ETV Bharat / sports

ತಂಡದಲ್ಲಿ 3 ಸ್ಥಾನ ಖಾಲಿ ಇವೆ, ಹಣವಿದ್ದರೂ ಕರ್ನಾಟಕದ ಯುವ ಪ್ರತಿಭೆಗಳಿಗೆ ಅವಕಾಶ ನೀಡದ RCB! - ಕರ್ನಾಟಕ ಆಟಗಾರರು ಆರ್​ಸಿಬಿ

ಆರ್​ಸಿಬಿ ತನ್ನ ಬಳಿ ಉಳಿಸಿಕೊಂಡಿರುವ 1.55 ಕೋಟಿ ರೂ. ಗಳಲ್ಲಿ ಕೇವಲ 20 ಲಕ್ಷ ಮೂಲ ಬೆಲೆಯಿದ್ದ ವೈಶಾಕ್​ ವಿಜಯ್​ ಕುಮಾರ್, ವಿದ್ಯಾದರ್​ ಪಾಟೀಲ್​, ರೋಹನ್ ಕಡಮ್​, ರೋನಿತ್ ಮೋರೆ ಅಂತಹ ಪ್ರತಿಭೆಗಳಿಗೆ ಅವಕಾಶ ನೀಡಬಹುದಿತ್ತು..

Karnataka fans angry on RCB not showing interest to buy local players
ರಾಯಲ್ ಚಾಲೆಂಜರ್ಸ್ ಬೆಂಗಳೂರು
author img

By

Published : Feb 14, 2022, 6:44 PM IST

ಬೆಂಗಳೂರು : ಐಪಿಎಲ್ ಮೆಗಾ ಹರಾಜಿನಲ್ಲಿ ಎಂದಿನಂತೆ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಸ್ಥಳೀಯ ಆಟಗಾರರನ್ನು ಕಡೆಗಣಿಸಿ ಕೊನೆಯಲ್ಲಿ ಶಾಸ್ತ್ರಕ್ಕೆ ಎಂಬಂತೆ ಇಬ್ಬರು ಆಟಗಾರರನ್ನು ಖರೀದಿಸಿದೆ.

ಆದರೆ, ತಂಡದಲ್ಲಿ 25 ಆಟಗಾರರ ಬದಲಾಗಿ 22 ಆಟಗಾರರನ್ನು ಮಾತ್ರ ಖರೀದಿಸಿರುವ ಫ್ರಾಂಚೈಸಿ, ತನ್ನ ಬಳಿ ಹಣವಿದ್ದರೂ ಕೂಡ ಕರ್ನಾಟಕ ಆಟಗಾರರನ್ನು ಖರೀದಿಸದಿರುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

ತಂಡದಲ್ಲಿ 25 ಆಟಗಾರರನ್ನು ಖರೀದಿಸಲು ಅವಕಾಶವಿದೆ. ಆದರೆ, ಆರ್​ಸಿಬಿ 3 ಆಟಗಾರರನ್ನು ರಿಟೈನ್​ ಮಾಡಿಕೊಂಡಿದೆ. ಮೆಗಾ ಹರಾಜಿನಲ್ಲಿ 19 ಆಟಗಾರರನ್ನು ಖರೀದಿಸಿದೆ.

ಇನ್ನು ಮೂವರು ಆಟಗಾರರನ್ನು ಖರೀದಿಸುವ ಅವಕಾಶ ಮತ್ತು 1.55 ಕೋಟಿ ರೂ. ಹಣವಿದ್ದರೂ ಸ್ಥಳೀಯ ಪ್ರತಿಭೆಗಳಿಗೆ ಮಣೆ ಹಾಕಿಲ್ಲ. ಇದಕ್ಕೆ ಕೆಲವು ಕರ್ನಾಟಕದ ಮಾಜಿ ಕ್ರಿಕೆಟಿಗರು ಸೇರಿದಂತೆ ಅಭಿಮಾನಿಗಳು ಆರ್​ಸಿಬಿ ಫ್ರಾಂಚೈಸಿಗೆ ಛೀಮಾರಿ ಹಾಕಿದ್ದಾರೆ.

  • #RCB talent scouts clearly don’t track Karnataka players.. case to point: the lack of interest in Abhinav Manohar. #IPLAuction

    — Manuja (@manujaveerappa) February 12, 2022 " class="align-text-top noRightClick twitterSection" data=" ">

ಆರ್​ಸಿಬಿ ತನ್ನ ಬಳಿ ಉಳಿಸಿಕೊಂಡಿರುವ 1.55 ಕೋಟಿ ರೂ. ಗಳಲ್ಲಿ ಕೇವಲ 20 ಲಕ್ಷ ಮೂಲ ಬೆಲೆಯಿದ್ದ ವೈಶಾಕ್​ ವಿಜಯ್​ ಕುಮಾರ್, ವಿದ್ಯಾದರ್​ ಪಾಟೀಲ್​, ರೋಹನ್ ಕಡಮ್​, ರೋನಿತ್ ಮೋರೆ ಅಂತಹ ಪ್ರತಿಭೆಗಳಿಗೆ ಅವಕಾಶ ನೀಡಬಹುದಿತ್ತು.

ಆದರೆ, ಆರ್​ಸಿಬಿ ಸ್ಕೌಟ್ಸ್​ನಲ್ಲಿರುವವರು ಕರ್ನಾಟಕ ಪ್ರತಿನಿಧಿಸುವ ಯಾವುದೇ ಒಬ್ಬ ಆಟಗಾರನನ್ನು ಬಿಡ್​ ಮಾಡಲು ಕೂಡ ಹೋಗದಿರುವುದು ನಿಜಕ್ಕೂ ಆಶ್ಚರ್ಯ ತಂದಿದೆ. ತಂಡದಲ್ಲಿ ಅವಕಾಶ ಇದ್ದಾಗಲೂ ಸ್ಥಳೀಯ ಆಟಗಾರರರಿಗೆ ಮನ್ನಣೆ ನೀಡದಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

  • Why does RCB deliberately not bid for Karnataka players? If they don’t want to even bid for Manish, Manohar and Prasidh, something is seriously amiss. This is happening for decades. Ridiculous #DoddaMathu #CricketTwitter #IPLAuction

    — ದೊಡ್ಡ ಗಣೇಶ್ | Dodda Ganesh (@doddaganesha) February 12, 2022 " class="align-text-top noRightClick twitterSection" data=" ">

ಬೇರೆ ಫ್ರಾಂಚೈಸಿಗಳು ತಮ್ಮ ರಾಜ್ಯವನ್ನು ಪ್ರತಿನಿಧಿಸುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಿ ಅವರು ಗುರುತಿಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುತ್ತವೆ. ಆದರೆ, ಆರ್​ಸಿಬಿ ಕಳೆದ ಕೆಲವು ವರ್ಷಗಳಿಂದಲೂ ಕರ್ನಾಟಕದ ಆಟಗಾರರಿಗೆ ಹೆಚ್ಚಿನ ಮನ್ನಣೆ ನೀಡದಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಭವಿಷ್ಯದ ತಾರೆ ಚೇತನ್​ ಸಕಾರಿಯಾರನ್ನ 4.2 ಕೋಟಿ ರೂ ನೀಡಿ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.