ಇಂದೋರ್: ಆಸಿಸ್ ಭಾರತವನ್ನು ಮೊದಲ ಇನ್ನಿಂಗ್ಸ್‌ನಲ್ಲಿ ನಿಯಂತ್ರಣಕ್ಕೆ ತೆಗೆದುಕೊಂಡು ಅಲ್ಪಮೊತ್ತಕ್ಕೆ ನಿಯಂತ್ರಿಸಿದ್ದು, ಮೂರನೇ ಪಂದ್ಯ ಗೆಲ್ಲಲು ಕೀ ಅಂಶ ಆಗಿದೆ ಮತ್ತು ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾಕ್ಕೆ ಇದು ಪ್ರಮುಖ ತಿರುವಾಗಿದೆ ಎಂದು ಆಸಿಸ್ ಮಾಜಿ ನಾಯಕ ಇಯಾನ್ ಚಾಪೆಲ್ ಹೇಳಿದ್ದಾರೆ. ಇಂದೋರ್ನ ಹೋಳ್ಕರ್ ಕ್ರಿಡಾಂಗಣಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬ್ಯಾಟರ್‌ಗಳು ರನ್ ಗಳಿಸಲು ವಿಫಲರಾದರು. ಪಂದ್ಯದ ಎರಡು ಇನ್ನಿಂಗ್ಸ್‌ಗಳಲ್ಲಿ 109 ಮತ್ತು 163 ರನ್‌ಗಳಿಗೆ ಔಟಾದರು. ಆಸ್ಟ್ರೇಲಿಯವು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು 9 ವಿಕೆಟ್ನ ಗೆಲುವಿನೊಂದಿಗೆ ಖಚಿತ ಪಡಿಸಿಕೊಂಡಿದೆ.
ಮೂರು ದಿನಗಳೊಳಗೆ ನಾಗ್ಪುರ ಮತ್ತು ದೆಹಲಿಯಲ್ಲಿ ನಡೆದ ಮೊದಲ ಹಾಗೂ ಎರಡು ಟೆಸ್ಟ್‌ನಲ್ಲಿ ಸೋಲನುಭವಿಸಿದ್ದ ಕಾಗರೂ ಪಡೆಗೆ ಮೂರನೇ ಪಂದ್ಯದ ಗೆಲುವು ಪ್ರಮುಖವಾಗಿತ್ತು. "ಮೊದಲ ಇನ್ನಿಂಗ್ಸ್‌ನಲ್ಲಿ ಭಾರತವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವುದು ಪ್ರಮುಖವಾಗಿತ್ತು. ಒಮ್ಮೆ ಆಸ್ಟ್ರೇಲಿಯಾ ಅದನ್ನು ಮಾಡಿ ಯೋಗ್ಯವಾದ ಮುನ್ನಡೆ ಪಡೆಯಲು ಅವಕಾಶ ಮಾಡಿಕೊಂಡರು. ಮೊದಲ ಇನ್ನಿಂಗ್ಸ್‌ನಲ್ಲಿ ಆಸಿಸ್ ಗಳಿಸಿದ್ದು ದೊಡ್ಡ ಮುನ್ನಡೆ ಅಲ್ಲ ಆದರೆ, ಯೋಗ್ಯವಾದ ಮತ್ತು ಉಪಯುಕ್ತವಾದದ್ದು" ಮಾಜಿ ಕ್ರಿಕೆಟಿಗ ಚಾಪೆಲ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
"ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಆರಂಭಿಕ ವಿಕೆಟ್ ಕಳೆದುಕೊಂಡು ಕಡಿಮೆ ಸ್ಕೋರ್ ಅನ್ನು ಬೆನ್ನಟ್ಟಬೇಕಾಗಿತ್ತು. ಟ್ರಾವೆಸ್ ಹೆಡ್ ನಿರ್ದಿಷ್ಟವಾಗಿ ಆಕ್ರಮಣ ಮಾಡಲು ನಿರ್ಧರಿಸಿದರು. ಅವರಿಗೆ ಲಬುಶೇನ್ ಉತ್ತಮ ಸಾಥ್ ನೀಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ್ದು, ಮತ್ತು ಲೀಡಿಂಗ್ ರನ್ ಗಳಿಸಿದ್ದು, ಮೊದಲೆರಡು ಪಂದ್ಯದಲ್ಲಿ ಆಸಿಸ್ ಸೋತರೂ ಈ ಪಂದ್ಯದಲ್ಲಿ ತಿರುಗೇಟು ನೀಡಲು ಸಾಧ್ಯವಾಯಿತು" ಎಂದು ಹೇಳಿದ್ದಾರೆ.
