ETV Bharat / sports

ಮಹಾರಾಜ ಟ್ರೋಫಿ: ಹಾಲಿ ಚಾಂಪಿಯನ್ ಗುಲ್ಬರ್ಗ ಶುಭಾರಂಭ.. ಗೆದ್ದು ಬೀಗಿದ ಹುಬ್ಬಳ್ಳಿ ಟೈಗರ್ಸ್ - ಮೈಸೂರು ವಾರಿಯರ್ಸ್

Maharaja Trophy 2023: ಮಹಾರಾಜ ಟ್ರೋಫಿ ಟೂರ್ನಿಯ ಭಾನುವಾರದ ಪಂದ್ಯಗಳಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ತಂಡಗಳು ಜಯ ದಾಖಲಿಸಿವೆ.

maharaja-trophy-gulbarga-mystics-win-against-kalyani-bangalore-blasters
ಮಹಾರಾಜ ಟ್ರೋಫಿ: ಹಾಲಿ ಚಾಂಪಿಯನ್ ಗುಲ್ಬರ್ಗ ಶುಭಾರಂಭ.. ಗೆದ್ದು ಬೀಗಿದ ಹುಬ್ಬಳ್ಳಿ ಟೈಗರ್ಸ್
author img

By

Published : Aug 14, 2023, 12:33 PM IST

ಬೆಂಗಳೂರು : ಆರಂಭಿಕ ಆಟಗಾರ ಎಲ್.ಆರ್. ಚೇತನ್ ಹಾಗೂ ಮಧ್ಯಮ ವೇಗಿ ಅಭಿಲಾಶ್ ಶೆಟ್ಟಿ ಅವರ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಆರಂಭಿಕ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ತಂಡವು 6 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಹಾಲಿ ಚಾಂಪಿಯನ್ ಮಿಸ್ಟಿಕ್ಸ್ ತಂಡವು ದ್ವಿತೀಯ ಆವೃತ್ತಿಯ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ.

ತಂಡದ ಪರ ಅಭಿಲಾಶ್ ಶೆಟ್ಟಿ 17 ರನ್​ಗೆ 3​ ಹಾಗೂ ಶರಣ್ ಗೌಡ 24ಕ್ಕೆ 2 ವಿಕೆಟ್ ಪಡೆದು ಬೌಲಿಂಗ್‌ನಲ್ಲಿ ಮಿಂಚಿದರೆ, ಆರಂಭಿಕ‌ ಬ್ಯಾಟರ್​​ ಎಲ್.ಆರ್.ಚೇತನ್ 36 (24 ಎಸೆತ) ರನ್ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದಕ್ಕೂ ಮುನ್ನ ಟಾಸ್ ಗೆದ್ದ ಗುಲ್ಬರ್ಗಾ ಮಿಸ್ಟಿಕ್ಸ್ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನ ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಬ್ಲಾಸ್ಟರ್ಸ್ ಆರಂಭಿಕರಾದ ಡಿ.ನಿಶ್ಚಲ್​ 1 ರನ್ ಹಾಗೂ ನಾಯಕ ಮಯಾಂಕ್ ಅಗರ್ವಾಲ್ ಅವರನ್ನು 4 ರನ್​ಗೆ ಔಟ್ ಮಾಡುವ ಮೂಲಕ ಮಿಸ್ಟಿಕ್ಸ್ ವೇಗಿ ಅಭಿಲಾಶ್ ಶೆಟ್ಟಿ ತಂಡಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟರು. ಮಧ್ಯಮ ಕ್ರಮಾಂಕದಲ್ಲಿ ಜೆಶ್ವಂತ್ ಆಚಾರ್ಯ 29 ಹಾಗೂ ಸೂರಜ್ ಅಹುಜಾ 62* ರನ್ ಗಳಿಸುವ ಮೂಲಕ ಬ್ಲಾಸ್ಟರ್ಸ್ ತಂಡ 29 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್‌ಗಳ ನಷ್ಟಕ್ಕೆ 137 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಮಿಸ್ಟಿಕ್ಸ್ ತಂಡಕ್ಕೆ ಆರಂಭಿಕರಾದ ಎಲ್.ಆರ್.ಚೇತನ್ (36) ಆದರ್ಶ್ ಪ್ರಜ್ವಲ್ (31) ಭದ್ರ ಬುನಾದಿ ಹಾಕಿದರು. ಬ್ಲಾಸ್ಟರ್ಸ್ ಪರ ದಾಳಿಗಿಳಿದ ಶುಭಾಂಗ್ ಹೆಗಡೆ ಚೇತನ್, ಆದರ್ಶ್ ಹಾಗೂ ಸ್ಮರಣ್​ರನ್ನ ಒಬ್ಬರ ಹಿಂದೊಬ್ಬರಂತೆ ಔಟ್ ಮಾಡುವ ಮೂಲಕ‌ ಬ್ಲಾಸ್ಟರ್ಟ್​​ಗೆ ಗೆಲುವಿನ ಆಸೆ ಚಿಗುರಿಸಿದರು. ಆದರೆ ಮಿಸ್ಟಿಕ್ಸ್ ಪರ ಮಧ್ಯಮ ಕ್ರಮಾಂಕದಲ್ಲಿ ಕೆ.ವಿ ಅನೀಶ್ 29* ಹಾಗೂ ಅಮಿತ್ ವರ್ಮಾ 28 ರನ್ ಗಳಿಸುವ ಮೂಲಕ ಗೆಲುವು ತಂದಿತ್ತರು. ಅಂತಿಮವಾಗಿ ಆರು ವಿಕೆಟ್‌ ಬಾಕಿ ಇರುವಂತೆ ಮಿಸ್ಟಿಕ್ಸ್ ತಂಡ ಗೆಲುವಿನ ನಗೆ ಬೀರಿತು.

