಡೆ 20 ರನ್​ ಮಾಡಿದ್ದರ ಎರಡನೇ ಅತ್ಯಧಿಕ ಮೊತ್ತವಾಗಿದೆ. ಒಂದು ಹಂತದಲ್ಲಿ 59 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡು 100 ರನ್​ಗೆ ಅಲೌಟ್​ ಆಗುವ ಭೀತಿಯಲ್ಲಿದ್ದ ತಂಡಕ್ಕೆ ಗೋಪಾಲ್​ ಆಸರೆಯಾದರು.

ಬೆಂಗಳೂರು ಬ್ಲಾಸ್ಟರ್ಸ್‌ ಪರ ರಿಶಿ ಬೋಪಣ್ಣ (31ಕ್ಕೆ 3), ರೋನಿತ್‌ ಮೋರೆ (18ಕ್ಕೆ 2), ಸಂತೋಕ್‌ ಸಿಂಗ್‌ (23ಕ್ಕೆ 2) ಉತ್ತಮ ಬೌಲಿಂಗ್‌ ಪ್ರದರ್ಶಿಸಿದರು.

ಸಂಕ್ಷಿಪ್ತ ಸ್ಕೋರ್‌: ಬೆಂಗಳೂರು ಬ್ಲಾಸ್ಟರ್ಸ್‌: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 157 (ಜೆ. ಸುಚಿತ್‌ 40, ಎಲ್‌ಆರ್‌ ಚೇತನ್‌ 29, ಮಯಾಂಕ್‌ ಅಗರ್ವಾಲ್‌ 31, ಅನೀಶ್‌ 23 ಶ್ರೇಯಸ್‌ ಗೋಪಾಲ್‌ 19ಕ್ಕೆ 3)

ಮೈಸೂರು ವಾರಿಯರ್ಸ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 134 (ಶ್ರೇಯಸ್‌ ಗೋಪಾಲ್‌ 50, ಜೆ.ಸುಚಿತ್‌ 19ಕ್ಕೆ 2, ರಿಶಿ ಬೋಪಣ್ಣ 31ಕ್ಕೆ 3, ರೋನಿತ್‌ ಮೋರೆ 18ಕ್ಕೆ 2, ಸಂತೋಕ್‌ ಸಿಂಗ್‌ 23ಕ್ಕೆ 2)

ಇದನ್ನೂ ಓದಿ: ಮಹಾರಾಜ ಟ್ರೋಫಿ : ಮಂಗಳೂರು ಯುನೈಟೆಡ್​ ವಿರುದ್ಧ ಗೆದ್ದು ಬೀಗಿದ ಶಿವಮೊಗ್ಗ ಸ್ಟ್ರೈಕರ್ಸ್‌

Last Updated : Aug 22, 2022, 4:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.