ETV Bharat / sports

ಮಹಾರಾಜ ಟ್ರೋಫಿ: ಗುಲ್ಬರ್ಗಾ ಮಿಸ್ಟಿಕ್ಸ್​ ಮಣಿಸಿ ಮೊದಲ ಗೆಲುವು ಕಂಡ ಮೈಸೂರು ವಾರಿಯರ್ಸ್

author img

By

Published : Aug 17, 2023, 11:21 AM IST

Maharaja Trophy: ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ತಂಡವು ಗುಲ್ಬರ್ಗಾ ಮಿಸ್ಟಿಕ್ಸ್​ನ್ನು ಸೋಲಿಸಿ ಮೊದಲ ಗೆಲುವಿನ ನಗೆ ಬೀರಿದೆ.

maharaja-trophy-mysore-warriors-defeated-gulbarga-mystics-by-54-runs
ಮಹಾರಾಜ ಟ್ರೋಫಿ: ಗುಲ್ಬರ್ಗಾ ಮಿಸ್ಟಿಕ್ಸ್​ ಮಣಿಸಿ ಮೊದಲ ಗೆಲುವು ಕಂಡ ಮೈಸೂರು ವಾರಿಯರ್ಸ್

ಬೆಂಗಳೂರು : ಮನೋಜ್ ಭಾಂಡಗೆ (ಅಜೇಯ 32 ರನ್​​ ಮತ್ತು 19ಕ್ಕೆ 4 ವಿಕೆಟ್​) ಅವರ ಆಲ್‌ರೌಂಡ್ ಪ್ರದರ್ಶನ ಹಾಗೂ ನಾಯಕ ಕರುಣ್ ನಾಯರ್ (57) ಅರ್ಧಶತಕದ ಬಲದಿಂದ ಮೈಸೂರು ವಾರಿಯರ್ಸ್ ತಂಡವು ಗುಲ್ಬರ್ಗಾ ಮಿಸ್ಟಿಕ್ಸ್​ನ್ನು 54 ರನ್‌ಗಳಿಂದ ಮಣಿಸಿತು. ಈ ಮೂಲಕ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಮೈಸೂರು ಮೊದಲ ಜಯ ಸಾಧಿಸಿದೆ.

ಬುಧವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಮೈಸೂರು ವಾರಿಯರ್ಸ್​​ಗೆ ಆರಂಭದಲ್ಲೇ ಬ್ಯಾಟರ್​ ಸಿ.ಎ ಕಾರ್ತಿಕ್ (13) ಅವರು ಅಭಿಲಾಷ್ ಶೆಟ್ಟಿಗೆ ವಿಕೆಟ್ ಒಪ್ಪಿಸಿದರು. ಆದಾಗ್ಯೂ ರವಿಕುಮಾರ್ ಸಮರ್ಥ್ (48) ಬ್ಯಾಟ್‌ನಿಂದ ಉತ್ತಮ ಕೊಡುಗೆ ಮೂಡಿ ಬಂತು. ಈ ಹಂತದಲ್ಲಿ ಮೈಸೂರು ವಾರಿಯರ್ಸ್ ನಾಯಕ ಕರುಣ್ ನಾಯರ್ ಸಮರ್ಥ್ ಜೊತೆಗೂಡಿ ರನ್ ವೇಗ ಹೆಚ್ಚಿಸಿದರು.

ಎರಡನೇ ವಿಕೆಟ್‌ಗೆ ಈ ಸಮರ್ಥ್ - ಕರುಣ್ ಜೋಡಿ 62 ಎಸೆತಗಳಲ್ಲಿ 91 ರನ್ ಜೊತೆಯಾಟವಾಡಿತು. ಅರ್ಧಶತಕದ ಸನಿಹದಲ್ಲಿದ್ದ ಸಮರ್ಥ್, ಅನುಭವಿ ಲೆಗ್ ಸ್ಪಿನ್ನರ್ ಅಮಿತ್ ವರ್ಮಾ ಬೌಲಿಂಗ್‌ನಲ್ಲಿ ವಿಕೆಟ್ ಕೈಚೆಲ್ಲಿದರು. ಆದರೆ ತಮ್ಮ ಅದ್ಭುತ ಫಾರ್ಮ್ ಮುಂದುವರೆಸಿದ ನಾಯಕ ಕರುಣ್ ಟೂರ್ನಿಯಲ್ಲಿ ಸತತ ಎರಡನೇ ಅರ್ಧಶತಕ ದಾಖಲಿಸಿದರು. ನಂತರ ಬಂದ ಜೆ.ಸುಚಿತ್ (17), ಅವರ ಹಿಂದೆಯೇ ಕರುಣ್ ನಾಯರ್ (57) ಕೂಡ ಔಟಾದರು. ಆದರೆ ಐದನೇ ಕ್ರಮಾಂಕದಲ್ಲಿ ಬಂದ ಮನೋಜ್ ಭಾಂಡಗೆ 15 ಎಸೆತಗಳಲ್ಲಿ ಅಜೇಯ 32 ಮತ್ತು ಶಿವಕುಮಾರ್ ರಕ್ಷಿತ್ 8 ಎಸೆತಗಳಲ್ಲಿ 21 ರನ್​ ಮೂಲಕ ಸ್ಫೋಟಕ ಬ್ಯಾಟಿಂಗ್ ನಡೆಸಿ ನಿಗದಿತ 20 ಓವರ್‌ಗಳ ಅಂತ್ಯಕ್ಕೆ ತಂಡದ ಮೊತ್ತವನ್ನು 5 ವಿಕೆಟ್​ಗೆ 198ಕ್ಕೆ ಕೊಂಡೊಯ್ದರು.

