ETV Bharat / sports

ಪ್ರಧಾನಿ ಮೋದಿ ಭೇಟಿಯಾದ ಇಂಗ್ಲೆಂಡ್​ ಮಾಜಿ ಕ್ರಿಕೆಟಿಗ ಕೆವಿನ್​ ಪೀಟರ್ಸನ್.. ಏಕೆ ಅಂತೀರಾ? - Kevin Pietersen

ರೈಸಿನಾ ಡೈಲಾಗ್ ಕಾರ್ಯಕ್ರಮಕ್ಕೆ ಭಾರತಕ್ಕೆ ಭೇಟಿ ಕೊಟಗ್ಟಿರುವ ಕೆವಿನ್​ ಪೀಟರ್ಸನ್​ - ಮೋದಿ ಮತ್ತು ಅಮಿತ್​ ಶಾ ಭೇಟಿ ಮಾಡಿ ಮಾತುಕತೆ - ಭಾರತಕ್ಕೆ ಬಂದಿಳಿದ ಕೆವಿನ್​ ಹಿಂದಿಯಲ್ಲಿ ಟ್ವೀಟ್​​

Kevin Pietersen meets PM Narendra Modi
ಪ್ರಧಾನಿ ಮೋದಿ ಭೇಟಿಯಾದ ಇಂಗ್ಲೆಂಡ್​ ಮಾಜಿ ಕ್ರಿಕೆಟಿಗ ಕೆವಿನ್​ ಪೀಟರ್ಸನ್
author img

By

Published : Mar 3, 2023, 6:21 PM IST

ನವದೆಹಲಿ: ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ದೆಹಲಿಯಲ್ಲಿ ನಡೆದ ರೈಸಿನಾ ಡೈಲಾಗ್ ಕಾರ್ಯಕ್ರಮಕ್ಕೆ ಪೀಟರ್ಸನ್ ಅವರನ್ನು ಆಹ್ವಾನಿಸಲಾಗಿತ್ತು. ಈ ವೇಳೆ, ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿರುವ ಅವರು ತಮ್ಮ ಟ್ವಿಟರ್​ನಲ್ಲಿ,' ನಿಮ್ಮ ಜನ್ಮದಿನದಂದು ಚಿರತೆಗಳನ್ನು ಕಾಡಿಗೆ ಬಿಡುವ ಮಹತ್ಕಾರ್ಯ ಮಾಡಿದ್ದೀರಿ ಈ ಬಗ್ಗೆ ಕೇಳಿ ನನಗೆ ತುಂಬಾ ಸಂತೋಷವಾಯಿತು. ನಿಮ್ಮ ಆ ನಗು ಮತ್ತು ಹಸ್ತಲಾಘವ ಆತ್ಮೀಯವಾಗಿತ್ತು. ನಾನು ನಿಮ್ಮನ್ನು ಮತ್ತೊಮ್ಮೆ ಭೇಟಿಯಾಗಲು ಇಚ್ಚಿಸುತ್ತೇನೆ' ಎಂದು ಮೋದಿ ಅವರಿಗೆ ಟ್ಯಾಗ್​ ಮಾಡಿ ಪೋಸ್ಟ್​ ಹಂಚಿಕೊಂಡಿದ್ದಾರೆ.

  • An honor to speak so passionately and warmly about the release of cheetahs on your birthday, Sir @narendramodi. Thank you for your infectious smile and firm handshake.
    I really look forward to seeing you again, Sir! 🙏🏽 pic.twitter.com/9gEe3e1wwV

    — Kevin Pietersen🦏 (@KP24) March 3, 2023 " class="align-text-top noRightClick twitterSection" data=" ">

ಮೊದಿ ಕಳೆದ ವರ್ಷ ತಮ್ಮ 72ನೇ ಜನ್ಮದಿನದ ಸಂದರ್ಭದಲ್ಲಿ ನಮೀಬಿಯಾದಿಂದ ತರಲಾದ ಚೀತಾಗಳನ್ನು ಮಧ್ಯ ಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಬಿಟ್ಟರು. ಏಳು ದಶಕಗಳ ಹಿಂದೆ ಭಾರತದಲ್ಲಿ ಚೀತಾಗಳು ಅಳಿವು ಹೊಂದಿದ್ದವು. ದೇಶದಲ್ಲಿ ಚೀತಾಗಳ ಸಂತತಿಯನ್ನು ಬೆಳೆಸುವ ಉದ್ದೇಶದಿಂದ ‘ಚೀತಾ ಯೋಜನೆ’ ಅಡಿ ವಿದೇಶದಿಂದ ತಂದು ಅರಣ್ಯದಲ್ಲಿ ಬಿಟ್ಟು ಸಾಕಲಾಗುತ್ತಿದೆ.

ಮೋದಿ ಅವರ ಜನ್ಮದಿನದಂದು 8 ಚೀತಾಗಳನ್ನು (ಐದು ಹೆಣ್ಣು ಮತ್ತು ಮೂರು ಗಂಡು) ನಮೀಬಿಯಾದಿಂದ ಗ್ವಾಲಿಯರ್‌ಗೆ ಬೋಯಿಂಗ್ ವಿಮಾನದಲ್ಲಿ ಕರೆತರಲಾಗಿತ್ತು. ನಂತರ 12 ಚಿರತೆಗಳನ್ನು ಅರಣ್ಯಗಳಿಗೆ ಬಿಡಲಾಯಿತು. ಇದರಿಂದ ಒಟ್ಟು ಕುನೊ ರಾಷ್ಟ್ರೀಯ ಉದ್ಯಾನದಕ್ಕೆ 20 ಚೀತಾಗಳನ್ನು ಬಿಡಲಾಗಿದೆ. ಯೋಜನೆಯ ಪ್ರಕಾರ ಇನ್ನಷ್ಟೂ ಚೀತಾಗಳನ್ನು ತರಿಸುವ ಬಗ್ಗೆ ಸರ್ಕಾರ ಚಿಂತಿಸಿದೆ.

