ಚೆನ್ನೈ: ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಟಿ-20 ಕ್ರಿಕೆಟ್ನಲ್ಲಿ ಕೊಹ್ಲಿಯನ್ನು ಹಿಂದಿಕ್ಕಿ ವೇಗವಾಗಿ 5000 ರನ್ ಬಾರಿಸಿದ ಭಾರತೀಯ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ಬುಧವಾರ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಈ ಸಾಧನೆ ಮಾಡಿದ್ದಾರೆ. ರಾಹುಲ್ 143 ಇನ್ನಿಂಗ್ಸ್ಗಳಲ್ಲಿ 5000 ರನ್ ಪೂರೈಸಿದ್ದರೆ, ಟೀಮ್ ಇಂಡಿಯಾ ನಾಯಕ ಕೊಹ್ಲಿ 167 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಒಂದು ರನ್ಗಳಿಸುತ್ತಿದ್ದಂತೆ ರಾಹುಲ್ ಈ ವಿಶೇಷ ದಾಖಲೆಗೆ ಪಾತ್ರರಾದರು. ಒಟ್ಟಾರೆ ರಾಹುಲ್ ಐಪಿಎಲ್ನಲ್ಲಿ 76 ಇನ್ನಿಂಗ್ಸ್ಗಳಲ್ಲಿ 23 ಅರ್ಧಶತಕಗಳ ಸಹಿತ 2808 ರನ್ಗಳಿಸಿದ್ದಾರೆ. ಕೊಹ್ಲಿ 187 ಇನ್ನಿಂಗ್ಸ್ಗಳಿಂದ 5,949 ರನ್ಗಳಿಸಿದ್ದಾರೆ.
ಒಟ್ಟಾರೆ ಚುಟುಕು ಕ್ರಿಕೆಟ್ನಲ್ಲಿ ವೇಗವಾಗಿ 5000 ರನ್ ಗಳಿಸಿದ ದಾಖಲೆ ಆ ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರೀಸ್ ಗೇಲ್ ಹೆಸರಿನಲ್ಲಿದೆ. ಅವರು ಕೇವಲ 132 ಇನ್ನಿಂಗ್ಸ್ ನಲ್ಲಿ ಈ ದಾಖಲೆ ಮಾಡಿದ್ದರು. 2ನೇ ಸ್ಥಾನಕ್ಕೆ ಕೆ ಎಲ್ ರಾಹುಲ್ ಏರಿದ್ದರೆ, ಆಸ್ಟ್ರೇಲಿಯಾದ ಶೇನ್ ಮಾರ್ಷ್ 144 ಇನ್ನಿಂಗ್ಸ್ಗಳಲ್ಲಿ 5000 ರನ್ ಸಿಡಿಸಿ 3ನೇ ಸ್ಥಾನದಲ್ಲಿದ್ದಾರೆ.
ಟಿ-20 ಕ್ರಿಕೆಟ್ನಲ್ಲಿ ವೇಗವಾಗಿ 5000 ಸಾವಿರ ರನ್ ಗಳಿಸಿದ ಬ್ಯಾಟ್ಸ್ಮನ್ಸ್ಗಳ ಪಟ್ಟಿ ಇಂತಿದೆ
- ಕ್ರಿಸ್ ಗೇಲ್ 132 ಇನ್ನಿಂಗ್ಸ್
- ಕೆಎಲ್ ರಾಹುಲ್ 143
- ಶಾನ್ ಮಾರ್ಷ್ 144
- ಬಾಬರ್ ಅಜಮ್ 145
- ಆ್ಯರೋನ್ ಫಿಂಚ್ 159
ಇದನ್ನು ಓದಿ:ಧೋನಿ 150: ಐಪಿಎಲ್ನಲ್ಲಿ ಹೊಸ ಮೈಲುಗಲ್ಲು ನಿರ್ಮಿಸಿದ ಸಿಎಸ್ಕೆ ನಾಯಕ