Maharaja Trophy
ಹುಬ್ಬಳ್ಳಿ ಟೈಗರ್ಸ್ ಆಟಗಾರ

ಮೈಸೂರು ವಾರಿಯರ್ಸ್ ವಿರುದ್ಧ ಗೆದ್ದ ಹುಬ್ಬಳ್ಳಿ ಟೈಗರ್ಸ್: ಮಳೆ ಬಾಧಿತ ಮತ್ತೊಂದು ಪಂದ್ಯದಲ್ಲಿ ಕೃಷ್ಣನ್ ಶ್ರೀಜಿತ್ (17 ರನ್​) ಹಾಗೂ ಮೊಹಮ್ಮದ್ ತಾಹಾ (61) ಅವರ 82 ರನ್‌ಗಳ ಜೊತೆಯಾಟದ ನೆರವಿನಿಂದ ಮೈಸೂರು ವಾರಿಯರ್ಸ್ ವಿರುದ್ಧ ಹುಬ್ಬಳ್ಳಿ ಟೈಗರ್ಸ್ ಜಯ ಸಾಧಿಸಿತು. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಮೈಸೂರು ವಾರಿಯರ್ಸ್ ಒಂದರ ಹಿಂದೊಂದರಂತೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ತಂಡದ ಪರ ಸಿ ಕಾರ್ತಿಕ್ ಶೂನ್ಯಕ್ಕೆ ಔಟಾದರೆ, ನಾಯಕ ಕರುಣ್ ನಾಯರ್ 7 ರನ್​ಗೆ ವಿಕೆಟ್ ಒಪ್ಪಿಸಿದರು. ಆರಂಭಿಕ ಆಟಗಾರ ಆರ್.ಸಮರ್ಥ್ 21 ರನ್ ಗಳಿಸಿದ್ದೇ ತಂಡದ ಪರ ಗರಿಷ್ಠ ಮೊತ್ತವಾಗಿತ್ತು.

ಬಳಿಕ ಕೆಳ ಕ್ರಮಾಂಕದಲ್ಲಿ ಜೆ.ಸುಚಿತ್ 20, ಭರತ್ ಧುರಿ 16 ಹಾಗೂ ವೆಂಕಟೇಶ್ ಎಂ. 16 ರನ್ ಗಳಿಸಿ ತಂಡಕ್ಕೆ ನೆರವಾದರು. ಅಂತಿಮವಾಗಿ ಮೈಸೂರು 9 ವಿಕೆಟ್‌ಗಳ ನಷ್ಟಕ್ಕೆ 111 ರನ್‌ ಪೇರಿಸಿತು. ಹುಬ್ಬಳ್ಳಿ ಪರ ಮಿತ್ರಕಾಂತ್ ಯಾದವ್ 3, ವಿದ್ವತ್ ಕಾವೇರಪ್ಪ ಹಾಗೂ ಲವೀಶ್ ಕೌಶಲ್ ತಲಾ 2 ವಿಕೆಟ್‌ ಪಡೆದು ಮಿಂಚಿದರು.

112 ರನ್‌ಗಳ ಗುರಿ ಪಡೆದ ಹುಬ್ಬಳ್ಳಿ ತಂಡದ ಆರಂಭಿಕ ಲವನಿತ್ ಸಿಸೋಡಿಯಾ ಶೂನ್ಯಕ್ಕೆ ಔಟಾದರು. ಅದಾಗಿಯೂ ಸಹ 4.3 ಓವರ್‌ಗಳಲ್ಲಿ ಹುಬ್ಬಳ್ಳಿ ಟೈಗರ್ಸ್ 1 ವಿಕೆಟ್​ ನಷ್ಟಕ್ಕೆ 51 ರನ್​ ಗಳಿಸಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಮಳೆಯಿಂದಾಗಿ 13 ಓವರ್‌ಗಳಲ್ಲಿ 80 ರನ್‌ಗಳ ಗುರಿ ಪಡೆದ ಟೈಗರ್ಸ್ ತಂಡ ಕೃಷ್ಣನ್ ಶ್ರೀಜಿತ್ ಹಾಗೂ ಮೊಹಮ್ಮದ್ ತಾಹಾ ಅವರ 82 ರನ್‌ಗಳ ಅಜೇಯ ಜೊತೆಯಾಟದ ನೆರವಿನಿಂದ 9 ವಿಕೆಟ್‌ ಜಯ ದಾಖಲಿಸಿತು.

ಇದನ್ನೂ ಓದಿ: ವೆಸ್ಟ್​ ಇಂಡೀಸ್​ ವಿರುದ್ಧ ಸರಣಿ ಕೈಚೆಲ್ಲಿದ ಭಾರತ.. ಹಾರ್ದಿಕ್​ ಬಗ್ಗೆ ವೆಂಕಟೇಶ್​ ಪ್ರಸಾದ್​ ಬೇಸರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.