ಲೀಡ್ಸ್: ಭಾರತದ ಯುವ ಬ್ಯಾಟರ್ ಜಮಿಮಾ ರೋಡ್ರಿಗಸ್ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್ನಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಫಾರ್ಮ್ಗೆ ಮರಳಿದ್ದಾರೆ.
ದಿ ಹಂಡ್ರೆಡ್ ಲೀಗ್ನಲ್ಲಿ ನಾರ್ಥರ್ನ್ ಸೂಪರ್ ಚಾರ್ಜಸ್ ತಂಡದ ಪರ ಆಡುವ ಜಮಿಮಾ ವೆಲ್ಸ್ ಫೈರ್ ವುಮೆನ್ ತಂಡದ ವಿರುದ್ಧ ಕೇವಲ 43 ಎಸೆತಗಳಲ್ಲಿ 43 ಬೌಂಡರಿಗಳ ಸಹಿತ ಅಜೇಯ 92 ರನ್ಗಳಿಸಿ ತಂಡಕ್ಕೆ 6 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟಿದ್ದಾರೆ. ಇವರ ಇನ್ನಿಂಗ್ಸ್ನಲ್ಲಿ 17 ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡಿದ್ದವು.
ಮೊದಲು ಬ್ಯಾಟಿಂಗ್ ಮಾಡಿದ್ದ ವೆಲ್ಸ್ ಫೈರ್ ತಂಡ 100 ಎಸೆತಗಳಲ್ಲಿ 8 ವಿಕೆಟ್ ಕಳೆದುಕೊಂಡು 130 ರನ್ಗಳಿಸಿತ್ತು. ಹೇಲಿ ಮ್ಯಾಥ್ಯೂಸ್ 30 , ಸಾರಾ ಟೇಲರ್ 18, ಬ್ರಿಯೋನಿ ಸ್ಮಿತ್ 19 ರನ್ಗಳಿಸಿದ್ದರು.
-
🏏 @JemiRodrigues for Northern Superchargers:
— The Hundred (@thehundred) July 24, 2021 " class="align-text-top noRightClick twitterSection" data="
4️⃣3️⃣ balls
9️⃣2️⃣ runs
Inspiring the next generation 🌟 pic.twitter.com/LN8ZJztp7u
">🏏 @JemiRodrigues for Northern Superchargers:
— The Hundred (@thehundred) July 24, 2021
4️⃣3️⃣ balls
9️⃣2️⃣ runs
Inspiring the next generation 🌟 pic.twitter.com/LN8ZJztp7u🏏 @JemiRodrigues for Northern Superchargers:
— The Hundred (@thehundred) July 24, 2021
4️⃣3️⃣ balls
9️⃣2️⃣ runs
Inspiring the next generation 🌟 pic.twitter.com/LN8ZJztp7u
ನಾರ್ಥರ್ನ್ ಸೂಪರ್ ಚಾರ್ಜಸ್ 131 ರನ್ಗಳ ಗುರಿಯನ್ನು 4 ವಿಕೆಟ್ ಕಳೆದುಕೊಂಡು ಇನ್ನು 15 ಎಸೆತಗಳಿರುವಂತೆ ತಲುಪಿತು. ತಮ್ಮ ಸ್ಪೋಟಕ ಮತ್ತು ಗೆಲುವಿನ ಇನ್ನಿಂಗ್ಸ್ಗಾಗಿ ಜೆಮಿಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಇದೇ ಲೀಗ್ನಲ್ಲಿ ಭಾರತದ ಹರ್ಮನ್ ಪ್ರೀತ್ ಕೌರ್ ಮ್ಯಾಂಚೆಸ್ಟರ್ ಒರಿಜಿನಲ್ಸ್ ಪರ, ಶೆಫಾಲಿ ವರ್ಮಾ ಬರ್ಮಿಂಗ್ಹ್ಯಾಮ್ ಫಿಯೋನೆಕ್ಸ್ ಪರ, ಸ್ಮೃತಿ ಮಂದಾನ ಸೌಥರ್ನ್ ಬ್ರೇವ್ ತಂಡದ ಪರ ಹಾಗೂ ದೀಪ್ತಿ ಶರ್ಮಾ ಲಂಡನ್ ಸ್ಪಿರಿಟ್ ತಂಡದ ಪರ ಆಡುತ್ತಿದ್ದಾರೆ.
ಇದನ್ನು ಓದಿ:ಕಿವೀಸ್ ಉದಯೋನ್ಮುಖ ಕ್ರಿಕೆಟಿಗನ ಬ್ಯಾಟ್ ಮೇಲೆ ವಿರಾಟ್ ಕೊಹ್ಲಿ ಹೆಸರು!