  • Thank you for the most wonderful welcoming this morning, Mr @AmitShah. Fascinating conversation. Kind, caring and inspirational man! Thank you! 🙏🏽 pic.twitter.com/qQJVdEBiua

    — Kevin Pietersen🦏 (@KP24) March 2, 2023 " class="align-text-top noRightClick twitterSection" data=" ">

ಮಾರ್ಚ್​ 2ರಂದು ಭಾರತಕ್ಕೆ ಬಂದಿಳಿದ ಕೆವಿನ್ ಪೀಟರ್ಸನ್ ಹಿಂದಿಯಲ್ಲಿ ಈ ಬಗ್ಗೆ ಟ್ವೀಟ್​​ ಮಾಡಿದ್ದರು. ಅವರು' ಭಾರತದಲ್ಲಿರಲು ಯಾವಾಗಲೂ ಉತ್ಸುಕನಾಗಿದ್ದೇನೆ. ವಿಶ್ವದ ಅತ್ಯುತ್ತಮ ಆತಿಥ್ಯದೊಂದಿಗೆ ನಾನು ಪ್ರೀತಿಸುವ ದೇಶ. ವಿಶ್ವದ ನನ್ನ ನೆಚ್ಚಿನ ನಗರಗಳಲ್ಲಿ ಒಂದಾದ ದೆಹಲಿಯಲ್ಲಿ ಕೆಲವು ದಿನಗಳನ್ನು ಕಳೆಯುತ್ತಿದ್ದೇನೆ' ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.

ಮಾರ್ಚ್​ 2 ರಂದು ಬೆಳಗ್ಗೆ ಗೃಹ ಮಂತ್ರಿ ಅಮಿತ್​ ಶಾ ಅವರನ್ನು ಭೇಟಿಯಾದ ಕೆವಿನ್​ ಟ್ವಿಟರ್​ನಲ್ಲಿ,' ಈ ಬೆಳಗ್ಗೆ ಅತ್ಯಂತ ಅದ್ಭುತವಾದ ಸ್ವಾಗತ ಮಾಡಿದ ಅಮಿತ್ ಶಾ ಅವರಿಗೆ ಧನ್ಯವಾದ. ನಿಮ್ಮೊಂದಿಗಿನ ಮಾತುಕತೆ ಮತ್ತು ಕಳೆದ ಸಮಯಕ್ಕೆ ನಾನು ಆಬಾರಿ, ನಿಮ್ಮ ಮಾತು ಮತ್ತು ಸ್ಪೂರ್ತಿದಾಯಕ ವ್ಯಕ್ತಿತ್ವ ನಾನು ಮಾರು ಹೋಗಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

  • भारत में होने के लिए हमेशा बहुत उत्साहित हूं। एक ऐसा देश जिसे मैं दुनिया की बेहतरीन मेहमाननवाजी से प्यार करता हूं। दिल्ली में कुछ दिन बिताना जो दुनिया के मेरे पसंदीदा शहरों में से एक है! 🙏🏽

ಅಮಿತ್​ ಶಾ ಕೆವಿನ್​ ಭೇಟಿಯ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿದ್ದು,' ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೆವಿನ್​ ಪೀಟರ್​ ಸನ್ ಭೇಟಿಯಾದರು. ಅವರೊಂದಿಗೆ ವ್ಯಾಪಕವಾದ ವಿಷಯಗಳ ಕುರಿತು ಆಕರ್ಷಕವಾಗಿ ಸಂವಾದ ನಡೆಸಿದೆವು' ಎಂದು ಬರೆದುಕೊಂಡಿದ್ದಾರೆ.

ಪೀಟರ್ಸನ್ ವನ್ಯಜೀವಿಗಳನ್ನು ಉಳಿಸುವಲ್ಲಿ ಮತ್ತು ರಕ್ಷಿಸುವಲ್ಲಿ ಸಕ್ರಿಯವಾಗಿದ್ದಾರೆ. ಆಫ್ರಿಕಾದಲ್ಲಿ ಘೇಂಡಾಮೃಗಗಳನ್ನು ಉಳಿಸುವ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪೀಟರ್ಸನ್ ಅವರು ಕ್ರಿಕೆಟಿಗರಾಗಿ ಅದ್ಭುತ ವೃತ್ತಿಜೀವನವನ್ನು ಹೊಂದಿದ್ದರು, ಇದರಲ್ಲಿ ಅವರು ಇಂಗ್ಲೆಂಡ್ ಪರ 104 ಟೆಸ್ಟ್, 136 ಏಕದಿನ ಮತ್ತು 37 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು 47.29 ಸರಾಸರಿಯಲ್ಲಿ 8181 ರನ್ ಗಳಿಸಿದರು. ಏಕದಿನ ಮತ್ತು ಟಿ20ಯಲ್ಲಿ ಕ್ರಮವಾಗಿ 4440 ರನ್ ಮತ್ತು 1176 ರನ್‌ ಗಳಿಸಿದ್ದಾರೆ. ಐಪಿಎಲ್‌ನಲ್ಲಿ 36 ಪಂದ್ಯಗಳನ್ನು ಆಡಿರುವ ಕೆವಿನ್​ 1001 ರನ್ ಗಳಿಸಿದ್ದಾರೆ.

ಇದನ್ನೂ ಓದಿ: ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ 12 ಚೀತಾಗಳು.. ಮೋದಿಗೆ ಧನ್ಯವಾದ ತಿಳಿಸಿದ ಸಿಎಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.