ETV Bharat / sports

Vijay Hazare Trophy : ರಾಜಸ್ಥಾನ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಕರ್ನಾಟಕ​ - ಮನೀಶ್ ಪಾಂಡೆ

ಕರ್ನಾಟಕ ಪರ ವಿಜಯ್​ಕುಮಾರ್ ವೈಶಾಕ್​ 22ಕ್ಕೆ 4, ಕೆ ಗೌತಮ್​ 61ಕ್ಕೆ 2, ವೆಂಕಟೇಶ್​ ಮುರುಳೀಧರ 56ಕ್ಕೆ 1, ಪ್ರಸಿಧ್​ ಕೃಷ್ಣ 17ಕ್ಕೆ 1, ಪ್ರವೀಣ್ ದುಬೆ 39ಕ್ಕೆ 1 ವಿಕೆಟ್ ಪಡೆದು ರಾಜಸ್ಥಾನ್ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು..

Karnataka enter Quarter final in Vijaya Hazare trophy
ರಾಜಸ್ಥಾನ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಕರ್ನಾಟಕ​
author img

By

Published : Dec 19, 2021, 5:01 PM IST

ಜೈಪುರ : ಆಲ್​ರೌಂಡ್ ಪ್ರದರ್ಶನದ ನೆರವಿನಿಂದ ಕರ್ನಾಟಕ ತಂಡ ವಿಜಯ ಹಜಾರೆ ಫ್ರೀ ಕ್ವಾರ್ಟರ್​ ಫೈನಲ್​​ನಲ್ಲಿ ರಾಜಸ್ಥಾನ್ ವಿರುದ್ಧ 8 ವಿಕೆಟ್‌ಗಳ ಗೆಲುವು ಸಾಧಿಸಿ 8ರ ಘಟ್ಟಕ್ಕೆ ಪ್ರವೇಶಿಸಿದೆ. ಜೈಪುರದ ಕೆಎಲ್ ಸೈನಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​​ ಗೆದ್ದ ಕರ್ನಾಟಕ ತಂಡ ರಾಜಸ್ಥಾನವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿ 199 ರನ್​​ಗಳಿಗೆ ಆಲೌಟ್ ಮಾಡಿತು.

ರಾಜಸ್ಥಾನ ತಂಡದ ನಾಯಕ ದೀಪಕ್ ಹೂಡ 109 ಎಸೆತಗಳಲ್ಲಿ 9 ಬೌಂಡರಿ ಮತ್ತು 5 ಸಿಕ್ಸರ್​ಗಳ ಸಹಿತ 109 ರನ್​ಗಳಿಸಿ ಏಕಾಂಗಿ ಹೋರಾಟ ನಡೆಸಿದರು. ಇವರನ್ನು ಬಿಟ್ಟರೆ ಸಮರ್ಪಿತ್ ಜೋಶಿ 33 ಮತ್ತು ರವಿ ಬಿಷ್ಣೋಯ್​ 17 ರನ್​ಗಳಿಸಿದ್ದೇ ತಂಡದ ಗರಿಷ್ಠ ಸ್ಕೋರ್​​. ಉಳಿದೆಲ್ಲಾ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.

ಕರ್ನಾಟಕ ಪರ ವಿಜಯ್​ಕುಮಾರ್ ವೈಶಾಕ್​ 22ಕ್ಕೆ 4, ಕೆ ಗೌತಮ್​ 61ಕ್ಕೆ 2, ವೆಂಕಟೇಶ್​ ಮುರುಳೀಧರ 56ಕ್ಕೆ 1, ಪ್ರಸಿಧ್​ ಕೃಷ್ಣ 17ಕ್ಕೆ 1, ಪ್ರವೀಣ್ ದುಬೆ 39ಕ್ಕೆ 1 ವಿಕೆಟ್ ಪಡೆದು ರಾಜಸ್ಥಾನ್ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

200 ರನ್​ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿ ಕರ್ನಾಟಕ ತಂಡ 43.4 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ರವಿಕುಮಾರ್ ಸಮರ್ಥ್​ 54, ಕೃಷ್ಣಮೂರ್ತಿ ಸಿದ್ಧಾರ್ಥ್​ ಅಜೇಯ 85 ಮತ್ತು ನಾಯಕ ಮನೀಶ್ ಪಾಂಡೆ ಅಜೇಯ 52 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಕರ್ನಾಟಕ ತಂಡ ಕ್ವಾರ್ಟರ್ ಫೈನಲ್​ ಪಂದ್ಯದಲ್ಲಿ ಲೀಗ್​ ಹಂತದಲ್ಲಿ ಸೋಲು ಕಂಡಿದ್ದ ತಮಿಳುನಾಡು ವಿರುದ್ಧ ಕಣಕ್ಕಿಳಿಯಲಿದೆ.

ಇದನ್ನೂ ಓದಿ: 2ನೇ ಆ್ಯಶಸ್​ ಟೆಸ್ಟ್​ : ಇಂಗ್ಲೆಂಡ್​ 468 ರನ್​ಗಳ ಬೃಹತ್ ಗುರಿ ನೀಡಿ ಆಸ್ಟ್ರೇಲಿಯಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.