maharaja-trophy-mysore-warriors-defeated-gulbarga-mystics-by-54-runs
ಗುಲ್ಬರ್ಗಾ ಮಿಸ್ಟಿಕ್ಸ್​ - ಮೈಸೂರು ವಾರಿಯರ್ಸ್ ನಡುವಿನ ಪಂದ್ಯ

ಮಿಸ್ಟಿಕ್ಸ್‌ ಆಲೌಟ್​​: 199 ರನ್ ಗುರಿ ಪಡೆದ ಗುಲ್ಬರ್ಗ ಮಿಸ್ಟಿಕ್ಸ್‌ಗೆ ಆರಂಭಿಕರಾದ ಎಲ್‌.ಆರ್ ಚೇತನ್ (44) ಮತ್ತು ಆದರ್ಶ್ ಪ್ರಜ್ವಲ್ (16) ಉತ್ತಮ ಆರಂಭ ನೀಡಿದರು. ಆದರೆ ತಂಡದ ಮೊತ್ತ ಅರ್ಧಶತಕದ ಸಮೀಪದಲ್ಲಿರುವಾಗ ಚೇತನ್ ಹಾಗೂ ನಂತರ ಆದರ್ಶ್ ಪ್ರಜ್ವಲ್ ಒಬ್ಬರ ಹಿಂದೊಬ್ಬರಂತೆ ವಿಕೆಟ್ ಒಪ್ಪಿಸಿ ನಡೆದರು. ಮೂರನೇ ಕ್ರಮಾಂಕದಲ್ಲಿ ಬಂದ ಅನೀಶ್ ಕೆ.ವಿ ಕೇವಲ 1 ರನ್‌ಗೆ ಸೀಮಿತವಾದರು. ಸ್ಮರಣ್ (15) ಮತ್ತು ಮ್ಯಾಕ್ನೈಲ್ ನೊರೋನ್ಹಾ (20) ಹಾಗೂ ನಾಯಕ ವಿಜಯ್ ಕುಮಾರ್ ವೈಶಾಕ್ (10) ಕೆಲ ರನ್ ಗಳಿಸಿದ್ದು ಹೊರತುಪಡಿಸಿದರೆ ಯಾವೊಬ್ಬ ಆಟಗಾರರೂ ಹೆಚ್ಚಿನ ಪ್ರತಿರೋಧ ತೋರಲಿಲ್ಲ.

ವೇಗಿ ಮನೋಜ್ ಭಾಂಡಗೆ 16ನೇ ಓವರ್‌ನಲ್ಲಿ ಅಮಿತ್ ವರ್ಮಾ (7), ಡಿ ಅವಿನಾಶ್ (9) ಮತ್ತು ಸೌರಭ್ ಮುತ್ತೂರ್ (1) ವಿಕೆಟ್ ಪಡೆದು ಮಿಂಚಿದರು. ಅಂತಿಮ ನಾಲ್ಕು ಓವರ್‌ಗಳಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ಗೆಲುವಿಗೆ 73 ರನ್‌ಗಳ ಅಗತ್ಯವಿತ್ತು. ಆದರೆ, ಒಂದು ಓವರ್ ಬಾಕಿ ಇರುವಂತೆಯೇ ಕೇವಲ 144 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಮೈಸೂರು ವಾರಿಯರ್ಸ್ 54 ರನ್‌ಗಳ ಜಯ ಸಾಧಿಸಿತು.

ಇದನ್ನೂ ಓದಿ: Maharaja Trophy: ಹುಬ್ಬಳ್ಳಿಗೆ ಹ್ಯಾಟ್ರಿಕ್ ಜಯ, ಬೆಂಗಳೂರು ಬ್ಲಾಸ್ಟರ್ಸ್​ಗೆ ಸತತ ಸೋಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.