"ಪ್ರವಾಸಿ ಆಸಿಸ್ ತಂಡಕ್ಕೆ ಭಾರತದಲ್ಲಿ ಹೇಗೆ ಆಡಬೇಕು ಎಂಬುದು ಗೊತ್ತಿದೆ ಆದರೆ, ಅದನ್ನು ಪಂದ್ಯದಲ್ಲಿ ಅಳವಡಿಸಿಕೊಳ್ಳುವುದರಲ್ಲಿ ಎಡವಿದ್ದಾರೆ. ಮೈದಾನದಲ್ಲಿ ಹೀಗೆ ಆಡಬೇಕು ಎಂದು ನಿರ್ಣಯ ಮಾಡುವುದು ಅಥವಾ ಹೇಳುವುದು ಸುಲಭ ಆದರೆ ಕಣಕ್ಕಿಳಿದಾಗಲೇ ಪಂದ್ಯದ ಬಗ್ಗೆ ಅರಿವಿಗೆ ಬರುವುದು. ಆದರೆ ಮೂರನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡ ಯೋಜನೆಯನ್ನು ಕಾರ್ಯಗತ ಮಾಡುವಲ್ಲಿ ಯಶಸ್ವಿಯಾಗಿದೆ" ಎಂದು ಚಾಪೆಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಮೊದಲ ಎರಡು ಟೆಸ್ಟ್‌ಗಳಲ್ಲಿ ಟ್ರಾವಿಸ್ ಹೆಡ್ ಅವರನ್ನು ಆಯ್ಕೆ ಮಾಡದಿರುವುದು ಹಾಸ್ಯಾಸ್ಪದ. ಆದರೆ ಕೊನೆಗೂ ತಮ್ಮ ತಪ್ಪಿನ ಬಗ್ಗೆ ತಿಳಿದುಕೊಂಡು ಹೆಡ್ ಅವಕಾಶ ನೀಡಿದ್ದಾರೆ. ಅವರು ಆ ಸ್ಥಾನದಲ್ಲಿ ಉತ್ತಮವಾಗಿ ಆಡಿ ಸಾಮರ್ಥ್ಯ ತೋರಿದ್ದಾರೆ" ಎಂದು ಚಾಪೆಲ್ ಹೇಳುತ್ತಾರೆ.
ಇಂದೊರ್ನ ಹೋಳ್ಕರ್ ಕ್ರೀಡಾಂಗಣದಲ್ಲಿ ಭಾರತೀಯರ ಆಟಗಾರರ ಬ್ಯಾಟಿಂಗ್ ವೈಲಫ್ಯದ ಬಗ್ಗೆ ನಾಯಕ ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ. ಕಠಿಣ ಪಿಚ್ನಲ್ಲಿ ಧೈರ್ಯವಾಗಿ ಆಡುವುದರಲ್ಲಿ ವಿಫಲರಾದೆವು. ಮೊದಲ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಅಲ್ಪ ಮೊತ್ತಕ್ಕೆ ಕುಸಿದ ಕಾರಣ ಪಂದ್ಯ ಕೈ ಚೆಲ್ಲಬೇಕಾಯಿತು ಎಂದಿದ್ದಾರೆ. ಸರಣಿಯ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಮಾರ್ಚ್ 9 ರಿಂದ ಅಹಮದಾಬಾದ್‌ನಲ್ಲಿ ನಡೆಯಲಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಯಾದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್.. ಏಕೆ ಅಂತೀರಾ?